Friday, November 22, 2024
Homeರಾಜ್ಯಖರ್ಗೆ ತವರಲ್ಲೇ ಪರೀಕ್ಷಾ ಅಕ್ರಮ ನಡೆದದ್ದೇ ಹೇಗೆ..? : ಜೋಶಿ

ಖರ್ಗೆ ತವರಲ್ಲೇ ಪರೀಕ್ಷಾ ಅಕ್ರಮ ನಡೆದದ್ದೇ ಹೇಗೆ..? : ಜೋಶಿ

ಹುಬ್ಬಳ್ಳಿ,ಅ.29- ನಮ್ಮ ಸರ್ಕಾರದಲ್ಲಿ ಪಿಎಸ್‍ಐ ಹಗರಣ ಹೊರಬಂತು. ನಾವು ಐಜಿ ಅವರನ್ನೆ ಜೈಲಿಗೆ ಕಳುಹಿಸಿದೆವು. ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಗಟ್ಟಲು ಸಾಕಷ್ಟು ತಂತ್ರಜ್ಞಾನ ಬಂದಿದೆ. ಆದರೆ, ಯಾಕೆ ಹೀಗೆ ಆಯಿತು. ಅದು ಮಲ್ಲಿಕಾರ್ಜುನ ಖರ್ಗೆ ಅವರ ಜಿಲ್ಲೆಯಲ್ಲಿಯೇ ಯಾಕೆ ಈ ಸ್ಕ್ಯಾಮ್ ಆಗುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.

ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪರೀಕ್ಷಾ ಅಕ್ರಮಗಳು ಕಲಬುರಗಿಯಲ್ಲೇ ಯಾಕೆ ಆಗುತ್ತಿದೆ ಎಂಬುವುದನ್ನು ತಿಳಸಬೇಕು ಎಂದರು. ಕಾಂಗ್ರೆಸ್ ಪಾರ್ಟಿ ಗೊಂದಲದಿಂದ ರಾಜ್ಯದ ಜನ ಅಂತಂತ್ರ ವಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ . ಇನ್ನೂ ಎರಡು ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟಿದ್ದಾರೆ. ಉಪ ಮುಖ್ಯಮಂತ್ರಿ ಶಿವಕುಮಾರ್ ಬಿಟ್ಟು ಸಭೆ ಮಾಡುವ ಸ್ಥಿತಿಗೆ ಸಿದ್ದರಾಮಯ್ಯ ತಲುಪಿದ್ದಾರೆ. ಇದು ರಾಜಕೀಯ ಹೈಡ್ರಾಮಾ ಕಾಂಗ್ರೆಸಿನಲ್ಲಿ ನಿತ್ಯ ಭಿನ್ನಮತ ಹೆಚ್ಚಾಗುತ್ತಿದೆ ಅಧಿಕಾರಕ್ಕಾಗಿ ಒಳ ಜಗಳ ನಡೆಯುತ್ತಿದ್ದು ಇದನ್ನು ಡೈವರ್ಟ್ ಮಾಡಲು ಹುಲಿ ಉಗುರು ಪೆಂಡೆಂಟ್ ವಿಚಾರ ತಂದಿದ್ದಾರೆ ಎಂದು ಟಾಂಗ್ ನೀಡಿದರು.

ಪರೀಕ್ಷೆ ಅಕ್ರಮ : 22 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕರನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾವಾಗಿದೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಜಗಳ ತಾರಕ್ಕೇರಿದೆ ಇದನ್ನು ಡೈವರ್ಟ್ ಮಾಡಲು ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಈ ಸರ್ಕಾರವನ್ನು ತೆಗೆಯಲು ಬಿಜೆಪಿ ಯಾವುದೇ ಚಿಂತನೆ ಮಾಡಿಲ್ಲ. ಜನ ಕಾಂಗ್ರೆಸ್‍ಗೆ ಅಧಿಕಾರ ಕೊಟ್ಟಿದ್ದಾರೆ ಐದು ವರ್ಷ ನಡೆಸಲಿ. ಆದರೆ, ಸಿದ್ದರಾಮಯ್ಯ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಬಾಲಿಶ ಹೇಳಿಕೆ ನೀಡೋದು ಬಿಡಬೇಕು. ಐದಾರು ಸ್ಥಾನಗಳು ಕಡಿಮೆ ಇದ್ದರೆ ಸರ್ಕಾರ ರಚನೆ ಬಗ್ಗೆ ಯೋಚನೆ ಮಾಡಬಹುದು. ಆದ್ರೆ 70 ಶಾಸಕರನ್ನು ಕರೆದುಕೊಂಡು ಯಾರು ಸರ್ಕಾರ ರಚನೆ ಮಾಡಲು ಯೋಚನೆ ಮಾಡುತ್ತಿದ್ದಾರೆ.

