ಬೆಂಗಳೂರು,ಜು.26– ರಾಷ್ಟ್ರಮಟ್ಟದಲ್ಲಿ ಹೊಸ ನಾಯಕರ ಹುಡುಕಾಟ ನಡೆಯುತ್ತಿದೆ. ಯೂತ್ ಕಾಂಗ್ರೆಸ್ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಇಂದಿನಿಂದ ಸಾರ್ಟ್ ಫೋನ್ ಮೂಲಕ ಆನ್‌ಲೈನ್ ಸದಸ್ಯತ್ವ ನೋಂದಣಿ ಆರಂಭಿಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರು ಬೇಕಾದರೂ ಆನ್‌ಲೈನ್‌ನಲ್ಲೇ ಸದಸ್ಯತ್ವ ಪಡೆಯಬಹುದು. ಸದಸ್ಯತ್ವದ ಜೊತೆಗೆ ಬ್ಲಾಕ್, ಡಿಸ್ಟ್ರಿಕ್ಟ್ ಪ್ರೆಸಿಡೆಂಟ್, ಜನರಲ್ ಸೆಕ್ರೆಟರಿ, ಕೆಪಿಸಿಸಿ ಪದಾಧಿಕಾರಿಗಳ ಚುನಾವಣೆಗೆ ಮತ ಚಲಾವಣೆಗೆ ಅವಕಾಶ ಕೊಡಲಾಗತ್ತದೆ. ಒಬ್ಬರಿಗೆ 6 ಮತ ಚಲಾವಣೆ ಮಾಡಲು ಅವಕಾಶ ಇದೆ ಎಂದು ತಿಳಿಸಿದರು.
ಸದಸ್ಯತ್ವ ನೋಂದಣಿಯನ್ನು ಪಾರದರ್ಶಕವಾಗಿ ಮಾಡಲಾಗುತ್ತದೆ. ಟೆಕ್ನಾಲಜಿ ಬಳಸಿ ಫೇಸ್ ಐಡೆಂಟಿಟಿ ಒಳಗೊಂಡಂತೆ ಸದಸ್ಯತ್ವ ಮಾಡಿಸುತ್ತಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲಿ ಚುನಾವಣಾಧಿಕಾರಿಗಳು ಇರುತ್ತಾರೆ. ಆಗಸ್ಟ್ 2ರಿಂದ ನಾಮಪತ್ರ ಸಲ್ಲಿಕೆ. ಆ.9 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿದೆ. ಚುನಾವಣೆಗೆ ಮೀಸಲಾತಿ ಕೂಡ ನಿಗಧಿ ಮಾಡಲಾಗಿದೆ. ಎಸ್ಸಿ ಎಸ್ಟಿ, ಜನರಲ್ ಕೆಟಗರಿ ಇರಲಿದೆ ಎಂದು ಮಾಹಿತಿ ನೀಡಿದರು.
ಮಹಾತಗಾಂಧಿ ಕಾಂಗ್ರೆಸ್ ನಾಯಕತ್ವ ವಹಿಸಿ ನೂರು ವರ್ಷ ಆಗಿದೆ. ಈ ಸುಸಂದರ್ಭದಲ್ಲಿ ದೊಡ್ಡ ಸಂಭ್ರಮಾಚರಣೆ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಕಾರ್ಯಕ್ರಮ ರೂಪಿಸಲು ಸಮಿತಿ ರಚನೆ ಮಾಡಲಾಗುವುದು. 15 ಸಚಿವರು, ಪದಾಧಿಕಾರಿಗಳು ಸೇರಿ 60 ನಾಯಕರ ಕಮಿಟಿ ಮಾಡುತ್ತಿದ್ದೇವೆ. ಬೆಳಗಾವಿ, ಎಲ್ಲೆಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಇದೆಯೋ ಅಲ್ಲಿ ಕಾರ್ಯಕ್ರಮ ಮಾಡಲಾಗುವುದು ಎಂದರು.
