Saturday, April 5, 2025
Homeರಾಜ್ಯಮೈಸೂರಿನ ಮಾಲ್‍ನಲ್ಲಿ ಪಾಕ್ ಪರ ಘೋಷಣೆ

ಮೈಸೂರಿನ ಮಾಲ್‍ನಲ್ಲಿ ಪಾಕ್ ಪರ ಘೋಷಣೆ

ಮೈಸೂರು,ಜು.22-ನಗರದ ಟಿಆರ್‍ಸಿ ಮಾಲ್‍ನಲ್ಲಿ ರಾತ್ರಿ 9:55 ಸಮಯದಲ್ಲಿ ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ. ನಗರದ ಗೋಕುಲಮ್ ರಸ್ತೆಯಲ್ಲಿರುವ ಪ್ರತಿಷ್ಠಿತ ಬಿಎಮïಎಲ್ ಮಾಲ್ ನಲ್ಲಿ ಬ್ಯಾಡ್ ನ್ಯೂಸ್ ಚಿತ್ರವು ಡಿಆರ್‍ಸಿ ಫಿಲಂಸ್ ನಲ್ಲಿ ರಿಲೀಸ್ ಆಗಿದ್ದು, ಫಿಲಂ ಪ್ರಾರಂಭದಲ್ಲಿ ಒಂದೇ ಮಾತರಂ ಹಾಡು ಬರುವಾಗ ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.

ಘೋಷಣೆ ಕೂಗಿದ ನಂತರ ಪರ ವಿರೋ„ಗಳ ಮಾತಿನ ಚಕಮಕಿ ಜೋರಾಗಿ ನಡೆದಿದ್ದು, ಸ್ಥಳಕ್ಕೆ ಡಿಆರ್‍ಸಿ ಫಿಲಂ ಸೆಕ್ಯೂರಿಟಿ ಹಾಗೂ ಪೊಲೀಸರು ಮಧ್ಯಸ್ಥಿಕೆ ವಹಿಸಿ ಘೋಷಣೆ ಕೂಗಿದವರನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣವು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇನ್‍ಸ್ಪೆಕ್ಟರ್‍ಕುಮಾರ್ ನೇತೃತ್ವದಲ್ಲಿ ವಿಚಾರಣೆ ಮುಂದುವರೆಯಲಿದೆ.

RELATED ARTICLES

Latest News