Thursday, August 7, 2025
Homeರಾಜ್ಯಹಳದಿ ಮೆಟ್ರೋ ಉದ್ಘಾಟನೆ ವೇಳೆ ಬೆಂಗಳೂರಲ್ಲಿ ಭರ್ಜರಿ ರೋಡ್‌ ಶೋ ನಡೆಸಲಿದ್ದಾರೆ ಮೋದಿ

ಹಳದಿ ಮೆಟ್ರೋ ಉದ್ಘಾಟನೆ ವೇಳೆ ಬೆಂಗಳೂರಲ್ಲಿ ಭರ್ಜರಿ ರೋಡ್‌ ಶೋ ನಡೆಸಲಿದ್ದಾರೆ ಮೋದಿ

Prime Minister Modi to hold grand road show in Bengaluru

ಬೆಂಗಳೂರು,ಆ.5- ಬಿಬಿಎಂಪಿಯಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲೇಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ಬೆಂಗಳೂರಿನ ನಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಭರ್ಜರಿ ರೋಡ್‌ ಶೋ ನಡೆಸಲು ಮುಂದಾಗಿದೆ.

ಬಿಜೆಪಿ ಅರ್ಧ ಕಿ.ಮೀ ರೋಡ್‌ ಶೋ ಕೂಡ ಹಮಿಕೊಳ್ಳಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಇನ್ನು ಅಧಿಕೃತವಾಗಿ ರೋಡ್‌ ಶೋ ಕುರಿತು ಮಾಹಿತಿ ಲಭ್ಯವಾಗಿಲ್ಲವಾದರೂ ಇದೇ ಆ.10ರಂದು ಹಳದಿ ಮಾರ್ಗ ಉದ್ಘಾಟನೆಯಾದ ನಂತರ ಮೋದಿ ಅವರು ನಗರದ ಆಯ್ದ ಪ್ರದೇಶದಲ್ಲಿ ರೋಡ್‌ ಶೋ ನಡೆಸುವ ಸಾಧ್ಯತೆ ಇದೆ.

ರಾಜ್ಯ ಬಿಜೆಪಿ ನಾಯಕರು ರೋಡ್‌ ಶೋ ಬಗ್ಗೆ ಸ್ಥಳಗಳ ಮಾಹಿತಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿಂದ ದೃಢಪಟ್ಟ ಬಳಿಕ ಇದು ಅಂತಿಮವಾಗಲಿದೆ. ಆರ್‌.ವಿ.ರಸ್ತೆಯಿಂದ ಬೊಮಸಂದ್ರ ನಡುವಿನ ನಮ ಮೆಟ್ರೋ ಹಳದಿ ಮಾರ್ಗ ವಾಣಿಜ್ಯ ಸಂಚಾರಕ್ಕೆ ಸಜ್ಜಾಗಿದೆ. ಬೊಮಸಂದ್ರದಲ್ಲಿ ರೈಲಿಗೆ ಹಸಿರು ನಿಶಾನೆ ತೋರಿಸುವ ಪ್ರಧಾನಿಗಳು ಬೊಮಸಂದ್ರದಿಂದ ರಾಗಿಗುಡ್ಡ ಮೆಟ್ರೋ ನಿಲ್ದಾಣದವರೆಗೂ ರೈಲಿನಲ್ಲಿ ಪ್ರಯಾಣ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಪ್ರಯಾಣಿಕರೊಂದಿಗೆ ಅನೌಪಚಾರಿಕವಾಗಿ ಮಾತನಾಡಲಿದ್ದಾರೆ. ಜಯನಗರದ ರಾಗಿಗುಡ್ಡ ಪ್ರಸನ್ನ ಆಂಜನೇಯ ದೇವಸ್ಥಾನದಿಂದ ಜಯನಗರದ ಶಾಲಿನಿ ಗ್ರೌಂಡ್‌ವರೆಗೆ ಮೋದಿ ರೋಡ್‌ ಶೋ ನಡೆಸಲು ಬಿಜೆಪಿ ನಿರ್ಧರಿಸಿದೆ. ಎಲೆಕ್ಟ್ರಾನಿಕ್‌ ಸಿಟಿ ಬಳಿ ಮೆಟ್ರೋ ಹಳದಿ ಮಾರ್ಗಕ್ಕೆ ಮೋದಿ ಚಾಲನೆ ನೀಡಲಿದ್ದಾರೆ. ಬಳಿಕ ಅಲ್ಲಿಂದ ಮೆಟ್ರೋದಲ್ಲೇ ರಾಗಿ ಗುಡ್ಡದ ಬಳಿ ಮೋದಿ ಆಗಮಿಸಲಿದ್ದಾರೆ. ಅಲ್ಲಿಂದ ರೋಡ್‌ ಶೋ ಮೂಲಕ ಶಾಲಿನಿ ಗ್ರೌಂಡ್‌ಗೆ ಮೋದಿ ಆಗಮಿಸಲಿದ್ದಾರೆ. ಬಳಿಕ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಆಗಮಿಸೋ ಹಿನ್ನೆಲೆಯಲ್ಲಿ ಅವರ ಸ್ವಾಗತ ಹಾಗೂ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ. ಜಯನಗರದ ಶಾಲಿನಿ ಮೈದಾನದಲ್ಲಿ ವಿಪಕ್ಷ ನಾಯಕ ಆರ್‌ .ಅಶೋಕ್‌ ಹಾಗೂ ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಭೂಮಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ವೇದಿಕೆಗೆ ಭೂಮಿ ಪೂಜೆ ನಡೆಸಿದ್ದಾರೆ.

