Friday, November 22, 2024
Homeರಾಷ್ಟ್ರೀಯ | Nationalಆಸ್ಪತ್ರೆಗೆ ಡೋಲಿಯಲ್ಲಿ ಸಾಗಿಸುತ್ತಿದ್ದ ಮಹಿಳೆಗೆ ದಾರಿಯಲ್ಲೇ ಹೆರಿಗೆ

ಆಸ್ಪತ್ರೆಗೆ ಡೋಲಿಯಲ್ಲಿ ಸಾಗಿಸುತ್ತಿದ್ದ ಮಹಿಳೆಗೆ ದಾರಿಯಲ್ಲೇ ಹೆರಿಗೆ

ಥಾಣೆ, ಅ.2 (ಪಿಟಿಐ)- ನಮ್ಮ ದೇಶ ಎಷ್ಟೇ ಮುಂದುವರೆದರೂ ಇನ್ನು ಕೆಲವು ಪ್ರದೇಶಗಳಿಗೆ ಸೂಕ್ತವಾದ ಸವಲತ್ತುಗಳು ಸಿಕ್ಕಿಲ್ಲ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ. ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು ಸರಿಯಾದ ರಸ್ತೆ ಇಲ್ಲದ ಕಾರಣ ಆಕೆಯನ್ನು ಡೋಲಿಯಲ್ಲಿ ಆಸ್ಪತ್ರೆಗೆ ಕೊಂಡೋಯ್ಯುವಾಗ ದಾರಿ ಮಧ್ಯೆ ಆಕೆಗೆ ಹೆರಿಗೆಯಾಗಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ನಡೆದಿದೆ.

ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯನ್ನು ಗ್ರಾಮಸ್ಥರು ಡೋೀಲಿಯಲ್ಲಿ ಹೊತ್ತೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಪಾಟಿಕಾಚಾ ಪದಾ ಕುಗ್ರಾಮದ ಮಹಿಳೆಯನ್ನು ಆಕೆಯ ಕುಟುಂಬ ಸದಸ್ಯರು ಮತ್ತು ಕೆಲವು ಗ್ರಾಮಸ್ಥರು ಬೆಳಗಿನ ಜಾವ ಡೋಲಿಯಲ್ಲಿ ಹೊತ್ತುಕೊಂಡು ಹೋಗುತ್ತಿದ್ದರು. ಅವರು ಮಧ್ಯಾಹ್ನದ ಸುಮಾರಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಗ್ರಾಮಸ್ಥರು ಮತ್ತು ಆಶಾ ಆರೋಗ್ಯ ಕಾರ್ಯಕರ್ತೆಯರು ತಿಳಿಸಿದ್ದಾರೆ.

ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾಮುಕ ಖಾಕಿ ಬಲೆಗೆ

ಹೆರಿಗೆಯಾದ ನಂತರ ಮಹಿಳೆ ಮತ್ತು ಮಗುವನ್ನು ಖಾಸಗಿ ವಾಹನದಲ್ಲಿ ಕಾಸರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‍ಸಿ) ಕರೆದೊಯ್ಯಲಾಯಿತು. ಮಹಿಳೆಯನ್ನು ತಮ್ಮ ಕುಗ್ರಾಮದಿಂದ ಹತ್ತಿರದ ಪಿಎಚ್‍ಸಿಗೆ ಕರೆದೊಯ್ಯುವಾಗ ಅವರು ಹೊಳೆಗಳು ಮತ್ತು ಕಷ್ಟಕರವಾದ ಭೂಪ್ರದೇಶವನ್ನು ದಾಟಬೇಕಾಗಿ ಬಂತು ಎಂದು ಗ್ರಾಮಸ್ಥರು ಹೇಳಿದರು.

ಅದೃಷ್ಟವಶಾತ, ಆಶಾ ಕಾರ್ಯಕರ್ತೆಯೊಬ್ಬರು ನಮ್ಮೊಂದಿಗೆ ಬಂದರು ಮತ್ತು ಸುಗಮ ಹೆರಿಗೆಗೆ ಸಹಾಯ ಮಾಡಿದರು ಎಂದು ಅವರು ವಿವರಿಸಿದರು. ತಾಯಿ ಮತ್ತು ಮಗು ಸುರಕ್ಷಿತವಾಗಿದ್ದು, ಸ್ಥಿರವಾಗಿದ್ದಾರೆ ಎಂದು ಆರೋಗ್ಯ ಕಾರ್ಯಕರ್ತರು ತಿಳಿಸಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಥಾಣೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ತಮ್ಮ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

RELATED ARTICLES

Latest News