Tuesday, September 2, 2025
Homeರಾಜ್ಯತೆರಿಗೆ ಪಾವತಿಸದಿದ್ದರೆ ಆಸ್ತಿ ಜಪ್ತಿ : ಬೆಂಗಳೂರಿಗರಿಗೆ ಮೊದಲ ಶಾಕ್‌ ನೀಡಿದ GBA

ತೆರಿಗೆ ಪಾವತಿಸದಿದ್ದರೆ ಆಸ್ತಿ ಜಪ್ತಿ : ಬೆಂಗಳೂರಿಗರಿಗೆ ಮೊದಲ ಶಾಕ್‌ ನೀಡಿದ GBA

Property seizure if tax is not paid: GBA gives first shock

ಬೆಂಗಳೂರು, ಸೆ.2- ಬಿಬಿಎಂಪಿ ಹೆಸರು ಹೋಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆಯಾದ ದಿನವೇ ಸಾರ್ವಜನಿಕ ರಿಗೆ ತೆರಿಗೆ ಶಾಕ್‌ ನೀಡಲಾಗಿದೆ.ತೆರಿಗೆ ಬಾಕಿ ಉಳಿಸಿಕೊಂಡ ವರಿಗೆ ಶಾಕ್‌ ನೀಡಿರುವ ಜಿಬಿಎ ಅಧಿಕಾರಿಗಳು ಕಳೆದ ಕೆಲವು ವರ್ಷಗಳಿಂದ ತೆರಿಗೆ ಪಾವತಿಸದವರಿಗೆ ನೊಟೀಸ್‌‍ ಜಾರಿ ಮಾಡಿದೆ.

ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ಅವರು ತೆರಿಗೆ ಪಾವತಿಸದವರಿಗೆ ನೊಟೀಸ್‌‍ ಜಾರಿ ಮಾಡಿದ್ದಾರೆ. ಒಂದು ವೇಳೆ ತೆರಿಗೆ ಪಾವತಿ ಸದಿದ್ದರೆ ಅಂತಹವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಸುಮಾರು 2.75 ಲಕ್ಷ ತೆರಿಗೆದಾರರಿಂದ ಬರೋಬ್ಬರಿ 786 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಬೇಕಿದೆ. ಹೀಗಾಗಿ ಆಸ್ತಿ ಸುಸ್ತಿದಾರರಿಗೆ ಎಲೆಕ್ಟ್ರಾನಿಕ್‌ ಡಿಮ್ಯಾಂಡ್‌ ನೋಟಿಸ್‌‍ ಕಳುಹಿಸಲಾಗಿದೆ.

ಬಾಕಿ ಇರುವ ತೆರಿಗೆಯನ್ನು ಆನ್‌ ಲೈನ್‌ ನಲ್ಲಿ ಪಾವತಿಸುವಂತೆ ಸೂಚನೆ ನೀಡಲಾಗಿದೆ. ತೆರಿಗೆ ಪಾವತಿ ಮಾಡದಿದ್ರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಅತಿ ಹೆಚ್ಚು ಬಾಕಿ ತೆರಿಗೆ ಉಳಿಸಿಕೊಂಡವರ ಮಾಹಿತಿ; ಮಹದೇವಪುರ ವಲಯದಲ್ಲಿ 65,040 ಆಸ್ತಿ ಮಾಲೀಕರಿಂದ 1,97,90,55,057 ಕೋಟಿ ಬಾಕಿ ಇದೆ. ದಕ್ಷಿಣ ವಲಯದಲ್ಲಿ 25162 ಆಸ್ತಿ ಮಾಲೀಕರಿಂದ 1,16,81,67,031 ಕೋಟಿ ಬಾಕಿ ಬರಬೇಕಿದೆ.

ಪೂರ್ವ ವಲಯದಲ್ಲಿ 37,574 ಆಸ್ತಿ ಮಾಲೀಕರಿಂದ 1,15,30,83,768 ಕೋಟಿ, ಬೊಮ್ಮನಹಳ್ಳಿ ವಲಯದಲ್ಲಿ 45,293 ಆಸ್ತಿ ಮಾಲೀಕರಿಂದ 1,07,26,67,754 ಕೋಟಿ, ಯಲಹಂಕ ವಲಯದಲ್ಲಿ 28,022 ಆಸ್ತಿ ಮಾಲೀಕರಿಂದ 80,61,44,875 ಕೋಟಿ, ಪಶ್ಚಿಮ ವಲಯದಲ್ಲಿ 25,321 ಆಸ್ತಿ ಮಾಲೀಕರಿಂದ 75,28,89,617 ಕೋಟಿ, ರಾಜರಾಜೇಶ್ವರಿ ನಗರ ವಲಯದಲ್ಲಿ 38,358 ಆಸ್ತಿ ಮಾಲೀಕರಿಂದ 64,84,04,629 ಕೋಟಿ ಹಾಗೂ ದಾಸರಹಳ್ಳಿ ವಲಯದಲ್ಲಿ 11,172 ಆಸ್ತಿ ಮಾಲೀಕರಿಂದ 28,82,26,616 ಕೋಟಿ ಬಾಕಿ ಇದೆ.
ಒಟ್ಟು ಎಂಟು ವಲಯದಲ್ಲಿ 2,75,942 ಆಸ್ತಿ ಮಾಲೀಕರಿಂದ 7,86,86,39,351 ಕೋಟಿ ಬಾಕಿ ಬರಬೇಕಿರುವುದನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಕಡು ನಿರ್ಧಾರಕ್ಕೆ ಬರಲಾಗಿದೆ.

RELATED ARTICLES

Latest News