ಎಲ್ಲಿಂದ ಎಲ್ಲಿಗೆ ರೋಡ್‌ ಶೋ?:
ರಾಗೀಗುಡ್ಡ ಮೆಟ್ರೋ ನಿಲ್ದಾಣದಿಂದ ಜಯನಗರ ಐದನೇ ಬ್ಲಾಕ್‌ನಲ್ಲಿರುವ ಚಂದ್ರಗುಪ್ತ ಮೌರ್ಯ ಮೈದಾನದವರೆಗೆ ಅಂದಾಜು 1 ಕಿ.ಮೀ (ಶಾಲಿನಿ ಗ್ರೌಂಡ್‌್ಸವರೆಗೂ) ರೋಡ್‌ ಶೋ ಹಮಿಕೊಳ್ಳಲು ಸಿದ್ಧತೆ ನಡೆದಿದೆ. ಈ ಸಂಬಂಧ ಪ್ರಸ್ತಾವವೂ ಸಲ್ಲಿಕೆಯಾಗಿದ್ದು, ರಾಜ್ಯ ಸರ್ಕಾರಕ್ಕೂ ಅನುಮತಿ ಕೂರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೆಟ್ರೋ ಉದ್ಘಾಟನೆ, ರೈಲಿನಲ್ಲಿ ಪ್ರಯಾಣ ಹಾಗೂ ರೋಡ್‌ ಶೋ ಬಳಿಕ ಮಧ್ಯಾಹ್ನ 12 ಗಂಟೆಗೆ ಜಯನಗರದ ಶಾಲಿನಿ ಗ್ರೌಂಡ್‌್ಸನಲ್ಲಿ ಉದ್ಘಾಟನಾ ಸಮಾರಂಭ ನಡೆಯುವ ನಿರೀಕ್ಷೆ ಇದೆ. ಐವತ್ತು ಸಾವಿರದಿಂದ ಒಂದೂ ಲಕ್ಷಕ್ಕೂ ಅಧಿಕ ಮಂದಿ ಸೇರುವ ಸಾಧ್ಯತೆಗಳು ಇವೆ. ಜಯನಗರದ ಶಾಲಿನಿ ಆಟದ ಮೈದಾನದಲ್ಲಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಲು ಬೃಹತ್‌ ಕಾರ್ಯಕ್ರಮ ಮಾಡುತ್ತ್ತಿದ್ದೇವೆ. ಸುಮಾರು 40 ಸಾವಿರ ಜನ ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. 18-20 ಸಾವಿರ ಕೋಟಿ ಹಣ ಖರ್ಚು ಮಾಡಿ ಉದ್ಘಾಟನೆ ಮಾಡಲಾಗುತ್ತದೆ. ಕಾರ್ಯಕ್ರಮ ಯಶಸ್ವಿ ಅಗಲಿ ಅಂತ ಇವತ್ತು ಪೂಜೆ ಮಾಡಿದ್ದೇವೆ. ಜಯನಗರದ ರಾಗಿಗುಡ್ಡದಿಂದ ಶಾಲಿನಿ ಗ್ರೌಂಡ್‌ವರೆಗೂ ರೋಡ್‌ ಶೋ ಇದೆ. ರೋಡ್‌ ಶೋ ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ಈ ಮೆಟ್ರೋದಲ್ಲಿ ಸುಮಾರು 8ರಿಂದ 10 ಲಕ್ಷ ಜನ ಪ್ರತಿದಿನ ಓಡಾಡುವ ನಿರೀಕ್ಷೆ ಇದೆ. ಇದರಿಂದ ಟ್ರಾಫಿಕ್‌ ಸಮಸ್ಯೆ ಕೂಡ ಕಡಿಮೆ ಆಗಲಿದೆ. ಅಟಲ್‌ ಬಿಹಾರಿ ವಾಜಪೇಯಿ, ಅನಂತ್‌ ಕುಮಾರ್‌ ಅಮ್ರ ಬೆಂಗಳೂರಿಗೆ ಮೆಟ್ರೋ ತಂದುಕೊಟ್ಟರು. ಈ ಹಳದಿ ಮಾರ್ಗಕ್ಕೆ ಮೋದಿಯವರೇ ಶಂಕುಸ್ಥಾಪನೆ ಮಾಡಿದ್ದರು. ಈಗ ಅವರೇ ಉದ್ಘಾಟನೆ ಮಾಡುತ್ತಿರುವುದು ವಿಶೇಷವಾಗಿದೆ.

