Sunday, August 10, 2025
Homeರಾಜ್ಯLIVE : ಹಳದಿ ಮೆಟ್ರೋ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

LIVE : ಹಳದಿ ಮೆಟ್ರೋ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಬೆಂಗಳೂರು,ಆ.10- ಕಿತ್ತೂರು ಕರ್ನಾಟಕ ಹಾಗೂ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್‌ ಮತ್ತು ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆ ಮಾಡುವ ಹಳದಿ ಮೆಟ್ರೋ ರೈಲು ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸಿದರು. 11 ಗಂಟೆಗೆ ಸರಿಯಾಗಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವಾರದ 6 ದಿನ ಬೆಂಗಳೂರು-ಬೆಳಗಾವಿ ನಡುವೆ ಸಂಚರಿಸುವ ವಂದೇ ಭಾರತ್‌ ರೈಲಿಗೆ ಹಸಿರು ನಿಶಾನೆ ತೋರಿದರು.

ಇದೇ ಸಂದರ್ಭದಲ್ಲಿ ವರ್ಚುಯಲ್‌ ಮೂಲಕ ಅಮೃತ್‌ಸರ-ಶ್ರೀಮಾತಾ ವೈಷ್ಣೋದೇವಿ ಕತ್ರಿ, ಅಜಿ-ನಾಗ್ಪುರ-ಪುಣೆ ನಡುವೆ ಸಂಚರಿಸುವ ವಂದೇ ಭಾರತ್‌ ಎಕ್‌್ಸಪ್ರೆಸ್‌‍ಗೂ ಚಾಲನೆ ಕೊಟ್ಟರು. ನಂತರ ಬಹು ನಿರೀಕ್ಷಿತ 19.05 ಕಿ.ಮೀ. ಉದ್ದದ ಆರ್‌ ವಿ ರಸ್ತೆ-ಬೊಮಸಂದ್ರವರೆಗೆ ಸಂಚರಿಸುವ ಹಳದಿ ಮೆಟ್ರೋ ರೈಲಿಗೆ ಚಾಲನೆ ಕೊಟ್ಟರು.

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್‌, ಎಚ್‌.ಡಿ.ಕುಮಾರಸ್ವಾಮಿ, ನಗರಾಭಿವೃದ್ಧಿ ಸಚಿವ ಮನೋಹರ್‌ ಲಾಲ್‌ ಖಟ್ಟರ್‌, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವ ಭೈರತಿ ಸುರೇಶ್‌, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದರಾದ ತೇಜಸ್ವಿ ಸೂರ್ಯ ವೇದಿಕೆಯಲ್ಲಿದ್ದರು.

ಮೆಟ್ರೋ ರೈಲು ಉದ್ಘಾಟನೆಯಾದ ನಂತರ ಸ್ವತಃ ಮೋದಿಯವರೇ ಜಯನಗರದ ರಾಗಿಗುಡ್ಡದಿಂದ ಎಲೆಕ್ಟ್ರಾನ್‌ ಸಿಟಿವರೆಗಿನ ಮೆಟ್ರೋ ರೈಲು ಮಾರ್ಗದಲ್ಲಿ ಪ್ರಯಾಣಿಸಿದರು. ಬಳಿಕ ಮೂರನೇ ಹಂತದ ಮೆಟ್ರೋ ರೈಲು ಯೋಜನೆಗೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ಕೇಸರಿಮಯ :
ಮೋದಿಯವರ ಆಗಮನದ ಹಿನ್ನೆಲೆಯಲ್ಲಿ ಬೆಂಗಳೂರು ಸಂಪೂರ್ಣವಾಗಿ ಕೇಸರಿಮಯವಾಗಿತ್ತು. ನಗರದ ಬಹುತೇಕ ಕಡೆ ಬಿಜೆಪಿಯ ಬಾವುಟಗಳು ಎಲ್ಲೆಡೆ ರಾರಾಜಿಸುತ್ತಿದ್ದವು. ಇದಕ್ಕೂ ಮುನ್ನ ಬೆಳಿಗ್ಗೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಎಚ್‌ಎಎಲ್‌ ವಿಮಾನನಿಲ್ದಾಣಕ್ಕೆ ಆಗಮಿಸಿದ ಮೋದಿಯವರನ್ನು ರಾಜ್ಯಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌, ಪೊಲೀಸ್‌‍ ಮಹಾ ನಿರ್ದೇಶಕ ಸಲೀಂ ಸೇರಿದಂತೆ ಮತ್ತಿತರರು ಬರಮಾಡಿಕೊಂಡರು.

