Sunday, September 8, 2024
Homeರಾಷ್ಟ್ರೀಯ | Nationalಮಾಧ್ಯಮಗಳ ಪ್ರಾಮುಖ್ಯವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ

ಮಾಧ್ಯಮಗಳ ಪ್ರಾಮುಖ್ಯವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ

ನವದೆಹಲಿ, ಜು.15- ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈನ ಪ್ರತಿಷ್ಠಿತ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಸನಲ್ಲಿ ಇಂಡಿಯನ್‌ ನ್ಯೂಸ್‌‍ಪೇಪರ್‌ ಸೊಸೈಟಿ (ಐಎನ್‌ಎಸ್‌‍) ಯ ಐಎನ್‌ಎಸ್‌‍ ಟವರ್‌ರ‍ಸ ಕಟ್ಟಡದ ಬಿ-ವಿಂಗ್‌ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಭಾರತದ ಬೆಳವಣಿಗೆಯಲ್ಲಿ ಮುದ್ರಣ ಮಾಧ್ಯಮದ ಪ್ರಾಮುಖ್ಯವನ್ನು ಒತ್ತಿ ಹೇಳಿದರು.

ಸುದ್ದಿ ಪ್ರಸರಣದ ಮೂಲಕ ಮುದ್ರಣ ಮಾಧ್ಯಮವು ಭಾರತದ ಮಾಧ್ಯಮ ಕ್ಷೇತ್ರವನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ಹೊಂದಿದೆ, ಮಾಧ್ಯಮವು ಪ್ರಚಲಿತ ವಿದ್ಯಮಾನಗಳ ವಕ್ತಾರನಾಗಿ ಮುಂದಿನ ಮಹತ್ತರ 25 ವರ್ಷಗಳಲ್ಲಿ ದೇಶದ ಭವಿಷ್ಯ ರೂಪಿಸಲಿದೆ ಎಂದು ಅವರು ನುಡಿದರು.

ಮಾಧ್ಯಮ ಉದ್ಯಮದ ರಾಜಕೀಯ ಪಕ್ಷಪಾತವಿಲ್ಲದೆ, ವೋಟ್ ಬ್ಯಾಂಕ್ ರಾಜಕೀಯಕ್ಕೆ ಮಣಿಯದ ಕಾರ್ಯ ಪ್ರವೃತ್ತಿಯನ್ನು ಶ್ಲಾಫಿಸಿದ ಮೋದಿ, ಸರ್ಕಾರದ ಧ್ಯೇಯೋದ್ದೇಶಗಳೊಂದಿಗೆ ಕೈಜೋಡಿಸಿ ಭಾರತದ ಜನತೆಯ ಅಭ್ಯುದಯಕ್ಕೆ ಸಹಕರಿಸಬೇಕೆಂದು ಕರೆ ನೀಡಿದರು. ಮಾಧ್ಯಮದ ವ್ಯಾಪ್ತಿಯನ್ನು ಬಳಸಿಕೊಂಡು ಅಂತಾರಾಜ್ಯ ಪ್ರವರ್ಧನಾ ಪ್ರಚಾರಾಂದೋಲನ ಕೈಗೊಳ್ಳುವಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕೆಂದು ಪ್ರಕಾಶಕರಿಗೆ ಮೋದಿ ಮನವಿ ಮಾಡಿದರು.

ಜಾಗತಿಕ ಪ್ರಸ್ತುತತೆಯ ಬಗ್ಗೆ ಒತ್ತು ನೀಡಿ ಮಾತನಾಡಿದ ಮೋದಿ, ಮಾಧ್ಯಮಗಳು ಸಾಮಾಜಿಕ ಜಾಲತಾಣಗಳು ಮತ್ತು ಸೂಕ್ಷ್ಮ ಸುದ್ದಿಜಾಲಗಳನ್ನು ಬಳಸಿ ವಿಶ್ವಸಂಸ್ಥೆಯ ಸದಸ್ಯರಾಷ್ಟ್ರಗಳಲ್ಲಿ ಮಾತನಾಡುವ ಭಾಷೆಗಳಲ್ಲಿ ಸೃಷ್ಟಿಯಾದ ಸಾಹಿತ್ಯವನ್ನು ಭಾಷಾಂತರ ಮಾಡುವ ಮೂಲಕ ಜಾಗತಿಕ ಬಾಂಧವ್ಯಕ್ಕೆ ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಿದರು.

ಐಎನ್‌ಎಸ್‌‍ ಅಧ್ಯಕ್ಷ ರಾಕೇಶ್ ಶರ್ಮಾ ಅವರು ಇತ್ತೀಚಿನ ಸಂವಾದದಲ್ಲಿ ಹಣಕಾಸು ಸಚಿವರೊಂದಿಗೆ ಪ್ರಸ್ತಾಪಿಸಲಾದ ಸ್ವಯಂ ಘೋಷಣಾ ಪ್ರಮಾಣಪತ್ರಗಳ ಇತ್ತೀಚಿನ ಸಮಸ್ಯೆ ಮತ್ತು ಇತರೆ ಸಮಸ್ಯೆಗಳನ್ನು ಪರಿಶೀಲಿಸುವಂತೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿಕೊಂಡರು.

ನಾಮಫಲಕ ಅನಾವರಣಗೊಳಿಸುವ ಮೂಲಕ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಪ್ರಧಾನಿಯವರಿಗೆ ಈ ಮುನ್ನ ಭವ್ಯ ಸ್ವಾಗತ ಕೋರಲಾಯಿತು. ಮಹಾರಾಷ್ಟ್ರದ ರಾಜ್ಯಪಾಲ ರಮೇಶ್‌ ಬೈಸ್‌‍, ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್‌‍ ಮತ್ತು ಅಜಿತ್‌ ಪವಾರ್‌, ಇತರ ಗಣ್ಯರು, ಉದ್ಯಮ ಮುಖಂಡರು ಮತ್ತು ಮುದ್ರಣ ಮಾಧ್ಯಮ ಕ್ಷೇತ್ರದ ಸದಸ್ಯರು ಉಪಸ್ಥಿತರಿದ್ದರು.

ಐಎನ್‌ಎಸ್‌‍ ಟವರ್ರಸ ಬಿ-ವಿಂಗ್‌ ಮುಂಬೈನ ಮುದ್ರಣ ಮಾಧ್ಯಮ ಕ್ಷೇತ್ರದ ಮೈಲುಗಲ್ಲಾಗಲಿದೆ. ಬಿಕೆಸಿ ಕಾರ್ಯತಂತ್ರ ನಿವೇಶನದಲ್ಲಿ ನೆಲೆಗೊಂಡಿರುವ ಈ ಕಟ್ಟಡ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಮುದ್ರಣ ಮಾಧ್ಯಮದ ಒಂದು ಮಾದರಿ ಕೇಂದ್ರವಾಗಲಿದೆ. ಇದು 14 ಅಂತಸ್ತುಗಳ ಹವಾನಿಯಂತ್ರಿತ ಅತ್ಯಾಧುನಿಕ ಕಟ್ಟಡವಾಗಿದೆ.

RELATED ARTICLES

Latest News