ಬೆಂಗಳೂರು, ಆ. 10– ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಹೇಳುತ್ತಿದ್ದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕುರ್ಚಿಗೆ ಕುತ್ತು ಬಂದಿದೆ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್. ಅಶೋಕ್ ಅವರು ಬೇರೆಯವರ ಭವಿಷ್ಯವನ್ನು ನೋಡುವ ಭರದಲ್ಲಿ ತಮ ಭವಿಷ್ಯವನ್ನು ಮರೆತು ಹೋದಂತೆ ಕಾಣುತ್ತಿದೆ. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸುನೀಲ್‌ಕುಮಾರ್ ಅವರನ್ನು ನೇಮಿಸಲಾಗುವುದು ಎಂಬ ಚರ್ಚೆಗಳಾಗುತ್ತಿವೆ.
ಖ್ಯಾತ ಜ್ಯೋತಿಷಿಯಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಕುರ್ಚಿಗಳ ಬಗ್ಗೆ ಅಶೋಕ್ ಭವಿಷ್ಯ ಹೇಳುತ್ತಿದ್ದರು. ಪ್ರಧಾನಮಂತ್ರಿ ಕಾರ್ಯಕ್ರಮಕ್ಕೆ ಅಶೋಕ್ ಅವರನ್ನೇ ಆಹ್ವಾನಿಸಿಲ್ಲ. ಮೊದಲ ಬಾರಿಗೆ ಶಾಸಕರಾಗಿರುವ ಯುವ ನಾಯಕ ಬಿವೈ ವಿಜೆಯೇಂದ್ರ ಅವರಿಗೆ ಆಹ್ವಾನ ಇದೆ. ಹಿರಿಯರಾದ ಆರ್.ಅಶೋಕ್ ಅವರನ್ನು ಕಡೆಗಣಿಸಿ, ಮೂಲೆಗುಂಪು ಮಾಡಲಾಗುತ್ತಿದೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಅಶೋಕ್ ಅವರ ಬಗ್ಗೆ ನಮಗೆ ಗೌರವ ಭಾವನೆ ಇದೆ. ಅದರೆ ಅವರನ್ನು ಬಿಜೆಪಿಯಲ್ಲಿ ಕಡೆಗಣನೆ ಮಾಡುತ್ತಿರುವುದು ನೋವಿನ ವಿಚಾರ. ಅಶೋಕ್ ಅಂತಹ ಹಿರಿಯರಿಗೆ ಮಾನ್ಯತೆ ಇಲ್ಲ ಎಂದ ಮೇಲೆ ಚಿಕ್ಕಬಳ್ಳಾಪುರದಲ್ಲಿ ಆತಹತ್ಯೆ ಮಾಡಿಕೊಂಡ ಬಿಜೆಪಿ ಸಂಸದರ ಕಾರು ಚಾಲಕನಿಗೆ ಬಿಜೆಪಿಯಂದ ನ್ಯಾಯ ಸಿಗುತ್ತದೆ ಎಂದು ಅವರು ಪ್ರಶ್ನಿಸಿದರು.
ಛಲುವಾದಿ ನಾರಾಯಣ ಸ್ವಾಮಿ ದಲಿತರ ಬಗ್ಗೆ ಹೆಚ್ಚು ಮಾತನಾಡುತ್ತಾರೆ, ಚಿಕ್ಕಬಳ್ಳಾಪುರದಲ್ಲಿ ದಲಿತ ಹುಡುಗನೊಬ್ಬನ ಆತಹತ್ಯೆಯಾಗಿದೆ. ಈವರೆಗೂ ಏಕೆ ಅವರ ಮನೆಗೆ ಬಂದಿಲ್ಲ ಎಂದು ಪ್ರಶ್ನಿಸಿದರು.
ಸಂಸದ ಡಾ. ಕೆ.ಸುಧಾಕರ್ ಒಕ್ಕಲಿಗ, ಕುರುಬ, ಎಸ್‌ಸಿಎಸ್ಟಿ ಸಮುದಾಯದ ಅನೇಕರನ್ನು ತುಳಿದಿದ್ದಾರೆ, ಕಿರುಕುಳ ನೀಡಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಜೈಲಿಗೆ ಹಾಕಿಸಿದ್ದಾರೆ. ಸಂಸದರ ಕಿರುಕುಳದಿಂದ ಬೇಸತ್ತು ತಿರುಗಿ ಬಿದ್ದವರು ಇಂದು ರಾಜಕೀಯದಲ್ಲಿ ಮುನ್ನಲೆಗೆ ಬಂದು ಶಾಸಕರಾಗಿದ್ದಾರೆ ಎಂದು ಹೆಳಿದರು.
ನಾನು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದರೆ ಇಷ್ಟೊತ್ತಿಗೆ ಸುಧಾಕರ್ ಅವರು ಜೈಲಿನಲ್ಲಿರುತ್ತಿದ್ದರು. ವಯಸ್ಸಿನಲ್ಲಿ ಚಿಕ್ಕವನಾಗಿದ್ದರೂ, ದೊಡ್ಡದಾಗಿ ಯೋಚಿಸಲು ನನಗೆ ಗೊತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮಂತ್ರಿಯವರು ಅವರದೇ ಪಕ್ಷದ ಸಂಸದರ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಆಗ್ರಹಿಸಿದ್ದರು.
- 3 ಮಕ್ಕಳೊಂದಿಗೆ ಕಾಲುವೆಗೆ ಹಾರಿ ಮಹಿಳೆ ಆತ್ಮಹತ್ಯೆ
- ರಫ್ತು ಹೆಚ್ಚಳ, ಅಮದು ಕಡಿಮೆ ಮಾಡುವ ಅವಶ್ಯಕತೆ ಇದೆ ; ನಿತಿನ್ ಗಡ್ಕರಿ
- ಇಂಡಿಯಾ ಬ್ಲಾಕ್ ಸಂಸದರಿಗೆ ಮಲ್ಲಿಕಾರ್ಜುನ್ ಖರ್ಗೆ ಭೋಜನಕೂಟ
- ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ವಾಯುಪ್ರದೇಶ ನಿಷೇಧಿಸಿ ಭಾರಿ ನಷ್ಟ ಅನುಭವಿಸಿದ ಪಾಕ್
- ಮಂಗಳವಾರ ಪಾಕ್ ಮಾಜಿ ಪ್ರಧಾನಿ ಇಮ್ರಾನ್ಖಾನ್ ಜಾಮೀನು ಅರ್ಜಿ ವಿಚಾರಣೆ