ಹೆಚ್.ಕೆ.ಪಾಟೀಲ್ ಅಧ್ಯಕ್ಷತೆಯ ಸಮಿತಿಯಲ್ಲಿ ವೀರಪ್ಪ ಮೊಯ್ಲಿ ಸಲಹೆಗಾರರಾಗಿ ಇರುತ್ತಾರೆ. ಆ.9ರೊಳಗೆ ಸಭೆ ನಡೆಸಿ ನಂತರ ಸಲಹೆ ಕೊಡುತ್ತಾರೆ. ಪಕ್ಷ ಸರ್ಕಾರ ಮಟ್ಟದಲ್ಲಿ ಏನು ಕಾರ್ಯಕ್ರಮ ಮಾಡಬೇಕೋ ಮಾಡುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿಗೆ ತಿರುಗೇಟು: ಅವರೇ ತೊಡಿಕೊಂಡ ಬಾವಿಗೆ ಅವರೇ ಬೀಳಲು ಹೊರಟಿದ್ದಾರೆ. ವಾಲ್ಮೀಕಿ ನಿಗಮ ಹಗರಣದ ಬಗ್ಗೆ ನಾವೇ ಎಸ್‌ಐಟಿ ತನಿಖೆಗೆ ವಹಿಸಿದ್ದೇವೆ. 89 ಕೋಟಿನಾ 189 ಕೋಟಿ ಅಂತಿದ್ದಾರೆ. ಸದನದಲ್ಲಿ ಮುಖ್ಯಮಂತ್ರಿಗಳಿಗೆ ಉತ್ತರಕೊಡಲು ಬಿಡದೆ ಬಿಜೆಪಿ ಕಾಲದ ಹಗರಣ ಮಾಡಿದ್ದಾರೆ. ತಮ ಪಕ್ಷಕ್ಕಾಗಿ ಮುಡಾ ಹಗರಣವಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನವಾಗುತ್ತದೆಯೋ ಇಲ್ಲವೇ ಜೆಡಿಎಸ್‌ನವರೇ ಬಿಜೆಪಿಗೆ ವಿಲೀನವಾಗುತ್ತಾರೆಯೋ? ಎಂದು ವ್ಯಂಗ್ಯವಾಡಿದರು.
ಅವರ ಕಾಲದಲ್ಲಿ ನಡೆದ ಹಗರಣಗಳು. ಸಿಎಂ ಕುಟುಂಬದ ಜಮೀನನ್ನು ಮುಡಾ ಆಕ್ರಮಿಸಿಕೊಂಡಿದೆ. ಮುಡಾ 50:50 ಪರಿಹಾರ ಕೊಟ್ಟಿದೆ. ಇವರೇನು ಪರಿಹಾರ ಕೇಳಿಲ್ಲ. ಅವರೇ ಕೊಟ್ಟಿದ್ದಾರೆ. ಆಗ ಬಿಜೆಪಿ ಸರ್ಕಾರ ಇತ್ತು. ಆಸ್ತಿಗೆ ಪರಿಹಾರ ಮಾತ್ರ ಸಿಎಂ ಕುಟುಂಬ ಕೇಳಿದು, ಕಾನೂನು ಚೌಕಟ್ಟಿನನಲ್ಲೇ ನಡೆದಿದೆ. ಸಿಎಂ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಲಾಗಿದೆ ಎಂದು ಆರೋಪಿಸಿದರು.
ಅವರು ಎಷ್ಟು ಬೇಕಾದರೂ ಪಾದಯಾತ್ರೆ ಮಾಡಲಿ. ನಾವು ಏನು ಕಾರ್ಯಕ್ರಮ ರೂಪಿಸಬೇಕು, ಅದನ್ನು ಮಾಡುತ್ತೇವೆ. ಅವರ ಪಾದಯಾತ್ರೆಗೆ ಏನು ಉತ್ತರ ಕೋಡಬೇಕೋ ಕೋಡುತ್ತೇವೆ. ಪಾದಯಾತ್ರೆ ಆರಂಭ ಮಾಡಿದ್ದು ಕಾಂಗ್ರೆಸ್ ಪಕ್ಷ. ಗಾಂಧಿಜೀ ಕಾಲದಿಂದ ಪಾದಯಾತ್ರೆ ಮಾಡುತ್ತಿದ್ದೇವೆ. ಬಿಜೆಪಿಗರೇ ಈ ಹಗರಣದಲ್ಲಿ ಸರ್ದಾರರು. ಅದು ಏನು ಬಿಚ್ಚಿಡಬೇಕೋ ನಾವು ಬಿಚ್ಚಿಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು. ವಾಲ್ಮೀಕಿ ನಿಗಮದ ಎಸ್‌ಐಟಿ ತನಿಖೆ ಮಧ್ಯಂತರ ವರದಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಮಾಹಿತಿ ನನಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.