ಬೆಂಗಳೂರು,ಅ. 26- ಉಪ ಚುನಾ ವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷದಿಂದ ಅಧಿಕಾರ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚನ್ನಪಟ್ಟಣದಲ್ಲಿ ಚುನಾವಣೆ ಯಾವ ರೀತಿ ಕಾಂಗ್ರೆಸ್ ನಡೆಸಬಹುದು ಎಂಬುದನ್ನು ಊಹಿಸಬಹುದಾಗಿದೆ. ಕಾಂಗ್ರೆಸ್ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.
ನಿನ್ನೆ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವ ಮುನ್ನ ನಡೆದ ರೋಡ್ ಶೋಗೆ ಜನ ಬಂದಿರುವುದಕ್ಕೆ ನಮ್ಮ ಪಕ್ಷದ ಅಧ್ಯಕ್ಷರಿಗೆ ನೋಟಿಸ್ ಕೊಟ್ಟಿದ್ದಾರೆ. ಆದರೆ, ಮೊನ್ನೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಮುನ್ನ ನಡೆದ ರೋಡ್ ಶೋನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ಮುಖಂಡರು ಭಾಗವಹಿಸಿರಲಿಲ್ಲವೇ? ಜನರು ಬರಲು ವಾಹನದ ವ್ಯವಸ್ಥೆ ಮಾಡಿರಲಿಲ್ವ? ಎಂದು ಪ್ರಶ್ನಿಸಿದರು.
ಜನ ಸ್ವಯಂ ಪ್ರೇರಿತವಾಗಿ ಬರುತ್ತಾರೆ. ಅವರ ಮೇಲೆೆ ಕೇಸ್ ಹಾಕುತ್ತಾರಾ? ನಿನ್ನೆ ಒಂದು ಕೇಸು ಹಾಕಿದ್ದಾರೆ. ಅಧಿಕಾರಿಗಳಿಗೆ ಹೇಳಿ ವಿಡಿಯೋ ಮಾಡಿಸಿಕೊಂಡಿದ್ದಾರೆ. ಚನ್ನಪಟ್ಟಣದಲ್ಲಿ ಯಾವ ರೀತಿ ಚುನಾವಣೆ ನಡೆಸಲು ಹೊರಟಿದ್ದಾರೆ. ಇದೆಲ್ಲವನ್ನೂ ನಾವು ಮೊದಲೇ ನಿರೀಕ್ಷೆ ಮಾಡಿದ್ದೆವು ನಮ್ಮ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ರೋಡ್ ಶೋನಲ್ಲಿ ಒಗ್ಗಟ್ಟಿನಿಂದ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ ಎಂದರು.
ಎನ್‌ಡಿಎ ಅಭ್ಯರ್ಥಿ ಆಯ್ಕೆ ವಿಚಾರದ ಬಗ್ಗೆ ಕೊನೆಯ ಹಂತದವರೆಗೂ ರಾಜಕೀಯ ಬೆಳವಣಿಗೆ ನಡೆಯಿತು. ಅಂತಿಮವಾಗಿ ಕೊನೆ ಗಳಿಗೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸ್ಪರ್ಧೆಗಿಳಿಸುವ ಪರಿಸ್ಥಿತಿಗೆ ಕಾಂಗ್ರೆಸ್ ನಾಯಕರೇ ದೂಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಬಾರದು ಎಂಬ ಉದ್ದೇಶ ಹೊಂದಿದ್ದರು. ಮೊನ್ನೆ ಸಾಯಂಕಾಲ ಅಭ್ಯರ್ಥಿ ಆಯ್ಕೆ ತೀರ್ಮಾನ ಮಾಡಲಾಯಿತು. ಇದರಿಂದ ಕಾರ್ಯಕರ್ತರು ಹಳ್ಳಿ ಹಳ್ಳಿಯಿಂದ ಚನ್ನಪಟ್ಟಣಕ್ಕೆ ಬಂದಿದ್ದರಿAದ ಐತಿಹಾಸಿಕ ಕಾರ್ಯಕ್ರಮ ನಡೆಯಿತು. ನಿನ್ನೆ ಉತ್ಸಾಹ ತುಂಬಿದ್ದಾರೆ.
