Thursday, November 21, 2024
Homeರಾಜ್ಯBREKING : ಟಿಕೆಟ್‌ ಕೊಡಿಸುವುದಾಗಿ ವಂಚಿಸಿದ ಆರೋಪದಲ್ಲಿ ಗೋಪಾಲ್‌ ಜೋಶಿ ಅರೆಸ್ಟ್

BREKING : ಟಿಕೆಟ್‌ ಕೊಡಿಸುವುದಾಗಿ ವಂಚಿಸಿದ ಆರೋಪದಲ್ಲಿ ಗೋಪಾಲ್‌ ಜೋಶಿ ಅರೆಸ್ಟ್

Pralhad Joshi's brother Gopal Joshi Arrested

ಬೆಂಗಳೂರು,ಅ.19- ಬಿಜೆಪಿಯಿಂದ ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್‌ ಕೊಡಿಸುವುದಾಗಿ ವಂಚಿಸಿದ ಆರೋಪ ಎದುರಿಸುತಿದ್ದ ಗೋಪಾಲ್‌ ಜೋಶಿ ಅವರನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

ನಾಗಠಾಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದೇವಾನಂದ ಫೂಲ್‌ ಸಿಂಗ್‌ ಚವ್ಹಾಣ್‌ ಅವರಿಂದ 2 ಕೋಟಿ ರೂ. ಪಡೆದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಗೋಪಾಲ್‌ ಜೋಶಿ ವಂಚಿಸಿದ್ದಾರೆ ಎಂಬ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಲಾಗಿತ್ತು. ಗೋಪಾಲ್‌ ಜೋಶಿ ಮಾತ್ರ ನಾಪತ್ತೆಯಾಗಿದ್ದರು. ಇಂದು ಮಧ್ಯಾಹ್ನ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರನ್ನು ಈವರೆಗೆ ಬಂಧಿಸಿಲಾಗಿದೆ.

RELATED ARTICLES

Latest News