ಬೆಳಗಾವಿ,ಡಿ.9-ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಅಧಿವೇಶನ ಮೊದಲ ದಿನವೇ ಸಾಲು ಸಾಲು ಪ್ರತಿಭಟನೆಗಳು ಸುವರ್ಣ ಸೌಧದ ಹೊರಗಡೆ ಗಮನ ಸೆಳೆದಿವೆ.
ಮೊದಲ ದಿನವಾದ ಇಂದು ಸೋಮವಾರ ಸುಮಾರು 11 ಪ್ರತಿಭಟನೆಗಳು ಗರಿಹೆದರಿದ್ದು, ಸುವರ್ಣ ಸೌಧದ ಹತ್ತಿರ ೞಸುವರ್ಣ ಗಾರ್ಡನನಲ್ಲಿ ಹಾಗೂ ಕೊಂಡಸಕೊಪ್ಪ ಬೆಟ್ಟದಲ್ಲಿ ಪ್ರತಿಭಟನೆಗೆ ಅವಕಾಶ ಮಾಡಿಕೊಡಲಾಗಿದೆ. ಕರ್ನಾಟಕ ರೈತ ಸಂಘದ ಹಸಿರು ಬ್ರಿಗೇಡ್, ಅಖಿಲ ಕರ್ನಾಟಕ ರೈತ ಸಂಘ, ಜೈನ ಸಮಾಜಕ್ಕೆ ನಿಗಮ ಮಂಡಳಿ ನೀಡುವಂತೆ, ನಿಗಮದ ಕಾರ್ಮಿಕ ಒಕ್ಕೂಟ ಸೇರಿ ಒಟ್ಟು 11 ಪ್ರಮುಖ ಸಂಘಟನೆಗಳಿಂದ ವಿವಿಧ ಬೇಡಿಕೆಗಳಿಗೆ ಪ್ರತಿಭಟನೆ ಇಂದು ನಡೆಯಿತು.
ಚಳಿಗಾಲ ಅಧಿವೇಶನಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಬೆಳಗಾವಿ ನಗರ ಡಿಐಜಿ ಯಡಾ ಮಾರ್ಟಿನ್ ನೇತೃತ್ವದಲ್ಲಿ 7 ಎಸ್ಪಿ, 12 ಎಎಸ್ ಪಿ, 43 ಡಿಎಸ್ಪಿ , 123 ಸಿಪಿಐ ಸೇರಿದಂತೆ ಒಟ್ಟು 4156 ಪೋಲಿಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.
35 , 10 ಡಿ ಆರ್ ತುಕಡಿ,10 ಡ್ರೋನ್ ಕ್ಯಾಮರಾ ಜೊತೆ 300 ಬಾಡಿ ಕ್ಯಾಮರಾಗಳ ಬಳಕೆ ಮಾಡಲಾಗಿದೆ. ಸುವರ್ಣಸೌಧ ಮುಖ್ಯ ದ್ವಾರಸಲ್ಲಿ ಎಸ್ಪಿ ದರ್ಜೆಯ ಐಪಿಎಸ್ ಅಧಿಕಾರಿಯನ್ನು ನೇಮಿಸಲಾಗಿದೆ.ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ಕೂಡ ಯಾವುದೇ ಭದ್ರತಾಲೋಪ ಆಗದಂತೆ ವಿವಿಧ ಪಡೆಗಳನ್ನು ಕಣ್ಗಾವಲು ಇರಿಸಿದ್ದಾರೆ.