ಇದು ಸಾಧ್ಯನಾ ಎಂದ ಅವರು ಉಪ ಮುಖ್ಯಮಂತ್ರಿ ಶಿವಕುಮಾರ್ ಅವರ ಪ್ರಾಮುಖ್ಯತೆ ಕಡಿಮೆ ಮಾಡಲು ಸಿದ್ದರಾಮಯ್ಯ ಡ್ರಾಮಾ ನಡೆಸಿದ್ದಾರೆ. ಇನ್ನೂ ಎರಡುವರೆ ವರ್ಷಕ್ಕೆ ಮತ್ತು ಲೋಕಸಭಾ ಚುನಾವಣೆಗೆ ಬಳಿ ಉಪ ಮುಖ್ಯಮಂತ್ರಿ ಡಿಕೆಶಿಗೆ ಅಕಾರ ಬಿಟ್ಟುಕೊಡಬೇಕು ಅಂತ ಸಿದ್ದರಾಮಯ್ಯ ಈ ನಾಟಕ ನಡೆಸಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಭಿಮಾನ ಕರ್ನಾಟಕ ಅಂತ ಮಾತನಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ರಾಜ್ಯದ ಪರವಾಗಿ ಯಾವುದೇ ಸಹಕಾರ ನೀಡುತ್ತಿಲ್ಲ . ಕೇಂದ್ರ ಜಲ ಸಂಪನ್ಮೂಲಗಳ ವಿಚಾರದಲ್ಲಿ ಅವರು ಸಹಕಾರ ಕೊಟ್ಟಿಲ್ಲ ಇದನ್ನು ಅವರು ಎದೆ ಮುಟ್ಟಿಕೊಂಡು ಹೇಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸ್ಪಷ್ಟನೆ ಕೇಳಿದರು.

ಕುಚ್ವಿತ ಬುದ್ಧಿ ಇರಬಾರದು:
ಮಾಜಿ ಸಿಎಂ ಬೊಮ್ಮಾಯಿ ಅನಾರೋಗ್ಯದ ಬಗ್ಗೆ ಶಾಸಕ ಎನ್ ಎಚ್ ಕೋನರೆಡ್ಡಿ ಅಪಹಾಸ್ಯ ವಿಚಾರ ಕುರಿತು ಸಹ ಪ್ರತಿಕ್ರಿಯೆ ನೀಡಿದ ಅವರು, ಅನಾರೋಗ್ಯ ಮತ್ತು ಸಾವಿನ ವಿಚಾರದಲ್ಲಿ ವ್ಯಕ್ತಿ ಯಾರೇ ಇರಲಿ ಈ ರೀತಿಯಾಗಿ ಕೆಳಮಟ್ಟದಲ್ಲಿ ಮಾತನಾಡ ಬಾರದು. ಈ ರೀತಿಯ ಕುಚ್ವಿತ ಬುದ್ದಿ ಮಾಡಬಾರದು. ಇದು ಅವರ ಸಂಸ್ಕೃತಿ ಸಂಸ್ಕಾರವನ್ನು ತೋರಿಸುತ್ತದೆ. ರಾಜಕಾರಣಿಗಳು ಆಗಿದ್ದರು ನಾವು ಮನುಷ್ಯರು ಇದನ್ನು ನೆನಪಿಟ್ಟುಕೊಳ್ಳಬೇಕು. ಜನ ನಮ್ಮನ್ನು ನೋಡುತ್ತಿರುತ್ತಾರೆ ಎಂದರು.

RELATED ARTICLES

Latest News