Friday, November 22, 2024
Homeಕ್ರೀಡಾ ಸುದ್ದಿ | SportsUFC ಫೈನಲ್ಸ್ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಪೂಜಾ ತೋಮರ್

UFC ಫೈನಲ್ಸ್ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಪೂಜಾ ತೋಮರ್

ಲೂಯಿಸ್ವಿಲ್ಲೆ, ಜೂ.9- ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್‍ಶಿಪ್ (UFC)ನಲ್ಲಿ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಫೈನಲ್ಸ್ ಗೆಲ್ಲುವ ಮೂಲಕ ಭಾರತದ ಯುವ ಮಹಿಳಾ ಬಾಕ್ಸರ್ ಪೂಜಾ ತೋಮರ್ ಇತಿಹಾಸ ಸೃಷ್ಟಿಸಿದ್ದಾರೆ. ಇಲ್ಲಿ ನಡೆದ UFC ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ರಾಯನ್ನೆ ಡಾಸ್ ಸ್ಯಾಂಟೋಸ್‍ರ ಪ್ರಬಲ ಪೈಪೋಟಿ ಎದುರಿಸಿದ ಉತ್ತರಪ್ರದೇಶದ ಮುಜಾಫರ್ ನಗರದ ಪೂಜಾ ತೋಮರ್ ಗೆಲುವು ಸಾಧಿಸಿ ಇಡೀ ದೇಶವೇ ತನ್ನತ್ತ ತಿರುಗುವಂತೆ ಮಾಡಿದ್ದಾರೆ.

ಮೊದಲ ಸುತ್ತಿನಿಂದಲೇ ತಮ್ಮಲ್ಲಿರುವ ತಂತ್ರಗಳನ್ನು ಸಮರ್ಥವಾಗಿ ಬಳಸಿಕೊಂಡ ಪೂಜಾ ತೋಮರ್ ಎದುರಾಳಿ ತಂಡದ ಮಹಿಳಾ ಬಾಕ್ಸರ್‍ಗೆ ಬಲವಾದ ಪೆಟ್ಟು ನೀಡುವ ಮೂಲಕ 30-27 ಅಂಕಗಳ ಅಂತರದಿಂದ ಗೆಲುವಿನ ನಗೆ ಚೆಲ್ಲಿದ್ದಾರೆ. ಎರಡನೇ ಸುತ್ತನ್ನು ಗೆಲ್ಲುವ ಮೂಲಕ ಪದಕವನ್ನು ಕೊರಳಿಗೇರಿಸಿಕೊಳ್ಳುವ ಹಂಬಲ ಹೊಂದಿದ್ದ ಪೂಜಾಗೆ ಎರಡನೇ ಸುತ್ತಿನಲ್ಲಿ ರಾಯನ್ನೆ ಡಾಸ್ ಸ್ಯಾಂಟೋಸ್ ತಿರುಗೇಟು ನೀಡಿದರು.
ಎರಡನೇ ಸುತ್ತಿನ ಆರಂಭದಲ್ಲಿ ಮೇಲುಗೈ ಸಾ„ಸಿದ್ದ ಪೂಜಾರ ಹೊಡೆತಗಳನ್ನು ನಂತರ ಸಮರ್ಥವಾಗಿ

ಡಿಫೆನ್ಸ್ ಮಾಡಿದ ಬ್ರೆಜಿಲ್ ಬಾಕ್ಸರ್ 27-30 ಅಂತರದ ಮುನ್ನೆಡೆ ಸಾಧಿಸಿದರು. ನಂತರ ಗೆಲುವಿಗಾಗಿ ನಿರ್ಣಾಯಕವಾಗಿದ್ದ ಸುತ್ತು ತೀರಾ ಜಿದಾ-ಜಿದ್ದಿನಿಂದ ಕೂಡಿತ್ತು. ಆದರೆ ತಮ್ಮಲ್ಲಿರುವ ಕೌಶಲ್ಯತೆಯನ್ನು ಸಮಯಕ್ಕೆ ಸರಿಯಾಗಿ ಬಳಸಿಕೊಂಡ ಪೂಜಾ 29-28 ಅಂಕಗಳ ಕೂದಲೆಳೆಯ ಅಂತರದಿಂದ ಜಯಮಾಲೆಯನ್ನು ತಮ್ಮ ಕೊರಳಿಗೇರಿಸಿಕೊಂಡರು.

