Tuesday, December 3, 2024
Homeರಾಜ್ಯಒಳಮೀಸಲಾತಿ ವಿಚಾರದಲ್ಲಿ ಸರ್ಕಾರ ಮೂಗಿಗೆ ತುಪ್ಪ ಸವರಿಡೆ : ಆರ್‌.ಅಶೋಕ್‌

ಒಳಮೀಸಲಾತಿ ವಿಚಾರದಲ್ಲಿ ಸರ್ಕಾರ ಮೂಗಿಗೆ ತುಪ್ಪ ಸವರಿಡೆ : ಆರ್‌.ಅಶೋಕ್‌

R. Ashok on internal reservation

ಬೆಂಗಳೂರು,ಅ.29- ಒಳಮೀಸಲಾತಿ ವಿಚಾರದಲ್ಲಿ ರಾಜ್ಯಸರ್ಕಾರ ಮೂಗಿಗೆ ತುಪ್ಪ ಸವರಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸ ಲಾತಿ ಜಾರಿ ಮಾಡಲು ಇಷ್ಟವಿಲ್ಲ. ಸರ್ಕಾರದವರಿಗೆ ದೆಹಲಿ ತಡೆ ಇದೆಯೋ ಅಥವಾ ಬೇರೆ ತಡೆ ಇದೆಯೋ ಎಂಬುದು ಗೊತ್ತಿಲ್ಲ. ಒಳಮೀಸಲಾತಿ ಜಾರಿ ಮಾಡದೆ ಹುನ್ನಾರ ನಡೆದಿದೆ. ಸಮುದಾಯದವರು ಎಚ್ಚರಿಕೆಯಿಂದಿರಬೇಕು ಎಂದರು.

ಏಕಸದಸ್ಯ ಆಯೋಗ ರಚನೆ ಮಾಡುವ ಅಗತ್ಯವಿರಲಿಲ್ಲ. ಕೂಡಲೇ ಸರ್ಕಾರ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.ನಮ ಸರ್ಕಾರದ ಅವಧಿಯಲ್ಲಿ ಒಳಮೀಸಲಾತಿ ಹಂಚಿಕೆ ಮಾಡಿದ್ದೆವು. ಈಗ ಸುಪ್ರೀಂಕೋರ್ಟ್‌ ಕೂಡ ತೀರ್ಪು ಕೊಟ್ಟಿದೆ. ಇನ್ನು ಜಾರಿ ಮಾಡದಿರಲು ಏನು ಉಳಿದಿದೆ ಎಂದು ಪ್ರಶ್ನಿಸಿದರು.

ವಿಜಯಪುರ ವಕ್‌್ಫ ಆಸ್ತಿ ಹೆಸರಿನಲ್ಲಿ ರೈತರಿಗೆ ನೋಟೀಸ್‌‍ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲ ಸಚಿವರು ವಕ್‌್ಫ ನೋಟೀಸ್‌‍ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಆದರೆ ರೈತರ ಪಹಣಿಗಳಲ್ಲಿ ವಕ್‌್ಫ ಮಂಡಳಿ ಆಸ್ತಿ ಎಂದು ನಮೂದಿಸಲಾಗಿದೆ ಎಂದರು.

ಲವ್ ಜಿಹಾದ್ ರೀತಿಯಲ್ಲಿ ಈಗ ಸರ್ಕಾರ ಲ್ಯಾಂಡ್ ಜಿಹಾದ್ ನಡೆಸುತ್ತಿದೆ. ಅನ್ವರ್ ಮಾನ್ಪಡಿ ಅವರ ವರದಿಯಲ್ಲಿ ವಕ್್ಫ ಆಸ್ತಿಯನ್ನು ಮುಸ್ಲಿಂ ನಾಯಕರು ಕಬಳಿಸಿರುವ ಉಲ್ಲೇಖವೂ ಇದೆ. ಸಂಸತ್ ನಮದೇ, ವಿಧಾನಸೌಧವೂ ನಮದೇ ಎನ್ನುತ್ತಿದ್ದಾರೆ. ವಕ್ಫ್
ಬೋರ್ಡ್ ಲೂಟಿ ಮಾಡಿರುವುದು ಮುಸ್ಲಿಂ ನಾಯಕರೇ ಎಂದು ಆರೋಪಿಸಿದರು.

ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದರೆ ಮತಾಂಧ ಶಕ್ತಿಗಳಿಗೆ ಪ್ರೋತ್ಸಾಹ ಸಿಗುತ್ತದೆ. ಈಗ ರೈತರ ಜಮೀನನ್ನು ನುಂಗಲು ಹೊರಟಿದ್ದಾರೆ. ನುಂಗುಬಾಕರನ್ನು ಸರ್ಕಾರ ಬೆಂಬಲಿಸುತ್ತಿದೆ. ಇದುವರೆಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮಾತನಾಡಿಲ್ಲ ಎಂದು ಟೀಕಿಸಿದರು.ರೈತರ ಶಾಪಕ್ಕೆ ಸರ್ಕಾರ ಗುರಿಯಾಗಿದೆ.

ರೈತರಿಗೆ ನೋಟೀಸ್‌‍ ನೀಡಿರುವ ವಿಚಾರವನ್ನು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ, ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.ದೀಪಾವಳಿಗೆ ನಾವೆಲ್ಲಾ ಪಟಾಕಿಗೆ ಬೆಂಕಿ ಹಚ್ಚಿದರೆ ಇವರು ದೀಪಾವಳಿಗೇ ಬೆಂಕಿ ಇಟ್ಟಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಟಿಪ್ಪು ದೆವ್ವ ಮೆಟ್ಟಿಕೊಂಡಿದೆ. ಆ ದೆವ್ವಕ್ಕೆ ಜನರು ಸರಿಯಾದ ಶಾಸ್ತಿ ಮಾಡಬೇಕು ಎಂದರು.

RELATED ARTICLES

Latest News