Friday, September 20, 2024
Homeರಾಜ್ಯರಾಜ್ಯಪಾಲರ ವಿರುದ್ಧ ಕನ್ನಡ ಒಕ್ಕೂಟದ ಹೋರಾಟದ ಎಚ್ಚರಿಕೆ

ರಾಜ್ಯಪಾಲರ ವಿರುದ್ಧ ಕನ್ನಡ ಒಕ್ಕೂಟದ ಹೋರಾಟದ ಎಚ್ಚರಿಕೆ

ಬೆಂಗಳೂರು, ಆ.20- ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರು ಹೊರಡಿಸಿರುವ ಪ್ರಾಸಿಕ್ಯೂಷನ್‍ಅನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸುವುದಾಗಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ನೀಡಿರುವ ಪ್ರಾಸಿಕ್ಯೂಷನ್ ಹಿಂಪಡೆಯಬೇಕು.

ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದರು. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶಿವರಾಮೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಕನ್ನಡ ಚಳವಳಿ ನಾಯಕರಾದ ಸಾ.ರಾ.ಗೋವಿಂದು ಮಾತನಾಡಿ, ಮುಖ್ಯಮಂತ್ರಿಗಳ ಮೇಲೆ ಗಂಭೀರ ಆರೋಪ ಮಾಡಬೇಕಾದರೆ, ಸಿಐಡಿ, ಲೋಕಾಯುಕ್ತ, ಈ ರೀತಿಯ ತಲಿಕಾ ಸಂಸ್ಥೆಗಳಲ್ಲಿ ದೂರು ದಾಖಲಾಗಿರಬೇಕು. ಆದರೆ ಏಕಾಏಕಿ ರಾಜ್ಯಪಾಲರು ದುರುದ್ದೇಶದಿಂದ ಯಾರೋ ಗೊತ್ತು ಗುರಿ ಇಲ್ಲದ ವ್ಯಕ್ತಿ ದೂರು ಕೊಟ್ಟಾಗ ಪ್ರಕರಣಕ್ಕೆ ಸ್ಪಂದಿಸಿ ತಮ್ಮ ಅ„ಕಾg ದುರುಪಯೋಗಪಡಿಸಿಕೊಂಡು, ಮುಖ್ಯಮಂತ್ರಿಗಳ ಮೇಲೆ ನ್ಯಾಯಾಂಗ ತನಿಖೆಗೆ ಆದೇಶಿಸಿರುವುದು ಹುನ್ನಾರದ ಪ್ರತಿಬಿಂಬವಾಗಿದೆ ಎಂದು ಆಪಾದಿಸಿದರು.

ಇದು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಮುಖಂಡರ ಕುತಂತ್ರದ -Àಲವಾಗಿದೆ. ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳಂಕ ರಹಿತವಾಗಿ ಆಡಳಿತ ಕೊಟ್ಟಿz್ದÁರೆ. ಅವರನ್ನು ಅ„ಕಾರದಿಂದ ಕೆಳಗಿಳಿಸಬೇಕೆಂಬ ದುರುದ್ದೇಶವೇ ಹೊರತು ಬೇರೇನೂ ಇಲ್ಲ ಎಂದು ದೂರಿದರು. ನಾವು ಕನ್ನಡ ಪರ ಸಂಘಟನೆಗಳು ಬಹಳಷ್ಟು ಸಾರಿ ರಾಜಭವನದ ಮುಂದೆ ಭಾಷೆಗಾಗಿ ಕಾವೇರಿ ಹೋರಾಟ, ಮಹದಾಯಿ ಹೋರಾಟ ಹೀಗೆ ಅನೇಕ ಕನ್ನಡಪರ ಹೋರಾಟಗಳನ್ನು ಮಾಡಿದರೂ ನ್ಯಾಯ ಕೊಡದ ರಾಜ್ಯಪಾಲರು ಈಗ ಕೂಡಲೇ ಅಬ್ರಾಹಂ ಕೊಟ್ಟಿರುವ ದೂರಿಗೆ ಸ್ಪಂದಿಸಿz್ದÁರೆ. ಇದು ಏಕಪಕ್ಷೀಯವಾಗಿದೆ. ಅಬ್ರಾಹಂ ಒಬ್ಬ ಲಂಚಕೋರ. ಭ್ರಷ್ಟ ವ್ಯಕ್ತಿ ಈಗಾಗಲೇ ಅವರ ಮೇಲೆ ಲಂಚದ ಆರೋಪ ಇದೆ. ದಂಡ ವಿ„ಸಿಕೊಂಡಿz್ದÁರೆ. ಇಂತಹ ವ್ಯಕ್ತಿತ್ವವುಳ್ಳ ವ್ಯಕ್ತಿಗೆ ಇವರು ಮಣೆ ಹಾಕಿz್ದÁರೆ. ಇದನ್ನು ರಾಜ್ಯದ ಜನ ಕ್ಷಮಿಸುವುದಿಲ್ಲ ಎಂದರು.

ರಾಜ್ಯಪಾಲರು ಮುಖ್ಯಮಂತ್ರಿಗೆ ನೋಟಿಸ್ ಕೊಡುವ ಅ„ಕಾರ ಇರಬಾರದು. ಈ ಬಗ್ಗೆ ಪ್ರಜಾಪ್ರಭುತ್ವ ಉಳಿಸಿಲು ರಾಜ್ಯಾದ್ಯಂತ ಚಳವಳಿ ನಡೆಸಲು ತೀರ್ಮಾನಿಸಿದ್ದೇವೆ. ಕೂಡಲೆ ರಾಜ್ಯಪಾಲರು ನಮ್ಮ ರಾಜ್ಯವನ್ನು ಬಿಟ್ಟು ಹೋಗಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಮಂಜುನಾಥ್ ದೇವ್, ಹೆಚ್.ವಿ.ಗಿರೀಶ್ ಗೌಡ ಹಾಗೂ ಅನೇಕ ಕನ್ನಡಪರ ಮುಖಂಡರು ಉಪಸ್ಥಿತರಿದ್ದರು.

RELATED ARTICLES

Latest News