Friday, November 22, 2024
Homeರಾಷ್ಟ್ರೀಯ | Nationalಶ್ರೀಘ್ರದಲ್ಲೇ ಮಹದಾಯಿ ಯೋಜನೆ ಜಾರಿ : ಪ್ರಹ್ಲಾದ್‌ ಜೋಷಿ

ಶ್ರೀಘ್ರದಲ್ಲೇ ಮಹದಾಯಿ ಯೋಜನೆ ಜಾರಿ : ಪ್ರಹ್ಲಾದ್‌ ಜೋಷಿ

ಹುಬ್ಬಳ್ಳಿ,ಜು.6- ಮಹದಾಯಿ ಯೋಜನೆ ಶೀಘ್ರ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆಗೆ ಅಡ್ಡಿಪಡಿಸುವ ಯಾವುದೇ ಕೆಲಸವಾಗಿಲ್ಲ. ಆದಷ್ಟು ಬೇಗ ಯೋಜನೆ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಮಹದಾಯಿ ಯೋಜನೆ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಯೋಜನಾ ಸ್ಥಳಕ್ಕೆ ಗೋವಾ ತಂಡ ಭೇಟಿ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇದೊಂದು ಜಲವಿವಾದಕ್ಕೆ ಸಂಬಂಧಿಸಿದ ತಂಡ ಅಷ್ಟೆ. ಯಾವುದೇ ಜಲ ವಿವಾದ ಇದ್ದರೂ ಪರಿಶೀಲನೆ ಮಾಡುತ್ತದೆ ಎಂದರು.

ನಾಳೆ ಮಹದಾಯಿ ಜಲಾಯನ ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವ ಪರಿಶೀಲನೆ ನಡೆಸುತ್ತದೆ. ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಇದರ ಮುಂದಾಳತ್ವ ವಹಿಸಿಲ್ಲ. ಕಳಸಾ ಬಂಡೂರಿಗೆ ಒಳಪಟ್ಟ 12 ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಇಂದು ಸಂಜೆ 6ಕ್ಕೆ ಬೆಳಗಾವಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಯಾವುದೇ ಸರ್ಕಾರದ ಪಾತ್ರ ಇದರಲ್ಲಿ ಇಲ್ಲ. ಮಹದಾಯಿ ನದಿನೀರು ಹಂಚಿಕೆ ಮಾಡಿ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಇದರ ಅನ್ವಯ ಹಂಚಿಕೆಯ ನೀರನ್ನು ಬಳಸಲು ಪರಾವನಗಿ ಸಿಕ್ಕಿದೆ. ಕಳಸಾ ಪ್ರದೇಶದಲ್ಲಿ ಅರಣ್ಯ ಪ್ರದೇಶ ಕುರಿತು ಸಹ ಪರಿಶೀಲನೆ ಆಗಲಿದೆ ಎಂದು ಅವರು ಹೇಳಿದರು.

ಮುಡಾ ಹಗರಣ : ಸಿಬಿಐ ತನಿಖೆಗೆ ಒತ್ತಾಯ
ಮುಡಾ ಹಗರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಆಗಿದ್ದು, ಸಿಬಿಐ ತನಿಖೆಗೆ ವಹಿಸಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಒತ್ತಾಯಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014 ರಿಂದ 2018 ರಲ್ಲಿ ಇದರ ಪ್ರಮುಖ ಬೆಳವಣಿಗೆಗಳು ನಡೆದಿವೆ.

ಏನೂ ಅಕ್ರಮವಾಗಿಲ್ಲ ಎಂದರೆ ತರಾತುರಿಯಲ್ಲಿ ಜಿಲ್ಲಾಧಿಕಾರಿಯನ್ನು ಏಕೆ ವರ್ಗಾವಣೆ ಮಾಡಿದ್ದೀರಿ? ಸಿಎಂ ಸಿದ್ದರಾಮಯ್ಯ ಮತ್ತು ಅವರ ಮಗನ ಅನುಮತಿ ಇಲ್ಲದೆ ಇದು ನಡೆಯಲು ಸಾಧ್ಯವಿಲ್ಲ. ಸ್ವಂತಕ್ಕೆ ಲಾಭ ಮಾಡಿಕೊಳ್ಳಲು ನಡೆದ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಇದಾಗಿದೆ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿಬೇಕು ಎಂದು ಹೇಳಿದರು.