ನಮ್ಮೆರಡೂ ಪಕ್ಷಗಳ ಕಾರ್ಯಕರ್ತರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ನಮ್ಮ ನಾಯಕರು, ಬಿಜೆಪಿ ನಾಯಕರು ಬಂದು ಶಕ್ತಿ ತುಂಬಿದ್ದಾರೆ ಎಂದು ಹೇಳಿದರು. ಎರಡು ಪಕ್ಷದ ಕಾರ್ಯಕರ್ತರು ಮೂರು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೋರಾಟ ಮಾಡುತ್ತೇವೆ. ಈಗಾಗಲೇ ನಿಖಿಲ್ ಕುಮಾರಸ್ವಾಮಿ ಶಿಗ್ಗಾಂವಿ, ಸಂಡೂರಿಗೆ ಹೋಗಿ ಬಂದಿದ್ದಾರೆ. ಮೂರೂ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಿ.ಎಂ. ಮೇಲೆ ವಾಗ್ದಾಳಿ : ಈಗಾಗಲೇ ಚನ್ನಪಟ್ಟಣ ಚುನಾವಣೆ ಗೆದ್ದಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಕುಮಾರಸ್ವಾಮಿ ಭಾವನಾತ್ಮಕ ಮತ್ತು ಕಣ್ಣೀರು ಜನಕ್ಕೆ ಬೇಸರವಾಗಿದೆ ಎಂದು ಹೇಳಿದ್ದಾರೆ. ಪಾಪ ಇವರು ಯಾವತ್ತೂ ಜನರ ಮುಂದೆ ಕಣ್ಣೀರು ಹಾಕಿಲ್ಲ. ಹೌದು ಜನರ ಕಷ್ಟ ನೋಡಿ ಬಹಳ ಕಣ್ಣೀರು ಹಾಕುತ್ತಿದ್ದೆ. ಇವತ್ತು ಇವರ ನಡುವಳಿಕೆಗಳು ಯಾವ ರೀತಿ ಇವೆ ನೋಡಿ . ಈ ಚುನಾವಣೆಯಲ್ಲಿ ಅವರು ಹಣ, ಅಧಿಕಾರ ದುರುಪಯೋಗದ ಮುಖಾಂತರ ಗೆದ್ದಾಗಿದೆ ಎಂದು ಹೊರಟಿದ್ದಾರೆ.ಅಭ್ಯರ್ಥಿ ಆಯ್ಕೆಗೆ ನಾಲ್ಕು ತಿಂಗಳು ಹೋರಾಟ ಮಾಡಿದ್ದರಾ? ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
20 ದಿನ ನಾನು ಚನ್ನಪಟ್ಟಣಕ್ಕೆ ಭೇಟಿ ಕೊಟ್ಟಿದ್ದೇನೆ ಎಂದು ಹೇಳುತ್ತೀರಿ ಅಲ್ಲವೇ? ಇವತ್ತು ಆ ಪಕ್ಷದಲ್ಲಿ ಅಭ್ಯರ್ಥಿ ಇಲ್ಲದೆ ಹೈಜಾಕ್ ಮಾಡಿಕೊಂಡು ಹೋಗಿರುವುದು. ಜೊತೆಗೆ ಇಲ್ಲಿ ಕುತಂತ್ರ ಬೇರೆ. ಇವೆಲ್ಲವನ್ನು ಜನರು ಗಮನಿಸುತ್ತಾರೆ.ಯಾರ ಬಗ್ಗೆಯೂ ನಾನು ಟೀಕೆ ಮಾಡುವುದಿಲ್ಲ. ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಚನ್ನಪಟ್ಟಣ ಜನತೆ ಬಳಿ ಮತ ಕೇಳುತ್ತೇನೆ ಎಂದು ಅವರು ಹೇಳಿದರು.