ಚಂಡೀಗಢ, ಅ 14 (ಪಿಟಿಐ) ಜಮ್ಮು ಮತ್ತು ಕಾಶ್ಮೀರದ ಇಬ್ಬರು ನಿವಾಸಿಗಳನ್ನು ಬಂಧಿಸಿದ ನಂತರ ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಭಯೋತ್ಪಾದನಾ ಘಟಕವನ್ನು ಭೇದಿಸಿರುವುದಾಗಿ ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಅವರಿಂದ ಎರಡು ಸುಧಾರಿತ ಸ್ಪೋಟಕ ಸಾಧನಗಳು, ಎರಡು ಹ್ಯಾಂಡ್ ಗ್ರೆನೇಡ್‍ಗಳು, ಒಂದು ಪಿಸ್ತೂಲ, ಎರಡು ಮ್ಯಾಗಜೀನ್‍ಗಳು, 24 ಕಾಟ್ರ್ರಿಡ್ಜ್‍ಗಳು, ಟೈಮರ್ ಸ್ವಿಚ್, ಎಂಟು ಡಿಟೋನೇಟರ್‍ಗಳು ಮತ್ತು ನಾಲ್ಕು ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ರಾಜ್ಯ ವಿಶೇಷ ಕಾರ್ಯಾಚರಣೆ ಕೋಶ-ಅಮೃತಸರ ಪೊಲೀಸರು ಕೇಂದ್ರೀಯ ಸಂಸ್ಥೆಯೊಂದಿಗೆ ನಡೆಸಿದ್ದರು ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.
ಒಂದು ಪ್ರಮುಖ ಪ್ರಗತಿಯಲ್ಲಿ, ರಾಜ್ಯ ವಿಶೇಷ ಕಾರ್ಯಾಚರಣೆ ಕೋಶ – ಅಮೃತಸರ ಜಂಟಿ ಕಾರ್ಯಾಚರಣೆಯಲ್ಲಿ ಕೇಂದ್ರ ಏಜೆನ್ಸಿಯೊಂದಿಗೆ ಎಲಇಟಿ ಮಾಡ್ಯೂಲ್ ಅನ್ನು ಭೇದಿಸಿ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಾದ ಇಬ್ಬರನ್ನು ಬಂ„ಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮುಖ್ಯಸ್ಥರು ಎಕ್ಸ್‍ನಲ್ಲಿ ಪೊಸ್ಟ್ ಮಾಡಿದ್ದಾರೆ.
ಇಸ್ರೇಲ್‍ನಲ್ಲಿ ಸಿಲುಕಿರುವ ತನ್ನ ಪತ್ನಿಯನ್ನು ಕರೆತರುವಂತೆ ಪ್ರೊಫೆಸರ್ ಮನವಿ
ಭಯೋತ್ಪಾದನಾ ಘಟಕವನ್ನು ಲಷ್ಕರ್-ಎ-ತೊಯ್ಬಾದ ಸಕ್ರಿಯ ಸದಸ್ಯ ಫಿರ್ದೌಸ್ ಅಹ್ಮದ್ ಭಟ್ ನಿರ್ವಹಿಸಿದ್ದಾರೆ ಎಂದು ಯಾದವ್ ಹೇಳಿದರು ಮತ್ತು ಈ ಬಂಧನಗಳನ್ನು ಪಂಜಾಬ್‍ನಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿರುವ ಭಯೋತ್ಪಾದನಾ ಘಟಕಕ್ಕೆ ದೊಡ್ಡ ಹೊಡೆತ ಎಂದು ವಿವರಿಸಿದ್ದಾರೆ.