Sunday, July 20, 2025
Homeಅಂತಾರಾಷ್ಟ್ರೀಯ | International20 ವರ್ಷಗಳಿಂದ ಕೋಮದಲ್ಲಿದ್ದ ಸೌದಿಯ ಸ್ಲಿಪಿಂಗ್ ಪ್ರಿನ್ಸ್ ವಲೀದ್ ನಿಧನ

20 ವರ್ಷಗಳಿಂದ ಕೋಮದಲ್ಲಿದ್ದ ಸೌದಿಯ ಸ್ಲಿಪಿಂಗ್ ಪ್ರಿನ್ಸ್ ವಲೀದ್ ನಿಧನ

Prince Alwaleed bin Khaled bin Talal dies after 20 years in coma

ಸೌದಿಅರೆಬೀಯಾ, ಜು.20-ಕಳೆದ 20 ವರ್ಷಗಳಿಂದ ಕೋಮದಲ್ಲಿದ್ದ ಸೌದಿಅರೆಬೀಯಾ ರಾಜಕುಮಾರ್ ಆಲ್‌ವಲೀದ್ ಬಿನ್ ಖಾಲೀದ್ ಬಿನ್ ತಲಾಲ್ ಆಲ್ ಸೌದ್ ನಿನ್ನೆ ನಿಧನರಾಗಿದ್ದಾರೆ.20 ವರ್ಷಗಳಿಂದ ಕೋಮದಲ್ಲಿದ್ದ ಅವರನ್ನು ಸ್ವೀಪಿಂಗ್ ಪ್ರಿನ್ಸ್ ಎಂದೇ ಕರೆಯಲಾಗುತ್ತಿತ್ತು.

ಸೌದಿ ರಾಜಮನೆತನದ ಹಿರಿಯ ಸದಸ್ಯರಾದ ಖಲೀದ್ ಬಿಬ್ ತಲಾಲ್ ಅವರ ಮಗ ಬಿಲೆನೀಯರ್ ಪ್ರಿನ್ಸ್‌ ಆಲ್‌ವಲೀದ್ ಬಿನ್ ತಲಾಲ್ ಅವರ ಸೋದರ ಅಳಿಯ.ವಲೀದ್ ಅವರು 1990 ಏಪ್ರಿಲ್ ನಲ್ಲಿ ಜನಿಸಿದ್ದರು. 2005 ರಲ್ಲಿ ಲಂಡನ್‌ನಲ್ಲಿ ಮಿಲಿಟರಿ ತರಬೇತಿ ಸಮಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಆಗ ಅವರ ಮೆದುಳಿಗೆ ತೀವ್ರ ಗಾಯವಾಗಿ ಕೋಮಗೆ ಜಾರಿದ್ದರು.

ಸೌದಿ ಸರ್ಕಾರ ರಾಜಕುಮಾರನಿಗೆ ಚಿಕಿತ್ಸೆ ನೀಡಲು ಅಮೆರಿಕಾ ಮತ್ತು ಸ್ಪೇನ್‌ನಿಂದ ನುರಿತ ತಜ್ಞರನ್ನ ಕರೆಸಿತ್ತು. ಆದರೆ ಎಂದು ಪ್ರಜ್ಞೆ ಮರಳಿ ಬರಲೇ ಇಲ್ಲ.ದೇಹದಲ್ಲಿ ಚಲನೆ ಇತ್ತು. ಹೀಗಾಗಿ ಯಾವತ್ತಾದರೂ ಒಂದು ದಿನ ಏಳಬಹುವುದು ಎಂಬ ಆಸೆಯಲ್ಲಿ ಕುಟುಂಬದವರು ಇದ್ದರು.

ಆದರೆ ವೈದ್ಯರು ಅವರು ಎಂದೂ ಮೇಲೇಳಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಆದರೆ ಅವರ ತಂದೆ ಪ್ರಿನ್ಸ್ ಖಾಲಿದ್ ಮಾತ್ರ ಚಿಕಿತ್ಸೆ ನಿಲ್ಲಿಸಲು ನಿರಾಕರಿಸಿದರು.ಇದಾದ ನಂತರ ಅವರನ್ನು ರೀಯಾದ್ ಅರಮನೆಯಲ್ಲಿ ವಿಶೇಷ ಕೋಣೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಕೈ ಮತ್ತು ಕಣ್ಣು ರೆಪ್ಪೆಗಳು ಚಲನೆ ಇತ್ತು. ಆದರೆ ಒಂದು ದಿನ ಅವರು ಮರಳಿ ಬರಬಹುದೆಂಬ ಭರವಸೆಯನ್ನ ಜನರಿಗೆ ನೀಡಲಾಗಿತ್ತು. ಇದೀಗಾ ಅವರು ತನ್ನ 36 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನರವೇರಲಿದೆ.

RELATED ARTICLES

Latest News