Friday, November 22, 2024
Homeರಾಜ್ಯಏ.1ರಿಂದ ದುಬಾರಿಯಾಗಲಿವೆ ಔಷಧಗಳು

ಏ.1ರಿಂದ ದುಬಾರಿಯಾಗಲಿವೆ ಔಷಧಗಳು

ಬೆಂಗಳೂರು,ಮಾ.19- ಏಪ್ರಿಲ್ 1ರಿಂದ ಔಷಧಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಪೈನ್ಕಿಲ್ಲರ್, ಆ್ಯಂಟಿ ಇನೆಕ್ಷನ್ ಸೇರಿದಂತೆ ಸುಮಾರು 800 ಪ್ರಮುಖ ಔಷಧಗಳ ಬೆಲೆಯಲ್ಲಿ ಏರಿಕೆ ಕಂಡು ಬರಲಿದೆ. ಹೋಲ್ಸೇಲ್ ಪ್ರೈಸ್ ಇಂಡೆಕ್ಸ್ ಬದಲಾವಣೆಯ ನಂತರ ರಾಷ್ಟ್ರೀಯ ಅಗತ್ಯ ಪಟ್ಟಿಯಲ್ಲಿ ಔಷಧಿಗಳ ಬೆಲೆಯಲ್ಲಿ ಶೇ. 0.0055ರಷ್ಟು ಹೆಚ್ಚಳವನ್ನು ಸರ್ಕಾರ ಅನುಮೋದಿಸಲಿದೆ.

ಹಣದುಬ್ಬರದ ಪರಿಣಾಮವಾಗಿ ಔಷಧ ಕಂಪನಿಗಳು ಬೆಲೆ ಏರಿಕೆ ಮಾಡುವಂತೆ ಕೆಲ ದಿನಗಳಿಂದ ಬೇಡಿಕೆ ಇಟ್ಟಿದ್ದವು. 2022ರಲ್ಲಿ ಔಷಧಗಳ ಬೆಲೆಯನ್ನು ಶೇ.10ರಿಂದ 12ರವರೆಗೆ ಹೆಚ್ಚಿಸಲಾಯಿತು. ಔಷಧ ತಯಾರಿಕೆಗೆ ಬಳಸುವ ಪದಾರ್ಥಗಳ ಬೆಲೆ ಶೇ.15ರಿಂದ 130ರಷ್ಟು ಏರಿಕೆಯಾಗಿದೆ ಎಂದು ಉದ್ಯಮಿ ಮತ್ತು ಔಷಧಿ ತಜ್ಞರು ಹೇಳಿದ್ದಾರೆ.

ಸಾವಿರಕ್ಕೂ ಹೆಚ್ಚು ಔಷಧಿ ತಯಾರಿಕರ ನೇತೃತ್ವದ ಗುಂಪು ಬೆಲೆ ಏರಿಕೆಗೆ ಸರ್ಕಾರಕ್ಕೆ ಮನವಿ ಮಾಡಿತ್ತು.ಈ ಹಿನ್ನೆಲೆಯಲ್ಲಿ ಇದೀಗ ಔಷಧಿಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಹೆಚ್ಚಿನ ಜನರಿಗೆ ಉಪಯುಕ್ತವಾಗುವ ಔಷಧಿಗಳನ್ನು ಸೇರಿಸಲಾಗಿದೆ.

RELATED ARTICLES

Latest News