ಮೋದಿ ರೋಡ್‌ ಶೋ ನಡೆಸಿದ್ದ ಪರಿಣಾಮ 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೀರಾ ಕಳಪೆ ಪ್ರಧರ್ಶನದ ಹೊರತಾಗಿಯೂ ಬೆಂಗಳೂರಿನ 28 ವಿಧಾನ ಸಭಾ ಕ್ಷೇತ್ರಗಳ ಪೈಕಿ 16 ಹಾಗೂ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ, ಉತ್ತರ, ಸೆಂಟ್ರಲ್‌, ಗ್ರಾಮಾಂತರ, ಬೆಂಗಳೂರಿಗೆ ಹೊಂದಿಕೊಂಡಿರುವ ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ (ಎನ್‌ಡಿಎ) ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಪಾಕಿಸ್ತಾನ ವಿರುದ್ದ ನಡೆಸಿದ ಅಪರೇಷನ್‌ ಸಿಂಧೂರದ ನಂತರ ಮೋದಿ ಅವರ ಜನಪ್ರಿಯತೆ ಮತ್ತಷ್ಟು ಏರಿಕೆಯಾಗಿದ್ದು, ಇದನ್ನು ಮತಗಳಾಗಿ ಪರಿವರ್ತನೆ ಮಾಡಿಕೊಳ್ಳುವ ಲೆಕ್ಕಚಾರ ಬಿಜೆಪಿಯದ್ದು.

ಸಾಮಾನ್ಯವಾಗಿ ನಗರದ ಜನತೆಯೂ ಬಿಜೆಪಿ ಬಗ್ಗೆ ವಿಶೇಷವಾದ ಒಲವು ಹೊಂದಿದ್ದಾರೆ. ಈ ಹಿಂದೆ ನಡೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದಿತ್ತು. ಹೀಗಾಗಿ ಬಿಜೆಪಿಯ ಬಲಿಷ್ಟ ನಾಯಕನಿಂದ ರೋಡ್‌ ಶೋ ನಡೆಸುವ ಮೂಲಕ ಬಿಬಿಎಂಪಿಯಲ್ಲಿ ಕಲಮ ಆರಳಿಸುವ ಲೆಕ್ಕಚಾರ ಇದೆ.ಮೋದಿ ಆಗಮನದ ಬಗ್ಗೆ ಸಂಸದ ಮಾಹಿತಿ ಹಂಚಿಕೆ ನಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಮೋದಿ ಆಗಮನದ ಬಗ್ಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರಲಾಲ್‌ ಖಟ್ಟರ್‌ ಹಾಗೂ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಮಾಧ್ಯಮ ಎಕ್‌್ಸನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನಮ ಮೆಟ್ರೋ ಹಳದಿ ಮಾರ್ಗದ ಮಾಹಿತಿ
ಮಾರ್ಗದ ಉದ್ದ- 19.15 ಕಿ ಮೀ.
ಮಾರ್ಗದ ವೆಚ್ಚ – ಒಟ್ಟು 5,056.99 ಕೋಟಿ ರೂ.
ಎಲ್ಲಿಂದ ಎಲ್ಲಿಗೆ – ಆರ್‌ ವಿ ರಸ್ತೆ – ಬೊಮಸಂದ್ರ ನಿಲ್ದಾಣಗಳ ಸಂಖ್ಯೆ – 16 ಹಸಿರು, ನೀಲಿ ಮಾರ್ಗವನ್ನು ಈ ಹಳದಿ ಮಾರ್ಗ ಸಂಪರ್ಕಿಸುತ್ತದೆ. ಯೋಜನೆಯ ಫಲಾನುಭವಿಗಳು – ಬೆಂಗಳೂರು ದಕ್ಷಿಣದ ಸುಮಾರು 25 ಲಕ್ಷ ಜನರಿಗೆ ಪ್ರಯೋಜನ. ಎಲೆಕ್ಟ್ರಾನಿಕ್‌ ಸಿಟಿ, ಹೊಸೂರು ಭಾಗಕ್ಕೆ ತೆರಳುವವರಿಗೆ ಭಾರೀ ಅನುಕೂಲ.

RELATED ARTICLES

Latest News