ಚಂಡೀಗಢ, ಅ.27- ಗಡಿಯಾಚೆಗಿನ ಕಳ್ಳಸಾಗಣೆ ದಂಧೆಯನ್ನು ಪತ್ತೆಹಚ್ಚಿ ವಿದೇಶಿ ಮೂಲದ ಮಾದಕವಸ್ತು ಕಳ್ಳಸಾಗಣೆದಾರನ ಇಬ್ಬರು ಸಹಚರರನ್ನು ಬಂಧಿಸುವ ಮೂಲಕ ಪಂಜಾಬ್ ಪೊಲೀಸರು 105 ಕೆಜಿ ಹೆರಾಯಿನ್ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಪಾಕಿಸ್ತಾನದಿಂದ ಡ್ರಗ್ಸ್ ಸಾಗಿಸಲು ನೀರಿನ ಮಾರ್ಗವನ್ನು ಬಳಸಲಾಗುತ್ತಿತ್ತು ಎಂದು ಪಂಜಾಬ್‌ನ ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ ವಿದೇಶಿ ಮೂಲದ ಮಾದಕವಸ್ತು ಕಳ್ಳಸಾಗಣೆದಾರನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ ಮತ್ತು ಐದು ವಿದೇಶಿ ನಿರ್ಮಿತ ಮತ್ತು ಒಂದು ದೇಶ ನಿರ್ಮಿತ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಗುಪ್ತಚರ ಮಾಹಿತಿ ಆಧಾರದಲ್ಲಿ ನಡೆದ ದೊಡ್ಡ ಕಾರ್ಯಾಚರಣೆಯಾಗಿದ್ದು,ಗಡಿಯಾಚೆಗಿನ ಕಳ್ಳಸಾಗಣೆ ದಂಧೆಯನ್ನು ಭೇದಿಸಿದ್ದಾರೆ ಮತ್ತು ವಿದೇಶಿ ಮೂಲದ ಮಾದಕವಸ್ತು ಕಳ್ಳಸಾಗಣೆದಾರ ನವಪ್ರೀತ್ ಸಿಂಗ್ ನವ್‌ಭುಲ್ಲರ್‌ನ ಸಹಚರರಾದ ನವಜೋತ್ ಸಿಂಗ್ ಮತ್ತು ಲವ್‌ಪ್ರೀತ್‌ಕುಮಾರ್ ಅವರನ್ನು ಬಂಧಿಸಲಾಗಿದೆ.
ಮದಕ ವಸ್ತು ಜೊತೆಗೆ , 17 ಕೆಜಿ ಡಿಎಂಆರ್, 5 ವಿದೇಶಿ ನಿರ್ಮಿತ ಪಿಸ್ತೂಲ್ ಮತ್ತು 1 ದೇಸಿ ಕಟ್ಟಾ ಹಾಗು ಟೈರ್‌ಗಳ ದೊಡ್ಡ ರಬ್ಬರ್ ಟ್ಯೂಬ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.ಈ ದಂಧೆಯಲ್ಲಿ ಇನ್ನಷ್ಟು ಅಪರಾಧಿಗಳನ್ನು ಬಂಧಿಸಲು ತನಿಖೆ ನಡೆಯುತ್ತಿದೆ ಎಂದು ಡಿಜಿಪಿ ಹೇಳಿದರು.