ಎಚ್‌ಎಎಲ್‌ ವಿಮಾನನಿಲ್ದಾಣದಿಂದ ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಫ್ಟರ್‌ನಲ್ಲಿ ಮೇಖ್ರಿ ಸರ್ಕಲ್‌ನಲ್ಲಿರುವ ಎಚ್‌ಕ್ಯೂಟಿಸಿ ಕೇಂದ್ರಕ್ಕೆ ಆಗಮಿಸಿದರು. ಈ ವೇಳೆ ಅವರನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರಮಾಡಿಕೊಂಡರು.

ಹೊರಗಡೆ ವಿಶೇಷ ವಾಹನದಲ್ಲಿ ಬರುತ್ತಿದ್ದಂತೆ ಬೆಳಿಗ್ಗಿನಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಬಿಜೆಪಿಯ ಕಾರ್ಯಕರ್ತರು ಮೋದಿಗೆ ಜೈಕಾರ ಹಾಕಿದರು.ಕಾರಿನಿಂದಲೇ ಬಿಜೆಪಿ ಕಾರ್ಯಕರ್ತರಿಗೆ ಕೈಬೀಸಿದ ಅವರು ಅಲ್ಲಿಂದ ಬಳ್ಳಾರಿ ರಸ್ತೆ, ವಿನ್ಸರ್‌ ಮ್ಯಾನರ್‌, ಚಾಲುಕ್ಯವೃತ್ತದ ಮೂಲಕ ನೇರವಾಗಿ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿ ಹಳದಿ ಮೆಟ್ರೋ ರೈಲು ಉದ್ಘಾಟನೆಗೆ ಚಾಲನೆ ಕೊಟ್ಟರು.

ಮೋದಿಯವರಿಗೆ ಬಿಜೆಪಿ ಕಾರ್ಯಕರ್ತರಿಂದ ಒಟ್ಟು 5 ಸ್ಥಳಗಳಲ್ಲಿ ಸ್ವಾಗತ ಕೋರಲಾಯಿತು. ದಾರಿಯ ಇಕ್ಕೆಲಗಳಲ್ಲೂ ಅಪಾರಪ್ರಮಾಣದ ಕಾರ್ಯಕರ್ತರು ಆಗಮಿಸಿ ತಮ ನೆಚ್ಚಿನ ನಾಯಕನಿಗೆ ಜೈಕಾರದ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.ಶನಿವಾರ ಬೆಳಿಗ್ಗೆಯಿಂದಲೇ ನಗರದಲ್ಲಿ ತುಂತುರು ಸಿಂಚನವಾಗಿತ್ತು. ಆದರೆ ಇಂದು ಮಳೆಯ ಆರ್ಭಟಕ್ಕೆ ಕೊಂಚ ವಿರಾಮ ಇದ್ದಿದ್ದರಿಂದ ಕಾರ್ಯಕ್ರಮವು ಸುಸೂತ್ರವಾಗಿ ನೆರವೇರಿತು.

ಬೆಂಗಳೂರಿಗೆ ಬಂದಿಳಿದ ಪ್ರಧಾನಿಗೆ ಅದ್ದೂರಿ ಸ್ವಾಗತ :
ಬೆಂಗಳೂರು,ಆ.10- ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೆರವೇರಿಸಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜಧಾನಿ ಬೆಂಗಳೂರಿನಲ್ಲಿ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ದೊರೆಯಿತು. ಎಚ್‌ಎಎಲ್‌ ವಿಮಾನನಿಲ್ದಾಣದಿಂದ ಹೆಲಿಕಾಫ್ಟರ್‌ ಮೂಲಕ ಮೇಖ್ರಿವೃತ್ತದಲ್ಲಿರುವ ಎಚ್‌ಕ್ಯೂಟಿಸಿ ಕೇಂದ್ರದಿಂದ ಹೊರಟ ಮೋದಿಯವರಿಗೆ ನಗರದ 5 ಸ್ಥಳಗಳಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಜೈಕಾರದ ಘೋಷಣೆಗಳನ್ನು ಕೂಗಿ ಸ್ವಾಗತ ಕೋರಿದರು.

