Friday, November 22, 2024
Homeರಾಜ್ಯಪಿಎಎಸ್‌‍ಐ ಪರಶುರಾಮ್‌ ಅಸಹಜ ಸಾವು, ಸರ್ಕಾರಕ್ಕೆ ತಲೆನೋವು

ಪಿಎಎಸ್‌‍ಐ ಪರಶುರಾಮ್‌ ಅಸಹಜ ಸಾವು, ಸರ್ಕಾರಕ್ಕೆ ತಲೆನೋವು

ಬೆಂಗಳೂರು,ಆ.3- ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣಗಳಿಂದ ರಾಜ್ಯಸರ್ಕಾರ ಮುಜುಗರಕ್ಕೆ ಒಳಗಾಗಿರುವ ನಡುವೆಯೇ ಪೊಲೀಸ್‌‍ ಅಧಿಕಾರಿ ಅಸಹಜ ಸಾವು ರಾಜ್ಯಸರ್ಕಾರಕ್ಕೆ ಸಾಕಷ್ಟು ಇರಿಸುಮುರಿಸು ಉಂಟುಮಾಡಿದೆ.

ಯಾದಗಿರಿ ಪಿಎಎಸ್‌‍ಐ ಪರಶುರಾಮ್‌ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಂದು ಪರಶುರಾಮ್ ಅವರ ಪತ್ನಿ ಶ್ವೇತಾ ಅವರು ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಸಂಗೀತ ಅವರಿಗೆ ದೂರು ನೀಡಿದ್ದು, ತಮ ಪತಿಗೆ ಸ್ಥಳ ನಿಯೋಜನೆಗಾಗಿ ಹಣ ನೀಡುವಂತೆ ಸ್ಥಳೀಯ ಶಾಸಕ ಚೆನ್ನರೆಡ್ಡಿ ಪಾಟೀಲ್‌ ಮತ್ತು ಅವರ ಪುತ್ರ ಪದೇಪದೇ ಒತ್ತಡ ಹೇರುತ್ತಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ದೂರಿದ್ದಾರೆ.

ನಿನ್ನೆ ರಾತ್ರಿ ಆಸ್ಪತ್ರೆಯ ಮುಂಭಾಗ ದಲ್ಲೇ ಧರಣಿ ನಡೆಸಿದ ಶ್ವೇತಾ, ಶಾಸಕ ಚೆನ್ನರೆಡ್ಡಿ ಪಾಟೀಲ್‌ ಸ್ಥಳಕ್ಕೆ ಆಗಮಿಸ ಬೇಕೆಂದು ಪಟ್ಟು ಹಿಡಿದಿದ್ದರು.ಸಂಬಂಧಿಕರು ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರ ದುಡ್ಡಿನ ಆಸೆ ಹೆಚ್ಚಾಗಿದೆ. 7 ತಿಂಗಳಲ್ಲೇ ವರ್ಗಾವಣೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ನಡೆದು 17 ಘಂಟೆಗಳಾದರೂ ಪೊಲೀಸರು ದೂರು ದಾಖಲಿಸಿಲ್ಲ. ಇದನ್ನು ವಿರೋಧಿಸಿ ವಿವಿಧ ಸಂಘಟನೆ ಗಳು ರಾಷ್ಟ್ರೀಯ ಹೆದ್ದಾರಿ -150 ರಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಕಿಮ್ಸೌ ಆಸ್ಪತ್ರೆಯ ಎದುರೇ ಪ್ರತಿಭಟನೆ ನಡೆದಿದ್ದರಿಂದಾಗಿ ಆಸ್ಪತ್ರೆಗೆ ಹೋಗಿಬರುವ ರೋಗಿಗಳಿಗೆ ತೀವ್ರ ತೊಂದರೆಯಾಯಿತು.
ಪರಶುರಾಮ್‌ ಕುಟುಂಬದ ಸದಸ್ಯರೂ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದಾಗಿ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ವಿರೋಧಪಕ್ಷಗಳ ಮುಖಂಡರು ಪರಶುರಾಮ್‌ರ ಸಾವಿನ ಪ್ರಕರಣವನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ವರ್ಗಾವಣೆಗೆ ಭಾರಿ ಪ್ರಮಾಣದ ಲಂಚ ಪಡೆಯಲಾಗುತ್ತಿದೆ. ಪ್ರಭಾವಿಗಳ ಹಸ್ತಕ್ಷೇಪದಿಂದ ವರ್ಗಾವಣೆಯಾಗುತ್ತಿದೆ. ಒಂದರ ಮೇಲೊಂದರ ಹಗರಣದ ಜೊತೆಗೆ ಅಧಿಕಾರಿಗಳ ವರ್ಗಾವಣೆಯಲ್ಲೂ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ.

RELATED ARTICLES

Latest News