ಬೆಂಗಳೂರು,ಜೂ.21– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವಲ್ಪವಾದರೂ ಮಾನ ಮಾರ್ಯಾದೆ ಅಥವಾ ಕನಿಷ್ಠ ಪಕ್ಷ ಸಾರ್ವಜನಿಕ ಜೀವನದಲ್ಲಿ ಗೌರವ ಇಟ್ಟುಕೊಂಡಿದ್ದರೆ, ವಸತಿ ಇಲಾಖೆಯಲ್ಲಿ ನಡೆದಿರುವ ಆಕ್ರಮದ ಬಗ್ಗೆ ತನಿಖೆಗೆ ಆದೇಶ ನೀಡಲಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್‌ರವರು ಬಹಿರಂಗ ಸವಾಲು ಹಾಕಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಗೆ ಲಾನುಭವಿಗಳು ಹಣ ನೀಡಬೇಕು ಎಂದು ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕ ಬಿ.ಆರ್.ಪಾಟೀಲ್ ಅವರೇ ಇದನ್ನು ಬಹಿರಂಗಪಡಿಸಿದ್ದಾರೆ. ಲಂಚಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ಎಂದು ಪ್ರಶ್ನೆ ಮಾಡಿದರು.
ವಸತಿ ಇಲಾಖೆಯಲ್ಲಿ ಲಂಚ ಕೊಡದೇ ಮನೆ ಸಿಗುವುದಿಲ್ಲ. ಶಾಸಕರೇ ಇದರ ಬಗ್ಗೆ ಮಾತಾಡಿದ್ದಾರೆ, ಆಡಿಯೋ ಇದೆ. ಇದು ಸ್ಯಾಂಪಲ್ ಮಾತ್ರ, ಮನೆ ಬೇಕಾ ಲಂಚ ಕೊಡಿ, ಸಿಎಂಗೆ ಗೌರವ ಇದ್ದರೆ, , ಮಾನ ಮರ್ಯಾದೆ ಇದ್ದರೆ ಕೂಡಲೇ ಇದನ್ನು ತನಿಖೆಗೆ ಕೊಡಲಿ. ಇಲ್ಲದ ಸಬೂಬು ಹೇಳುವುದು ಬೇಡ ಎಂದು ವಾಗ್ದಾಳಿ ನಡೆಸಿದರು.
ಆಡಳಿತ ಪಕ್ಷದವರೇ ಆಡಳಿತ ಪಕ್ಷದ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ. ಇದು ಭ್ರಷ್ಟ ಸರ್ಕಾರ, 60% ಸರ್ಕಾರ. ಇವರು ಸ್ಲೀಪಿಂಗ್ ಸಿದ್ದರಾಮಯ್ಯ, ನಿದ್ದೆ ಮಾಡೋ ಸಿದ್ದರಾಮಯ್ಯ. ಗಣಿ ಇಲಾಖೆಯಲ್ಲೂ ಲೂಟಿ ನಡೆಯುತ್ತಿದೆ. ಎಲ್ಲ ಇಲಾಖೆಗಳಲ್ಲೂ ಅಕ್ರಮ ನಡೆಯುತ್ತಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಪತ್ರ ಬರೆದಿರುವುದು ಇದಕ್ಕೆ ಸಾಕ್ಷಿ ಎಂದು ಕಿಡಿಕಾರಿದರು.
ಕಾಂಗ್ರೆಸ್ ಶಾಸಕರು ಬಾಯಿ ಬಿಟ್ಟರೆ, ಮೂರು ದಿನ ಈ ಸರ್ಕಾರ ಉಳಿಯುವುದಿಲ್ಲ. ಮನೆಗೆ ಹೋಗಲು ಲಂಚ ಪ್ರಕರಣ ಒಂದೇ ಸಾಕು, ತನಿಖೆಗೆ ವಹಿಸಿದರೆ ಸರ್ಕಾರ ವಜಾ ಆಗುತ್ತದೆ. 224 ಕ್ಷೇತ್ರಗಳಲ್ಲೂ ಲಂಚ ಇದೆ, ಎಷ್ಟು ಜನ ಅಽಕಾರಿಗಳಿಗೆ ಗಲ್ಲು ಹಾಕ್ತೀರಿ? ಸುಮ್ಮನೆ ನಾಟಕದ ಹೇಳಿಕೆ ಬೇಡ. ಬಡವರನ್ನು ಲೂಟಿ ಮಾಡುತ್ತ್ತಿರುವ ಸರ್ಕಾರ ತೊಲಗಬೇಕು ಎಂದು ಟೀಕಾ ಪ್ರಹಾರ ನಡೆಸಿದರು.
ಮುಸ್ಲಿಮರಿಗೆ 15% ವಸತಿ ಮೀಸಲಾತಿ ವಿಚಾರದಲ್ಲಿ ವಸತಿ ಸಚಿವ ಜಮೀರ್ ಸ್ಪಷ್ಟೀಕರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅಶೋಕ್, ತಪ್ಪು ಮುಚ್ಚಿಕೊಳ್ಳಲು ಜಮೀರ್ ಏನೇನೋ ಹೇಳುವುದು ಬೇಡ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಸಂಪುಟ ಉಪಸಮಿತಿ ತೀರ್ಮಾನ ಮಾಡಿದ್ದರೆ, ತನಿಖೆಗೆ ಕೊಡಲಿ. ತಪ್ಪು ಮುಚ್ಚಿಕೊಳ್ಳಲು ಏನೇನೋ ಹೇಳುವುದು ಸರಿಯಲ್ಲ, ತನಿಖೆ ಮಾಡಿಸಲಿ ಎಂದು ಆಗ್ರಹಿಸಿದರು.
- 80ರ ವೃದ್ಧನಿಗೆ ಪ್ರೀತಿ ಹೆಸರಲ್ಲಿ ನಾಲ್ವರು ಮಹಿಳೆಯರಿಂದ 9 ಕೋಟಿ ವಂಚನೆ
- ಸವಿತಕ್ಕ ಪುತ್ರನ ಆತಹತ್ಯೆಗೆ “ಡೆತ್ನೋಟ್” ವೆಬ್ಸೀರಿಸ್ ಕಾರಣವಂತೆ..?
- ಎಲ್ಲಾ ರಾಜ್ಯಗಳಲ್ಲೂ ಅನರ್ಹ ಮತದಾರರಿಗೆ ಕೋಕ್
- ಆನ್ಲೈನ್ ಗೇಮ್ಗಾಗಿ ಹಣಕ್ಕೆ ಪೀಡಿಸುತ್ತಿದ್ದ ತಂಗಿ ಮಗನನ್ನೇ ಕೊಂದ ಮಾವ
- ಮತಗಳ್ಳತನದ ವಿರುದ್ಧ ಬೆಂಗಳೂರಲ್ಲಿ ರಾಹುಲ್ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