ನವದೆಹಲಿ: ಇತ್ತೀಚೆಗಷ್ಟೇ ಸಂಸತ್ತಿಗೆ ಕಾಲಿಟ್ಟ ಪ್ರಿಯಾಂಕಾ ಗಾಂಧಿ ವಾದ್ರಾ ಈಗ ಹೊಸ ವಿವಾದ ಮೈಲೇಲೆ ಎಳೆದುಕೊಂಡಿದ್ದಾರೆ. ಪ್ಯಾಲೆಸ್ತೀನ್ ಎಂದು ಬರೆದಿರುವ ಬ್ಯಾಗ್ ಹಿಡಿದು ಸಂಸತ್ ಆಗಮಿಸಿದ ಪ್ರಿಯಾಂಕಾ ಫೋಟೋ ವೈರಲ್ ಆಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಪ್ಯಾಲೆಸ್ತೀನ್ ಮೇಲಿನ ಪ್ರಿಯಾಂಕಾ ಪ್ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗಳು ಕೇಳಿಬರುತ್ತಿವೆ,.
ಸಂಸದೆ ಪ್ರಿಯಾಂಕಾ ಗಾಂಧಿ ಪ್ಯಾಲೆಸ್ತೀನ್ ಜನರಿಗೆ ಬೆಂಬಲ ಮತ್ತು ಒಗ್ಗಟ್ಟನ್ನು ಪ್ರದರ್ಶಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ವಯನಾಡ್ ಸಂಸದೆಯಾಗಿರುವ ಪ್ರಿಯಾಂಕಾ ಗಾಜಾದ ಮೇಲೆ ಇಸ್ರೇಲ್ ದಾಳಿಯನ್ನು ಖಂಡಿಸುತ್ತಲೇ ಇದ್ದರು. ಅದೇ ರೀತಿ ಇದೀಗ ಮತ್ತೆ ತಮ್ಮ ನಿಲುವನ್ನು ಪ್ರದರ್ಶಿಸಿದ್ದಾರೆ.‘
ಪ್ರಿಯಾಂಕಾ ಪ್ಯಾಲೆಸ್ತೀನ್ ಹೆಸರಿರುವ ಬ್ಯಾಗ್ ನೊಂದಿಗೆ ಫೋಟೋ ಪೋಸ್ ಕೊಟ್ಟಿದ್ದು ಆ ಫೋಟೋವನ್ನು ಕಾಂಗ್ರೆಸ್ ವಕ್ತಾರ ಶಾಮಾ ಮೊಹಮ್ಮದ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಬಳಿಕ ಈ ವಿವಾದ ಭುಗಿಲೆದ್ದಿದೆ. ಪ್ಯಾಲೆಸ್ತೀನ್ ಪರ ತಮ್ಮ ಬೆಂಬಲವನ್ನು ಸೂಚಿಸುವುದರ ಸಂಕೇತವಾಗಿ ಈ ಬ್ಯಾಗ್ ಹಿಡಿದುಕೊಂಡಿದ್ದಾರೆ ಎಂದು ಎಕ್ಸ್ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಪ್ರಿಯಾಂಕ ಹಿಡಿದುಬಂದ ಬ್ಯಾಗ್, ಕಲ್ಲಂಗಡಿ, ಈ ಪ್ರದೇಶದಲ್ಲಿ ಪ್ರತಿರೋಧದ ದೀರ್ಘಕಾಲದಿಂದ ಗುರುತಿಸಲ್ಪಟ್ಟ ಮೋಟಿಫ್ ಸೇರಿದಂತೆ ಪ್ಯಾಲೆಸ್ಟೀನಿಯಾದೊಂದಿಗಿನ ಐಕಮತ್ಯವನ್ನು ಸಂಕೇತಿಸುವ ಲಾಂಛನಗಳನ್ನು ಒಳಗೊಂಡಿತ್ತು.
ಇದಕ್ಕೆ ಬಿಜೆಪಿ ನಾಯಕ ಸಂಬಿತ್ ಪಾತ್ರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. “ಗಾಂಧಿ ಕುಟುಂಬ ಯಾವಾಗಲೂ ತುಷ್ಟೀಕರಣದ ಬ್ಯಾಗ್ ನ್ನು ಹೊತ್ತಿದೆ. ಚುನಾವಣೆಯಲ್ಲಿ ಅವರ ಸೋಲಿಗೆ ತುಷ್ಟೀಕರಣದ ಚೀಲವೇ ಕಾರಣ” ಎಂದು ಪತ್ರಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇಸ್ರೇಲ್‌ನ ವ್ಯಕ್ತಿಯೊಬ್ಬ ವಿಡಿಯೋ ಮಾಡಿ, ಮುಸ್ಲಿಮರ ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಕಾಂಗ್ರೆಸ್ ಪಕ್ಷದ ನಡೆಯನ್ನು ಖಂಡಿಸಿದ್ದಾನೆ. ಈ ರೀತಿಯ ನಡೆಯಿಂದಲೇ ಇದು ಭಾರತದಲ್ಲಿ ಜನ ಕಾಂಗ್ರೆಸ್ ನ್ನು ದ್ವೇಷಿಸುತ್ತಿದ್ದಾರೆ ಎಂದಿದ್ದಾನೆ.
ಮುಸ್ಲಿಂ ರಾಷ್ಟ್ರ ಪ್ಯಾಲೆಸ್ತೇನ್ ಗೆ ಬೆಂಬಲ ವ್ಯಕ್ತಪಡಿಸುತ್ತಿರುವ ಪ್ರಿಯಾಂಕ ವಾದ್ರ, ಆಗಾಗ್ಗೆ ಇಸ್ರೇಲ್‌ನಲ್ಲಿ ನೆತನ್ಯಾಹು ಸರ್ಕಾರವನ್ನು ದೂಷಿಸುತ್ತಿರುತ್ತಾರೆ.