ನವದೆಹಲಿ, ಮಾ. 02- ದೇಶದಲ್ಲಿರುವ ಮುಸಲ್ಮಾನ್ ಬಾಂಧವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪವಿತ್ರ ರಂಜಾನ್ ಹಬ್ಬದ ಶುಭಾಷಯ ಕೋರಿದ್ದಾರೆ. ಪವಿತ್ರ ರಂಜಾನ್ ಮಾಸದ ಆರಂಭದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ.
ಪವಿತ್ರ ರಂಜಾನ್ ತಿಂಗಳು ಪ್ರಾರಂಭವಾಗುತ್ತಿದ್ದಂತೆ, ಅದು ನಮ್ಮ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲಿ ಎಂದು ಅವರು ಎಕ್ಸ್ ನಲ್ಲಿ ತಿಳಿಸಿದ್ದಾರೆ. ಈ ಪವಿತ್ರ ತಿಂಗಳು ಪ್ರತಿಬಿಂಬ, ಕೃತಜ್ಞತೆ ಮತ್ತು ಭಕ್ತಿಯನ್ನು ಸಂಕೇತಿಸುತ್ತದೆ, ಸಹಾನುಭೂತಿ, ದಯೆ ಮತ್ತು ಸೇವೆಯ ಮೌಲ್ಯಗಳನ್ನು ನೆನಪಿಸುತ್ತದೆ. ರಂಜಾನ್ ಮುಬಾರಕ್! ಎಂದು ಅವರು ಪೋಸ್ಟ್ ಹಾಕಿದ್ದಾರೆ.