Sunday, September 8, 2024
Homeರಾಜ್ಯಉಪ್ಪು ತಿಂದವರು ನೀರು ಕುಡಿಯಲೇ ಬೇಕು : ಸಿಎಂಗೆ ಅಶೋಕ್‌ ಎಚ್ಚರಿಕೆ

ಉಪ್ಪು ತಿಂದವರು ನೀರು ಕುಡಿಯಲೇ ಬೇಕು : ಸಿಎಂಗೆ ಅಶೋಕ್‌ ಎಚ್ಚರಿಕೆ

ಬೆಂಗಳೂರು,ಜು.12- ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತಮ ಪಾಪದ ಕೊಡ ತುಂಬಿದೆ. ಪ್ರಾಯಶ್ಚಿತ ಕಾದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

ಈ ಕುರಿತು ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಪೋಸ್ಟ್‌ ಮಾಡಿರುವ ಅಶೋಕ್‌, ಮುಖ್ಯಮಂತ್ರಿ ಸಿದ್ದರಾಮಯ್ಯನವರು 4,000 ಕೋಟಿ ಮೌಲ್ಯದ ಮುಡಾ ಭೂಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ತಮ ಎಂದಿನ ಶೈಲಿಯಲ್ಲಿ ಜಾತಿ ಹೆಸರಿನಲ್ಲಿ ರಕ್ಷಣೆ ಪಡೆಯುವ ಹತಾಶ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯನವರೇ, ತಮ ನಾಯಕ ರಾಹುಲ್‌ ಗಾಂಧಿ ಅವರು ಮೋದಿ ಉಪನಾಮದ ಬಗ್ಗೆ ನಿಂದನೆ ಮಾಡಿ ನ್ಯಾಯಾಲಯದಲ್ಲಿ ಛೀಮಾರಿ ಹಾಕಿಸಿಕೊಂಡರಲ್ಲ, ಹಿಂದುಳಿದ ವರ್ಗದ ವ್ಯಕ್ತಿಯೊಬ್ಬ ಎರಡು ಬಾರಿ ಪ್ರಧಾನ ಮಂತ್ರಿ ಆದರಲ್ಲ ಅನ್ನುವ ಹೊಟ್ಟೆ ಉರಿಯಿಂದ ನಿಂದಿಸಿದ್ದಾ? ಎಂದು ಪ್ರಶ್ನೆ ಮಾಡಿದ್ದಾರೆ.

ತಾವು ಮತ್ತು ತಮ ಪಟಾಲಂ ದಿನ ಬೆಳಗಾದರೆ ಪ್ರಧಾನಿ ಮೋದಿ ಅವರನ್ನ ಪದೇ ಪದೇ ವೈಯಕ್ತಿಕ ನಿಂದನೆ ಮಾಡುತ್ತೀರಲ್ಲ, ಅದು ಕೂಡ ಹಿಂದುಳಿದ ಸಮುದಾಯಕ್ಕೆ ಸೇರಿದ ಒಬ್ಬ ಚಹಾ ಮಾರುವ ವ್ಯಕ್ತಿ ಮೂರು ಬಾರಿ ಸತತವಾಗಿ ದೇಶದ ಪ್ರಧಾನಿ ಆದರಲ್ಲ ಎನ್ನುವ ದ್ವೇಷದಿಂದಲೇ? ಎಂದು ತಾರಾಟೆಗೆ ತೆಗೆದುಕೊಂಡಿದ್ದಾರೆ.

ತಮ ಇಡೀ ಜೀವನವೆಲ್ಲಾ ಅಹಿಂದ ಸಮುದಾಯಗಳ ಬೆನ್ನಿನ ಮೇಲೆ ಸವಾರಿ ಮಾಡಿ ಅಧಿಕಾರ ಅನುಭವಿದ ತಾವು ದಲಿತರಿಗೆ, ಹಿಂದುಳಿದವರಿಗೆ ಮಾಡಿದ್ದಾದರೂ ಏನು? ದಲಿತರ ದುಡ್ಡು ಲೂಟಿ ಹೊಡೆದಿದ್ದು, ದಲಿತರ ಕುರ್ಚಿ ಕಿತ್ತುಕೊಂಡು ಅವರಿಗೆ ಮೋಸ ಮಾಡಿದ್ದು, ಇದಿಷ್ಟೇ ನಿಮ ಸಾಧನೆ ಎಂದು ಅಶೋಕ್‌ ಸಿದ್ದರಾಮಯ್ಯ ವಿರುದ್ದ ಆರೋಪಗಳ ಸುರಿಮಳೆಗೈದಿದ್ದಾರೆ.

RELATED ARTICLES

Latest News