ಬೆಂಗಳೂರು,ಡಿ.30- ಕನ್ನಡಪರ ಹೋರಾಟಗಾರರನ್ನು ಕೂಡಲೇ ಬಿಡುಗಡೆಗೊಳಿಸದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನ್ನಡಪರ ಸಂಘಟನೆಗಳು ಶಕ್ತಿ ಪ್ರದರ್ಶನ ಮಾಡಲಿವೆ ಎಂದು ಕರವೇ ಕನ್ನಡಿಗರ ಧ್ವನಿ ರಾಜ್ಯಾಧ್ಯಕ್ಷರಾದ ಅನಿಲ್ ಕುಮಾರ್ ಎಚ್ಚರಿಸಿದ್ದಾರೆ.
ಸರ್ಕಾರ ತಾನು ಹೊರಡಿಸಿರುವ ಆದೇಶವನ್ನು ಪಾಲಿಸಲು ಸಾಧ್ಯವಾಗದ ಹಾಗೂ ದಪ್ಪ ಚರ್ಮದ ಸರ್ಕಾರಿ(ತನ್ನ) ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಆಗದ ಕಾರಣ, ಕೊನೆಯ ಅಸ್ತ್ರ ಯಾರು ಪ್ರಶ್ನಿಸುತ್ತಾರೋ ಅವರನ್ನು ಬಂಧಿಸುವುದು, ಜೈಲಿಗೆ ಹಟ್ಟುವುದು ಇತರ ಹೋರಾಟಗಾರರನ್ನು, ಪೊಲೀಸರನ್ನು ಬಳಸಿಕೊಂಡು ನಿಯಂತ್ರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಯೋಚಿಸಬೇಕಾದ ವಿಚಾರವೆಂದರೆ ತಾವುಗಳು ಅಧಿಕಾರಕ್ಕೆ ಬರುವುದಕ್ಕೆ ಕನ್ನಡಪರ ಸಂಘಟನೆಗಳು ಯಾವ ರೀತಿ ತಮಗೆ ಬೆಂಬಲಿಸಿವೆ ತಾವು ಮನವರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಪೋಟ, ಅಪರಿಚಿತ ವ್ಯಕ್ತಿಗಳ ವಿರುದ್ದ ಎಫ್‍ಐಆರ್
ಇದನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ನಾವು ಕನ್ನಡದ ಪರ ಇದ್ದೇವೆ ಎಂದು ಘರ್ಜಿಸುತ್ತಿದ್ದೀರಿ. ಇದೆಲ್ಲಾದಕ್ಕೂ ಉತ್ತರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನ್ನಡಪರ ಸಂಘಟನೆಗಳು ತಮಗೆ ಪಾಠ ಕಲಿಸುತ್ತವೆ ಎಂದು ಎಚ್ಚರಿಸಿದ್ದಾರೆ.
ಕನ್ನಡಪರ ಹೋರಾಟಗಾರರಿಗೆ ಪೊಲೀಸ್ ಏಟು ,ಬಂಧನ , ಧಮ್ಕಿಗಳು ಇವೆಲ್ಲವೂ ಸಹಜ ನ್ಯಾಯಾಂಗ ಬಂಧನದಲ್ಲಿರುವ ಕನ್ನಡಪರ ಹೋರಾಟಗಾರರಿಗೆ ಶಕ್ತಿ ತುಂಬುವ ಕೆಲಸ ನಾವು ಮಾಡಬೇಕಿದೆ. ಕರವೇ ಕನ್ನಡಿಗರ ಧ್ವನಿ ಸಂಘಟನೆ ಮುಂದಿನ ಎಲ್ಲಾ ಹೋರಾಟಕ್ಕೂ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದ್ದಾರೆ.