Friday, July 18, 2025
Homeರಾಷ್ಟ್ರೀಯ | Nationalವರದಕ್ಷಿಣೆ ಕಿರುಕುಳಕ್ಕೆ ನೊಂದು ಗರ್ಭಿಣಿ ಆತ್ಮಹತ್ಯೆ

ವರದಕ್ಷಿಣೆ ಕಿರುಕುಳಕ್ಕೆ ನೊಂದು ಗರ್ಭಿಣಿ ಆತ್ಮಹತ್ಯೆ

Pregnant woman commits suicide due to dowry harassment

ಲಖ್ನೋ,ಜು.18– ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ನೊಂದ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬಳು ವಿಷ ಸೇವಿಸಿ ಆತಹತ್ಯೆ ಮಾಡಿಕೊಂಡಿರುವ ಗಟನೆ ಉತ್ತರಪ್ರದೇಶದ ರಾತೋಡ್‌ ಗ್ರಾಮದ ಭಾಗ್ಪತ್‌ನಲ್ಲಿ ನಡೆದಿದೆ. ಮನೀಷಾ ವಿಷ ಸೇವಿಸಿ ಆತಹತ್ಯೆ ಮಾಡಿಕೊಂಡಿರುವ ಮಹಿಳೆ.

ಆತಹತ್ಯೆಗೂ ಮುನ್ನ 3 ನಿಮಿಷ 29 ಸೆಕೆಂಡುಗಳ ಭಾವನಾತಕ ವೀಡಿಯೊವನ್ನು ರೆಕಾರ್ಡ್‌ ಮಾಡಿ ಎರಡು ಡೆತನೋಟ್‌ ಬರೆದಿಟ್ಟಿದ್ದಾರೆ. ವೀಡಿಯೊದಲ್ಲಿ ತಮ ಪತಿ ಮತ್ತು ಅತ್ತೆ-ಮಾವಂದಿರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದು, ದೈಹಿಕ ಕಿರುಕುಳಕ್ಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬುಲೆಟ್‌ ಬೈಕ್‌ ಮತ್ತು ಪೀಠೋಪಕರಣಗಳಂತಹ ಉಡುಗೊರೆಗಳನ್ನು ನೀಡಿ ತನ್ನ ತಂದೆ 20 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಮದುವೆ ಮಾಡಿದ್ದರು. ಆದಾಗ್ಯೂ ಅತ್ತೆ-ಮಾವ ಕಾರು ಬೇಕೆಂದು ಒತ್ತಾಯಿಸುತ್ತಿದ್ದರು. ಇದನ್ನು ವಿರೋಧಿಸಿದ್ದಕ್ಕೆ ತನಗೆ ವಿದ್ಯುತ್‌ ಶಾಕ್‌ ನೀಡಲು ಯತ್ನಿಸಿದ್ದರು ಮಹಿಳೆ ತಿಳಿಸಿದ್ದಾರೆ.

ಮತ್ತೊಂದು ದುರಂತವೆಂದರೆ ಮನೀಷಾ ಗರ್ಭಿಣಿಯಾಗಿದ್ದು, ಅತ್ತೆ-ಮಾವಂದಿರು ತಮನ್ನು ಗರ್ಭಿಣಿಯಾಗುವಂತೆ ಒತ್ತಾಯಿಸಿದ್ದಾರೆ ಎಂದು ದೂರಿದ್ದಾರೆ. ಈ ದೌರ್ಜನ್ಯದಿಂದಾಗಿ ಮನೀಷಾ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಳು. ಮಾನಸಿಕ ಆಘಾತಕ್ಕೊಳಗಾಗಿದ್ದ ಮನೀಷಾ ಅಂತಿಮವಾಗಿ ವಿಷ ಸೇವಿಸಿ ಆತಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ತಿಳಿಸಿದ್ದಾರೆ.

RELATED ARTICLES

Latest News