ಮೇಖ್ರಿ ವೃತ್ತದಲ್ಲಿ ಯಲಹಂಕ, ಹೆಬ್ಬಾಳ, ಬ್ಯಾಟರಾಯನಪುರ, ಕೆ.ಆರ್‌.ಪುರಂ ಮತ್ತಿತರ ಕ್ಷೇತ್ರಗಳಿಂದ ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ತಮ ನೆಚ್ಚಿನ ನಾಯಕನನ್ನು ಕಾಣುತ್ತಲೇ ಪುಳಕಿತರಾದರು.ಬೆಳಗಿನಿಂದಲೇ ಮೇಖ್ರಿ ವೃತ್ತಕ್ಕೆ ಆಗಮಿಸಿದ್ದ ಕಾರ್ಯಕರ್ತರು ಬಿಜೆಪಿ ಬಾವುಟ ಧರಿಸಿ, ಕೈಯಲ್ಲಿ ಕಮಲದ ಹೂ ಹಿಡಿದು ಮೋದಿ ಆಗಮಿಸುತ್ತಿದ್ದಂತೆ ಮೋದಿ, ಮೋದಿ ಎಂದು ಜೈಕಾರದ ಘೋಷಣೆಗಳನ್ನು ಕೂಗಿದರು.

ಬಿಳಿ ಬಣ್ಣದ ಕುರ್ತ, ಬಿಳಿ ಬಣ್ಣದ ಪೈಜಾಮ ಹಾಗೂ ಕಪ್ಪು ಬಣ್ಣದ ಕೋಟ್‌ ಧರಿಸಿದ್ದ ಮೋದಿಯವರು ಕುಳಿತ ಸ್ಥಳದಲ್ಲೇ ಕಾರ್ಯಕರ್ತರತ್ತ ಕೈಬೀಸಿದರು. ಬಳ್ಳಾರಿ ರಸ್ತೆಯ ಇಕ್ಕೆಲಗಳಲ್ಲೂ ಭಾರೀ ಪ್ರಮಾಣದ ಕಾರ್ಯಕರ್ತರು ಜಮಾವಣೆಗೊಂಡಿದ್ದರು.ಅಭಿಮಾನಿಗಳ ಜೈಕಾರ, ಹಷೋದ್ಘಾರಕ್ಕೆ ಪಾರವೇ ಇರಲಿಲ್ಲ. ಅಲ್ಲಿಂದ ಚಾಲುಕ್ಯ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಮೋದಿಯವರು ಕೈ ಬೀಸಿದರು.

ಬಳಿಕ ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು, ಅಭಿಮಾನಿಗಳು ಜೈಕಾರ ಮೊಳಗಿಸಿದರು.ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್‌ ರೈಲಿಗೆ ಚಾಲನೆ ಕೊಟ್ಟ ನಂತರ ನೇರವಾಗಿ ಸೌತ್‌ ಎಂಡ್‌ ವೃತ್ತಕ್ಕೆ ವಾಹನದಲ್ಲೇ ಆಗಮಿಸಿದರು.

ಈ ಸಂದರ್ಭದಲ್ಲಿಯೂ ಚಿಕ್ಕಪೇಟೆ, ಬಸವನಗುಡಿ, ಜಯನಗರ, ಬಿಟಿಎಂ ಲೇಔಟ್‌, ಬೊಮನಹಳ್ಳಿ ಸೇರಿದಂತೆ ಮತ್ತಿತರ ಕ್ಷೇತ್ರಗಳಿಂದ ಆಗಮಿಸಿದ್ದ ಕಾರ್ಯಕರ್ತರು ಮೋದಿಯವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ನಂತರ ರಾಗಿಗುಡ್ಡ ಹಾಗೂ ಎಲೆಕ್ಟ್ರಾನಿಕ್‌ ಸಿಟಿಯ ಮೆಟ್ರೋ ಸ್ಟೇಷನ್‌ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವೇಳೆಯೂ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.


ಮೋದಿಯವರ ಆಗಮನದ ಹಿನ್ನೆಲೆಯಲ್ಲಿ ಬೆಂಗಳೂರು ಸಂಪೂರ್ಣವಾಗಿ ಕೇಸರಿಮಯವಾಗಿತ್ತು. ನಗರದ ಬಹುತೇಕ ಕಡೆ ಬಿಜೆಪಿಯ ಬಾವುಟಗಳು ಎಲ್ಲೆಡೆ ರಾರಾಜಿಸುತ್ತಿದ್ದವು.ಇದಕ್ಕೂ ಮುನ್ನ ಬೆಳಿಗ್ಗೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಎಚ್‌ಎಲ್‌ ವಿಮಾನನಿಲ್ದಾಣಕ್ಕೆ ಆಗಮಿಸಿದ ಮೋದಿಯವರನ್ನು ರಾಜ್ಯಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌, ಪೊಲೀಸ್‌‍ ಮಹಾ ನಿರ್ದೇಶಕ ಸಲೀಂ ಸೇರಿದಂತೆ ಮತ್ತಿತರರು ಬರಮಾಡಿಕೊಂಡರು.

