ನವದೆಹಲಿ,ಮಾ.31- ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರಮೋದಿ ಅವರು ಮುಸ್ಲಿಂ ಬಾಂಧವರಿಗೆ ಈದ್-ಉಲ್-ಫಿತರ್ ಶುಭಾಶಯ ತಿಳಿಸಿದ್ದಾರೆ. ಈ ಹಬ್ಬವು ಸಮಾಜದಲ್ಲಿ ಭರವಸೆ, ಸಾಮರಸ್ಯ ಮತ್ತು ದಯೆಯ ಮನೋಭಾವವನ್ನು ಹೆಚ್ಚಿಸುತ್ತದೆ ಎಂದು ಎಕ್‌್ಸನಲ್ಲಿ ಪೋಸ್ಟ್ ಮಾಡಿದ್ದಾರೆ.
ಈದ್-ಉಲ್-ಫಿತರ್ ರಂಜಾನ್ ಉಪವಾಸದ ತಿಂಗಳ ಪರಾಕಾಷ್ಠೆಯನ್ನು ಸೂಚಿಸುತ್ತದೆ. ಈದ್-ಉಲ್-ಫಿತರ್ ಶುಭಾಶಯಗಳು ಎಂದು ಹೇಳಿದ್ದಾರೆ. ಈ ಹಬ್ಬವು ನಮ ಸಮಾಜದಲ್ಲಿ ಭರವಸೆ, ಸಾಮರಸ್ಯ ಮತ್ತು ದಯೆಯ ಮನೋಭಾವವನ್ನು ಹೆಚ್ಚಿಸಲಿ. ನಿಮ ಎಲ್ಲಾ ಪ್ರಯತ್ನಗಳಲ್ಲಿ ಸಂತೋಷ ಮತ್ತು ಯಶಸ್ಸು ಇರಲಿ. ಈದ್ ಮುಬಾರಕ್! ಎಂದು ಮೋದಿ ಬಣ್ಣಿಸಿದ್ದಾರೆ.