ಭಾರತದ ಬಾಕ್ಸರ್‍ಗಳಿಗೆ ಗೆಲುವು ಅರ್ಪಣೆ:
UFC ಫೈನಲ್ಸ್ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಪೂಜಾ ತೋಮರ್ನಲ್ಸ್‍ನಲ್ಲಿ ಜಯಭೇರಿ ಬಾರಿಸಿ ಇತಿಹಾಸ ಸೃಷ್ಟಿಸಿದ ನಂತರ ಮಾತನಾಡಿದ ಪೂಜಾ ತೋಮರ್, ನನ್ನ ಈ ಗೆಲುವನ್ನು ಭಾರತದ ಬಾಕ್ಸರ್ಸ್ ಮತ್ತು ಎಂಎಂಎ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. ಭಾರತದಫೈಟರ್ಸ್ UFC ಚಾಂಪಿಯನ್‍ಶಿಪ್‍ನಲ್ಲಿ ಗೆಲುವು ಸಾಧಿಸಲು ಅನರ್ಹರಲ್ಲ ಎಂದು ವಿಶ್ವದೆಲ್ಲೆಡೆ ಮಾತುಗಳು ಕೇಳಿಬಂದಿದ್ದವು. ಆದರೆ ಈ ಗೆಲುವು ಟೀಕಾಕಾರರಿಗೆ ತಕ್ಕ ಉತ್ತರ ನೀಡಿದಂತಾಗಿದೆ.

ಭಾರತದ ಹೋರಾಟಗಾರರು ಸೋಲುವವರಲ್ಲ ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸುವುದು ನನ್ನ ಮುಖ್ಯ ಉದ್ದೇಶವಾಗಿತ್ತು. ನಾವು ಎಲ್ಲ ರಂಗಗಳಲ್ಲೂ ಉನ್ನತ ಸ್ಥಾನಕ್ಕೇರುತ್ತಿದ್ದೇವೆ. ಮತ್ತೆ ನಾವು ಹಿಂದಿರುಗಿ ನೋಡುವ ಪ್ರಶ್ನೆಯೇ ಇಲ್ಲ. ನಾವು ಬೇಗ UFC ಚಾಂಪಿಯನ್ ಶಿಪ್ ಪಟ್ಟವನ್ನು ಗೆಲ್ಲುತ್ತೇವೆ ಎಂದು ಹೇಳಿದ್ದೆ. ಈಗ ಸಿಕ್ಕಿರುವ ಗೆಲುವು ಖಂಡಿತಾವಾಗಿಯೂ ನನ್ನ ಗೆಲುವಲ್ಲ. ಇದು ಎಲ್ಲಾ ಭಾರತದ ಹೋರಾಟಗಾರರು ಹಾಗೂ ಅಭಿಮಾನಿಗಳಿಗೆ ದೊರೆತ ಗೆಲುವಾಗಿದೆ' ಎಂದು ಪೂಜಾ ತೋಮರ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಫೈನಲ್ ಪಂದ್ಯಕ್ಕೂ ಮುನ್ನ ಸ್ಟೇಡಿಯಂನಲ್ಲಿ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯೂ ಕಂಠಘೋಷವಾಗಿ ಮೊಳಗಿತ್ತು. ಇದು ನಿಜಕ್ಕೂ ನನಗೆ ಹೆಮ್ಮೆ ಮೂಡಿಸಿತು. ಅಲ್ಲದೆ ರೋಮಾಂಚನವಾಯಿತು. ಪಂದ್ಯದಲ್ಲಿ ನನಗೆ ಯಾವುದೇ ಒತ್ತಡವಿರಲಿಲ್ಲ, ಅಲ್ಲದೆ ಚಾಂಪಿಯನ್ ಪಟ್ಟವನ್ನು ಗೆಲ್ಲುತ್ತೇನೆ ಎಂಬ ಅಚಲ ವಿಶ್ವಾಸ ಹೊಂದಿದ್ದೆ. ಪಂದ್ಯದಲ್ಲಿ ನಾನು ಎದುರಾಳಿ ಸ್ಪರ್ಧಿಯಿಂದ ಒಂದೆರಡು ಬಲವಾದ ಪಂಚ್‍ಗಳನ್ನು ಪಡೆದಿದ್ದೆ. ಆದರೂ ಅದರಿಂದ ಚೇತರಿಸಿಕೊಂಡು ನನ್ನ ಆಟವನ್ನು ಉತ್ತಮಪಡಿಸಿಕೊಳ್ಳುತ್ತಾ ಸಾಗಿದ ನಾನು ಕೊನೆಗೂ ಟ್ರೋಫಿ ಗೆದ್ದು ಸಂಭ್ರಮಿಸಿದ್ದೇನೆ’ ಎಂದು ಪೂಜಾ ತೋಮರ್ ತಿಳಿಸಿದರು.

ಈ ಹಿಂದೆ UFC ಚಾಂಪಿಯನ್‍ಶಿಪ್‍ನಲ್ಲಿ ಭಾರತದವರೇ ಆದ ಭಾರತ್ ಖಂಡ್ರೆ ಹಾಗೂ ಅನ್ಷುಲ್ ಜುಬ್ಲಿ ಅವರು ಕಾದಾಟ ನಡೆಸಿದ್ದರಾದರೂ ಚಾಂಪಿಯನ್ ಪಟ್ಟ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಬ್ರೆಜಿಲ್‍ನ ರಾಯನ್ನೆ ಡಾಸ್ ಸ್ಯಾಂಟೋಸ್ ಅವರನ್ನು ಮಣಿಸಿದ ಪೂಜಾ ತಾಮೋರ್ ಇತಿಹಾಸ ಸೃಷ್ಟಿಸಿದ್ದಾರೆ.

RELATED ARTICLES

Latest News