ಎಚ್‌ಎಎಲ್‌ ವಿಮಾನನಿಲ್ದಾಣದಿಂದ ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಫ್ಟರ್‌ನಲ್ಲಿ ಮೇಖ್ರಿ ಸರ್ಕಲ್‌ನಲ್ಲಿರುವ ಎಚ್‌ಕ್ಯೂಟಿಸಿ ಕೇಂದ್ರಕ್ಕೆ ಆಗಮಿಸಿದರು. ಈ ವೇಳೆ ಅವರನ್ನು ರಾಜ್ಯಪಾಲ ಗೆಹ್ಲೋಟ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರಮಾಡಿಕೊಂಡರು.ಹೊರಗಡೆ ವಿಶೇಷ ವಾಹನದಲ್ಲಿ ಬರುತ್ತಿದ್ದಂತೆ ಬೆಳಿಗ್ಗಿನಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜಮಾ ವಹಿಸಿದ್ದ ಬಿಜೆಪಿಯ ಕಾರ್ಯಕರ್ತರು ಮೋದಿಗೆ ಜೈಕಾರ ಹಾಕಿದರು.

ಕಾರಿನಿಂದಲೇ ಬಿಜೆಪಿ ಕಾರ್ಯಕರ್ತರಿಗೆ ಕೈಬೀಸಿದ ಅವರು ಅಲ್ಲಿಂದ ಬಳ್ಳಾರಿ ರಸ್ತೆ, ವಿನ್ಸರ್‌ ಮ್ಯಾನರ್‌, ಚಾಲುಕ್ಯವೃತ್ತದ ಮೂಲಕ ನೇರವಾಗಿ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿ ಚಾಲನೆ ಕೊಟ್ಟರು.
ಮೋದಿಯವರಿಗೆ ಬಿಜೆಪಿ ಕಾರ್ಯಕರ್ತರಿಂದ ಒಟ್ಟು 5 ಸ್ಥಳಗಳಲ್ಲಿ ಸ್ವಾಗತ ಕೋರಲಾಯಿತು. ದಾರಿಯ ಇಕ್ಕೆಲಗಳಲ್ಲೂ ಅಪಾರಪ್ರಮಾಣದ ಕಾರ್ಯಕರ್ತರು ಆಗಮಿಸಿ ತಮ ನೆಚ್ಚಿನ ನಾಯಕನಿಗೆ ಜೈಕಾರದ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ಬೆಂಗಳೂರಿನಲ್ಲಿ ಹಬ್ಬದ ವಾತಾವರಣ :
ಬೆಂಗಳೂರಿನಲ್ಲಿ ಮೋದಿ ಹವಾ ಶುವಾಗಿತ್ತು ಎಲ್ಲೆಡೆ ಕೇಸರಿ ಬಿಜೆಪಿ,ಕೇಸರಿ ಧ್ವಜ ರಾಜಾಜಿಸುತ್ತಿದ್ದು ಹಬ್ಬದ ವಾತಾವರಣ ಸೃಷ್ಠಿಯಾಗಿತ್ತು.ಪ್ರಧಾನಿ ಬೆಂಗಳೂರಿಗೆ ಆಮಿಸುವ ಬಗ್ಗೆ ತಿಳಿದಿದ್ದ ಬೆಂಗಳೂರಿನ ಹವನ್ನು ನೋಡಲು ಎಚ್‌ಎಎಲ್‌ ವಿಮಾನ ನಿಲ್ದಾಣದಿಂದಲೇ ಸಾವಿರಾರು ಸಂಖ್ಯಯಲ್ಲಿ ಜಮಾಯಿಸಿದ್ದರು.

ಮೋದಿ ಮೋದಿ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು ಕಾರಿನಿಂದಲೇ ಅವರತ್ತ ಕೈಬೀಸಿದ್ದಾರೆ.ಜಯಘೋಷ ಮೊಳಗಿದ್ದು ಬೆಂಗಳೂರಿನಲ್ಲಿ ಸಂಭ್ರಮ ಮನೆ ಮಾಡಿದೆ.ಬೆಂಗಳೂರು ದಕ್ಷಿಣ ಕೇತ್ರ ಸಂಸದ ತೇಜಸ್ವಿ ಸೂರ್ಯ ಇಂದು ಮಹತ್ವದ ದಿನ ಬೆಂಗಳೂರಿನ ಜನತೆ ಇದಕ್ಕೆ ಕಾದಿದ್ದರು ಕನಸ್ಸು ನನಸಾಗಿದೆ ಎಂದರು.

RELATED ARTICLES

Latest News