ನವದೆಹಲಿ, ಡಿ 6 (ಪಿಟಿಐ) ಸಂವಿಧಾನದ ಮುಖ್ಯ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿಯಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದು, ಸಮಾನತೆ ಮತ್ತು ಮಾನವ ಘನತೆಗಾಗಿ ಅವರ ಅವಿರತ ಹೋರಾಟವು ಇಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಿದೆ ಎಂದು ಹೇಳಿದ್ದಾರೆ.
ಅಂಬೇಡ್ಕರ್ ಅವರು ದಲಿತ ಕುಟುಂಬದಿಂದ ಬಂದವರು ಮತ್ತು ಹಿಂದುಳಿದವರ ಪರವಾಗಿ ಹೋರಾಡುವ ಮೂಲಕ ಭಾರತದ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದರು.
ಮಹಾಪರಿನಿರ್ವಾಣ ದಿವಸ್‌ರಂದು, ನಮ ಸಂವಿಧಾನದ ಶಿಲ್ಪಿ ಮತ್ತು ಸಾಮಾಜಿಕ ನ್ಯಾಯದ ದಾರಿದೀಪ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ನಾವು ನಮಿಸುತ್ತೇವೆ ಎಂದು ಮೋದಿ ಎಕ್‌್ಸನಲ್ಲಿ ಹೇಳಿದರು.
ಸಮಾನತೆ ಮತ್ತು ಮಾನವ ಘನತೆಗಾಗಿ ಡಾ. ಅಂಬೇಡ್ಕರ್ ಅವರ ದಣಿವರಿಯದ ಹೋರಾಟವು ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ. ಇಂದು ನಾವು ಅವರ ಕೊಡುಗೆಗಳನ್ನು ಸರಿಸುತ್ತಿರುವಾಗ, ಅವರ ದಷ್ಟಿಕೋನವನ್ನು ಈಡೇರಿಸುವ ನಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ ಎಂದು ಮೋದಿ ಹೇಳಿದರು.
ಈ ವರ್ಷದ ಆರಂಭದಲ್ಲಿ ಮುಂಬೈನಲ್ಲಿ ಅಂಬೇಡ್ಕರ್ ಅವರ ಚಿತಾಭಸ ಸ್ಥಳವಾದ ಚೈತ್ಯ ಭೂಮಿಗೆ ಭೇಟಿ ನೀಡಿದ ಚಿತ್ರವನ್ನು ಪ್ರಧಾನಿ ಎಕ್‌್ಸನಲ್ಲಿ ಹಂಚಿಕೊಂಡಿದ್ದಾರೆ.