ನವದೆಹಲಿ,ಫೆ.25- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 100 ಸ್ಥಾನಗಳ ಗಡಿ ದಾಟುವುದು ತುಂಬಾ ಕಷ್ಟ ಎಂದು ಮಾಜಿ ಚುನಾವಣಾ ತಂತ್ರಗಾರ ಮತ್ತು ಜನ್ ಸೂರಜ್ ಸಂಘಟನೆಯ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 370 ಸ್ಥಾನಗಳನ್ನು ತಲುಪುವ ಸಾಧ್ಯತೆಯಿಲ್ಲ, ಆದರೂ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಬಹುದು ಎಂದು ಅವರು ಹೇಳಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ 100ರ ಗಡಿ ದಾಟುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್ ಕಿಶೋರ್, ಲೋಕಸಭೆಯಲ್ಲಿ ಕಾಂಗ್ರೆಸ್‍ನ ಪ್ರಸ್ತುತ ಸ್ಥಾನಗಳ ಸಂಖ್ಯೆಯಲ್ಲಿ ದೊಡ್ಡ ಬದಲಾವಣೆಯ ಸಾಧ್ಯತೆಯನ್ನು ನಾನು ಕಾಣುತ್ತಿಲ್ಲ. ವಿರೋಧ ಪಕ್ಷಗಳು 2029ರ ಚುನಾವಣೆಗೆ ಈಗಿಂದಲೇ ಸಿದ್ಧತೆ ಮಾಡಿಕೊಳ್ಳುವುದು ಒಳ್ಳೆಯದು.ಸೀಟುಗಳ ಸಂಖ್ಯೆ 50-55 ಬಂದರೂ ಅದು ದೇಶದ ರಾಜಕಾರಣವನ್ನೇ ಬದಲಿಸುವುದಿಲ್ಲ ಎಂದರು. ಕಾಂಗ್ರೆಸ್ ಗೆ ಚುನಾವಣಾ ಫಲಿತಾಂಶದಲ್ಲಿ ಯಾವುದೇ ಸಕಾರಾತ್ಮಕ ಬದಲಾವಣೆ ಕಾಣುತ್ತಿಲ್ಲ. ದೊಡ್ಡ ಬದಲಾವಣೆಗೆ ಕಾಂಗ್ರೆಸ್ 100ರ ಗಡಿ ದಾಟಬೇಕು. ಆದರೆ, ಕಾಂಗ್ರೆಸ್ 100ರ ಗಡಿ ದಾಟುತ್ತದೆ ಎಂದು ಭಾವಿಸುವುದಿಲ್ಲ ಎಂದು ಹೇಳಿದರು.
ಇಂದಿನ ಸ್ಥಿತಿಯಲ್ಲಿ ಕಾಂಗ್ರೆಸ್ 100ರ ಗಡಿ ದಾಟುವುದು ತುಂಬಾ ಕಷ್ಟಕರವಾಗಿದೆ ಎಂದು ಹೇಳಿದ ಪ್ರಶಾಂತ್ ಕಿಶೋರ್, ಬಿಜೆಪಿಯ 370 ಸ್ಥಾನಗಳನ್ನು ಗೆಲ್ಲುವ ಗುರಿಯ ಬಗ್ಗೆ ಕೇಳಿದಾಗ, ¾ಬಿಜೆಪಿ ತನ್ನ ಕಾರ್ಯಕರ್ತರಿಗೆ 370 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ನಿಗದಿಪಡಿಸಿದೆ. 370ನೇ ವಿಯ ಈ ಗುರಿಯನ್ನು ಜನರು ನಿಜವೆಂದು ಪರಿಗಣಿಸಬಾರದು. ಪ್ರತಿಯೊಬ್ಬ ನಾಯಕನಿಗೆ ಗುರಿಗಳನ್ನು ಹೊಂದಿಸುವ ಹಕ್ಕಿದೆ. ಅವರು ಇದನ್ನು ಸಾಸಿದರೆ ಅದು ಅದ್ಭುತವಾಗಿರುತ್ತದೆ, ಸಾಧ್ಯವಾಗದಿದ್ದರೆ ಪಕ್ಷವು ತನ್ನ ತಪ್ಪನ್ನು ಒಪ್ಪಿಕೊಳ್ಳುವಷ್ಟು ವಿನಮ್ರವಾಗಿರಬೇಕು ಎಂದರು.
ಅಯೋಧ್ಯೆ ಮಂದಿರಕ್ಕೆ 25 ಕೆಜಿ ಚಿನ್ನ -25 ಕೋಟಿ ರೂ ದೇಣಿಗೆ
2014 ರ ನಂತರ, 8-9 ಚುನಾವಣೆಗಳು ನಡೆದಿವೆ, ಅಲ್ಲಿ ಬಿಜೆಪಿ ತನ್ನ ಗುರಿಯನ್ನು ಸಾಸಲು ಸಾಧ್ಯವಾಗಲಿಲ್ಲ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬರೋಬ್ಬರಿ 370 ಸ್ಥಾನಗಳು ಬರುವುದಿಲ್ಲ ಎಂದು ಹೇಳಬಲ್ಲೆ. ಇದರ ಸಾಧ್ಯತೆ ಬಹುತೇಕ ಶೂನ್ಯ ಎಂದು ನಾನು ಪರಿಗಣಿಸುತ್ತೇನೆ. ಇದು ಸಂಭವಿಸಿದರೆ ನನಗೆ ತುಂಬಾ ಆಶ್ಚರ್ಯವಾಗುತ್ತದೆ ಎಂದು ಹೇಳಿದರು.
ಪ್ರಶಾಂತ್ ಕಿಶೋರ್ ಹೇಳುವಂತೆ 2019ರಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದ ಸ್ಥಾನಕ್ಕಿಂತ ಕೆಳಗೆ ಬರುವುದಿಲ್ಲ. ಕಳೆದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದಿತ್ತು ಎಂದರು. ಕಾಂಗ್ರೆಸ್‍ನ ಭಾರತ್ ಜೋಡೋ ನ್ಯಾಯ ಯಾತ್ರೆ ಕುರಿತು ಕಿಶೋರ್, ಲೋಕಸಭೆ ಚುನಾವಣೆ ಹತ್ತಿರವಿರುವ ಕಾರಣ ಯಾತ್ರೆಗೆ ಇದು ಸಮಯವಲ್ಲ ಎಂದು ಹೇಳಿದರು.