Thursday, April 10, 2025
Homeರಾಜ್ಯಮೆಟ್ರೋ, ಬಸ್, ವಿದ್ಯುತ್, ಹಾಲು, ಡೀಸೆಲ್ ಆಯ್ತು ಈಗ ನೀರಿನ ಸರದಿ, ಪ್ರತಿ ಲೀಟರ್‌ಗೆ 1...

ಮೆಟ್ರೋ, ಬಸ್, ವಿದ್ಯುತ್, ಹಾಲು, ಡೀಸೆಲ್ ಆಯ್ತು ಈಗ ನೀರಿನ ಸರದಿ, ಪ್ರತಿ ಲೀಟರ್‌ಗೆ 1 ರಿಂದ 3 ಪೈಸೆ ಹೆಚ್ಚಳ ಸಾಧ್ಯತೆ

Possibility of increase of 1 to 3 paise per liter of water

ಬೆಂಗಳೂರು, ಏ.3-ಮೆಟ್ರೋ, ಬಸ್, ವಿದ್ಯುತ್, ಹಾಲು, ಡೀಸೆಲ್ ದರ ದರ ಹೆಚ್ಚಳದ ನಂತರ ಇದೀಗ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ದರ ಪ್ರತಿ ಲೀಟರ್ ನೀರಿಗೆ 1ರಿಂದ 3 ಪೈಸೆಯಷ್ಟು ಬೆಲೆ ಹೆಚ್ಚಳವಾಗಲಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೀರಿನ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮಂಡಳಿಯ ಅಧಿಕಾರಿಗಳು ಸಿದ್ದತೆಗಳನ್ನು ನಡೆಸುತ್ತಿದ್ದು, ದರ ಹೆಚ್ಚಳ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಡಿಸಿಎಂ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಬಿಡಬ್ಲ್ಯೂಎಸ್‌ಎಸ್‌ಬಿ ನೀರಿನ ದರವನ್ನು ಲೀಟರ್‌ಗೆ ಒಂದು ಪೈಸೆ ಹೆಚ್ಚಿಸುವುದು ಅನಿವಾರ್ಯವಾಗಿದ್ದು, ಜನರ ಮೇಲೆ ಹೊರೆಯಾಗದಂತೆ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಬಿಡಬ್ಲ್ಯೂಎಸ್‌ಎಸ್‌ಬಿ ತೀವ್ರ ಒತ್ತಡದಲ್ಲಿದೆ. ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಈ ಹೆಚ್ಚಳ ಅತ್ಯಗತ್ಯವಾಗಿದೆ. ಜಲಮಂಡಳಿಗೆ ವಾರ್ಷಿಕ 1 ಸಾವಿರ ಕೋಟಿ ರೂ. ನಷ್ಟವುಂಟಾಗುತ್ತಿದೆ. ಹಾಗೆಯೇ, ಮುಂದಿನ ಹಂತದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದರೆ ದರ ಏರಿಕೆ ಅನಿವಾರ್ಯವಾಗಿದೆ.

ಅಲ್ಲದೆ, ಜನರೂ ನೀರಿನ ಪ್ರಾಮುಖ್ಯತೆ ಅರಿಯಬೇಕು. ಕಳೆದ 13 ವರ್ಷಗಳಲ್ಲಿ ಯಾವುದೇ ಹೆಚ್ಚಳವಾಗದ ಕಾರಣ ಸುಂಕವನ್ನು ಲೀಟರ್ಗೆಗೆ 7 ಪೈಸೆ ಹೆಚ್ಚಿಸಲು ಮಂಡಳಿ ಬಯಸಿತ್ತು. ಆದರೆ, ಕೇವಲ ಒಂದು ಪೈಸೆ ದರ ಹೆಚ್ಚಿಸುವಂತೆ ಅಧಿಕಾರಿಗಳ ಮನವೊಲಿಸಲಾಗಿದೆ ಎಂದರು.

RELATED ARTICLES

Latest News