Friday, November 22, 2024
Homeಅಂತಾರಾಷ್ಟ್ರೀಯ | Internationalಮೋದಿ - ಪುಟಿನ್ ಅನೌಪಚಾರಿಕ ಮಾತುಕತೆ, ಇಲ್ಲಿದೆ ಹೈಲೈಟ್ಸ್

ಮೋದಿ – ಪುಟಿನ್ ಅನೌಪಚಾರಿಕ ಮಾತುಕತೆ, ಇಲ್ಲಿದೆ ಹೈಲೈಟ್ಸ್

ಮಾಸ್ಕೋ,ಜು.9- ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಅಧಿಕೃತ ನಿವಾಸದಲ್ಲಿ ಖಾಸಗಿ ಔತಣಕೂಟದ ಸಂದರ್ಭದಲ್ಲಿ, ಭಾರತದ ಜನರಿಗೆ ಸೇವೆ ಸಲ್ಲಿಸುವುದು ತಮ್ಮ ಏಕೈಕ ಗುರಿ ಎಂದು ಹೇಳಿದ್ದಾರೆ.

ಮಾಸ್ಕೋದಲ್ಲಿರುವ ವ್ಲಾಡಿಮಿರ್‌ ಪುಟಿನ್‌ ಅವರ ನಿವಾಸಕ್ಕೆ (ನೋವೊ-ಒಗಾರ್ಯೊವೊ) ನರೇಂದ್ರ ಮೋದಿ ಅವರನ್ನು ರಷ್ಯಾ ಅಧ್ಯಕ್ಷ ಕೈ ಕುಲುಕಿ, ತಬ್ಬಿಕೊಂಡು ಸ್ವಾಗತಿಸಿದರು. ತಮ ನಿವಾಸದಲ್ಲಿಯೇ ಮೋದಿ ಅವರಿಗೆ ಪುಟಿನ್‌ ಅವರು ಚಹಾ, ಭೋಜನಕೂಟದ ಉಸ್ತುವಾರಿ ನೋಡಿಕೊಂಡರು. ಇದೇ ವೇಳೆ ಉಭಯ ನಾಯಕರು ಔಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ.

ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ಪ್ರಧಾನಿಯಾಗಿದ್ದಕ್ಕೆ ಅಭಿನಂದನೆಗಳು. ನೀವು ಹೊಂದಿರುವ ಸಾಮರ್ಥ್ಯ, ಉತ್ಸಾಹವು ಅಮೋಘವಾದುದು. ನೀವು ದೇಶ ಹಾಗೂ ಸಾರ್ವಜನಿಕರ ಸೇವೆಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದೀರಿ. ನೀವು ನಮ ದೇಶಕ್ಕೆ ಆಗಮಿಸಿರುವುದು ಖುಷಿಯಾಗಿದೆ. ಇನ್ನು, ಬಾರತದಲ್ಲಿ 2.3 ಕೋಟಿ ಮಕ್ಕಳಿದ್ದು, ಅವರು ಭವಿಷ್ಯದ ಬಗ್ಗೆ ಯೋಚಿಸುತ್ತಾರೆ, ಕನಸು ಕಾಣುತ್ತಾರೆ. ಅಲ್ಲದೆ, ಇದು ಭದ್ರ, ಸ್ಥಿರ ಭಾರತದ ಸಂಕೇತವಾಗಿದೆ ಎಂದು ವ್ಲಾಡಿಮಿರ್‌ ಪುಟಿನ್‌ ಅವರು ಖಾಸಗಿ ಭೇಟಿ ವೇಳೆ ಹೊಗಳಿದ್ದಾರೆ.

ಇದಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿ, ನೀವು ಹೇಳಿದ್ದು ಸರಿ. ನನಗೆ ಒಂದೇ ಗುರಿ ಇದೆ. ನನ್ನ ದೇಶ, ಭಾರತದ ಜನರು ಎಂದು ಆಶಯ ವ್ಯಕ್ತಪಡಿಸಿದ್ದಾರೆ. ನೀವು ಸ್ವಂತ ಆಲೋಚನೆಗಳನ್ನು ಹೊಂದಿದ್ದೀರಿ. ಶಕ್ತಿಯುತ ವ್ಯಕ್ತಿ ಕೂಡಾ. ಭಾರತ ಮತ್ತು ಭಾರತೀಯರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಮನೆಯಲ್ಲಿ ಸ್ನೇಹಿತನನ್ನು ಭೇಟಿಯಾಗುವುದು ತುಂಬಾ ಸಂತೋಷವಾಗಿದೆ. ನೀವು ನನ್ನನ್ನು ನಿಮ ಮನೆಗೆ ಆಹ್ವಾನಿಸಿದ್ದೀರಿ. ಅಂತಹ ಆಸಕ್ತಿದಾಯಕ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.

ಎಲೆಕ್ಟ್ರಿಕ್‌ ವಾಹನ ಚಲಾಯಿಸುತ್ತಾ ಮೋದಿ ಅವರನ್ನು ತಮ ನಿವಾಸದ ಉದ್ಯಾನದಲ್ಲಿ ಸುತ್ತಾಡಿಸಿದರು. ಕೆಲಹೊತ್ತು ಕಾಲ್ನಡಿಗೆಯಲ್ಲೂ ಸಂಚರಿಸಿದರು. ಈ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಇಂಗ್ಲಿಷ್‌ನಲ್ಲಿ ಸಂಭಾಷಣೆ ನಡೆಸಿದ್ದಾರೆ.

ಇದಕ್ಕೂ ಮೊದಲು, ಪ್ರಧಾನಿ ಮೋದಿ ಅವರನ್ನು ರಷ್ಯಾ ಅಧ್ಯಕ್ಷ ಪುಟಿನ್‌ ಅವರು, ಖಾಸಗಿ ಔತಣಕೂಟಕ್ಕಾಗಿ ನೊವೊ-ಒಗರಿಯೋವೊದಲ್ಲಿನ ತಮ ಅಧಿಕೃತ ನಿವಾಸದಲ್ಲಿ ಸ್ವಾಗತಿಸಿದರು. ಈ ವೇಳೆ ಪುಟಿನ್‌, ಗೌರವಾನ್ವಿತ ಪ್ರಧಾನ ಮಂತ್ರಿ! ಆತೀಯ ಸ್ನೇಹಿತ! ಮತ್ತೊಮೆ ಶುಭ ಮಧ್ಯಾಹ್ನ, ನಿಮನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ. ನಾವು ನಾಳೆ ಅಽ ಕೃತ ಸಂಭಾಷಣೆಗಳನ್ನು ನಡೆಸುತ್ತೇವೆ. ಆದರೆ ಇಂದು ಈ ಮನೆಯ ವಾತಾವರಣದಲ್ಲಿ ನಾವು ಬಹುಶಃ ಶಾಂತವಾಗಿ ಮಾತನಾಡಬಹುದು ಎಂದು ಮೋದಿಗೆ ತಿಳಿಸಿದ್ದಾರೆ.

ಆತಿಥ್ಯಕ್ಕೆ ಮೋದಿ ಕೃತಜ್ಞತೆ:
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ಮೋದಿ, ಆತಿಥ್ಯಕ್ಕಾಗಿ ಪುಟಿನ್‌ ಅವರಿಗೆ ಕೃತಜ್ಞತೆಗಳು. ಇಂದಿನ ಮಾತುಕತೆಗಾಗಿ ಇಬ್ಬರೂ ಉತ್ಸುಕತೆಯಿಂದ ಕಾಯುತ್ತಿದ್ದೇವೆ. ಭಾರತ ಮತ್ತು ರಷ್ಯಾ ನಡುವಿನ ಸೌಹಾರ್ದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಇದು ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ.

RELATED ARTICLES

Latest News