ಇದನ್ನು ಮಾಡದಿದ್ದರೆ ಸಿಎಂ ಸಿದ್ದರಾಮಯ್ಯ ನಾನು ಲೋಹಿಯಾ ವಾದಿ, ಸಮಾಜವಾದಿ ಎಂದು ಹೇಳಿಕೊಳ್ಳಲು ಅರ್ಹರಲ್ಲ. ಮುಡಾ ಮತ್ತು ವಾಲೀಕಿ ನಿಗಮ ಹಗರಣದಲ್ಲಿ ನೇರವಾಗಿ ಸಿಎಂ ಭಾಗಿಯಾಗಿದ್ದಾರೆ ಎನ್ನುವುದು ನನ್ನದು ಬಲವಾದ ಆರೋಪ. ಪ್ರಕರಣ ಮುಚ್ಚಿ ಹಾಕಲು ತರಾತುರಿಯಲ್ಲಿ ಅವರಿವರನ್ನು ಎಸ್‌‍ಐಟಿ ಬಂಧನ ಮಾಡಲಾಗುತ್ತಿದೆ ಎಂದು ಹೇಳಿದರು.

ಇಷ್ಟು ದಿನ ನಾಗೇಂದ್ರ ತಪ್ಪಿಸಿಕೊಳ್ಳಲು ಅವಕಾಶ ನೀಡಿ, ಈಗ ನೋಟಿಸ್‌‍ ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಅತ್ಯಂತ ಭ್ರಷ್ಟಾಚಾರದ ಸರ್ಕಾರ. ಭ್ರಷ್ಟಾಚಾರ ನಡೆಸಲು ಹೊಸ ಹೊಸ ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯತ್ತ ಸಾಗುತ್ತಿದೆ. ಇದರಲ್ಲೂ ಭ್ರಷ್ಟಾಚಾರ ಹೇಗೆ ಮಾಡಬೇಕು ಅಂತ ಸಿಎಂಗೆ ಗೊತ್ತು ಎಂದು ಗರಂ ಆದರು.

ಇನ್ನು ಬಣವೆಗೆ ಬೆಂಕಿ ಹತ್ತಿದಾಗ ಅದರಲ್ಲಿ ಬಿಡಿ ಅಥವಾ ಸಿಗರೇಟ್‌ ಹೇಗೆ ಹಚ್ಚಬೇಕು ಎನ್ನುವುದು ಸಿದ್ದರಾಮಯ್ಯ ಚೆನ್ನಾಗಿ ಗೊತ್ತು. ತಮ ಕೊನೆಯ ಅವಧಿ ಎಂದು ತಿಳಿದು ಭ್ರಷ್ಟಾಚಾರದ ಪರಮಾವಧಿಗೆ ಸಿದ್ದರಾಮಯ್ಯ ತಲುಪುತ್ತಿದ್ದಾರೆ. ಡಿಸಿ ವರ್ಗಾವಣೆ ಮಾಡಿದ್ದು ಭ್ರಷ್ಟಾಚಾರಕ್ಕೆ ಸಾಕ್ಷಿ. ಸಿದ್ದರಾಮಯ್ಯ ಪರಿಹಾರ ಕಾನೂನು ಪ್ರಕಾರ ತೆಗೆದುಕೊಳ್ಳಬೇಕಿತ್ತು ಎಂದರು.

ಸಿಬಿಐ ಬಗ್ಗೆ ಸಿದ್ದರಾಮಯ್ಯ ಅಷ್ಟು ಭಯ ಏಕೆ?, ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿದ್ದು ಇದೆ ಮೊದಲಲ್ಲಾ. ಸಿಎಂ ಸಿದ್ದರಾಮಯ್ಯ ಈ ಹಿಂದೆಯೂ ಡಿನೋಟಿೇಕಷನ್‌ ಮಾಡಿದರು. ಆದರೆ ಅದರಿಂದ ಅವರು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

RELATED ARTICLES

Latest News