ಚಂಡೀಗಢ, ಸೆ 15- ನಗರದಲ್ಲಿ ಸಂಭವಿಸಿದ ಗ್ರೆನೇಡ್ ಸ್ಫೋಟ ಘಟನೆಯಲ್ಲಿ ಭಾಗಿಯಾಗಿದ್ದ ಎರಡನೇ ಶಂಕಿತ ಆರೋಪಿಯನ್ನು ಬಂಧಿಸಿರುವುದಾಗಿ ಪಂಜಾಬ್ ಪೊಲೀಸರು ತಿಳಿಸಿದ್ದಾರೆ. ಗುರುದಾಸ್ಪುರದ ಬಟಾಲಾದ ರೈಮಲ್ ಗ್ರಾಮದ ನಿವಾಸಿ ವಿಶಾಲ್ ಮಸಿಹ್ ಅವರನ್ನು ದೆಹಲಿಯಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.
ಕಳೆದ ಸೆ.11ರಂದು ಇಲ್ಲಿನ ಚಂಡೀಗಢ ಸೆಕ್ಟರ್ 10ರ ಮನೆಯೊಂದ ಬಳಿ ಆಟೋ ರಿಕ್ಷಾದಲ್ಲಿ ಬಂದು ಇಬ್ಬರು ಶಂಕಿತರು ಗ್ರೆನೇಡ್ ಸ್ಫೋಟ ನಡೆಸಿದ್ದರು ಇದು ಭಾರಿ ಆತಂಕ ಮೂಡಿಸಿತ್ತು.
ಸ್ಫೋಟದ ಘಟನೆಯಲ್ಲಿ ಭಾಗಿಯಾಗಿರುವ ಪ್ರಮುಖ ಅಪರಾಧಿ ರೋಹನ್ ಮಸಿಹ್ ನನ್ನು ಪೊಲೀಸರು ಈಗಾಗಲೆ ಬಂಧಿಸಿದ್ದಾರೆ.ಘಟನೆ ನಡೆದ 72 ಗಂಟೆಗಳ ಒಳಗೆ ಕೇಂದ್ರೀಯ ಏಜೆನ್ಸಿಗಳ ಸಮನ್ವಯದೊಂದಿಗೆ ಸ್ಫೋಟದ ಎರಡನೇ ಅಪರಾಧಿಯನ್ನು ಬಂಧಿಸಿದೆ ಎಂದು ಯಾದವ್ ಎಕ್್ಸನಲ್ಲಿ ಪೋಸ್ಟ್ ಮಾಡಿದ್ದಾರೆ.ಸ್ಪೋಟದ ಕುರಿತ್ತು ನಡೆದಿದ್ದ ಪಿತೂರಿಯನ್ನು ಬಹಿರಂಗಪಡಿಸಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಚಂಡೀಗಢ ಗ್ರೆನೇಡ್ ಸ್ಫೋಟದ ಮಾಸ್ಟರ್ ಮೈಂಡ್ ಅನ್ನು ಪಾಕ್ ಮೂಲದ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂದಾ, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಮತ್ತು ಯುಎಸ್ ಮೂಲದ ದರೋಡೆಕೋರ ಹರ್ಪ್ರೀತ್ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾ ಎಂದು ಪೊಲೀಸರು ಹೇಳಿದ್ದಾರೆ..
ತನ್ನ ಸಹಚರರ ಮೂಲಕ ಹ್ಯಾಂಡ್ ಗ್ರೆನೇಡ್ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಿದ ಪಾಸಿಯಾ ಅವರ ಆಜ್ಞೆಯ ಮೇರೆಗೆ ರೋಹನ್ ಗ್ರೆನೇಡ್ ಸ್ಫೋಟದಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.