ಬೆಂಗಳೂರು,ಡಿ.3- ಹಾಸನದಲ್ಲಿ ಡಿ.5ರಂದು ನಡೆಯಲಿರುವ ಜನ ಕಲ್ಯಾಣ ಯಾತ್ರೆಯೂ ರಿಲೀಸ್‌ಗೂ ಮುನ್ನವೇ ಸಿದ್ದರಾಮೋತ್ಸವ ಭಾಗ-2 ಫ್ಲಾಪ್ ಆಗಿದೆ ಎಂದು ವಿರೋಧ ಪಕ್ಷದ ಪ್ರತಿಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸ್ವಾಭಿಮಾನಿ ಸಮಾವೇಶದ ಹೆಸರಿನಲ್ಲಿ ಹಾಸನದಲ್ಲಿ ಸಿದ್ದರಾಮೋತ್ಸವ ಭಾಗ-2 ಬೃಹನ್ ನಾಟಕವಾಡಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಹಿಡನ್ ಅಜೆಂಡ್ ಅರಿತು ಅಲರ್ಟ್ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಬಣದ ಪ್ಲಾನ್ ಗೆ ತಣ್ಣೀರು ಎರಚಿದ್ದಾರೆ ಎಂದು ಟೀಕಿಸಿದ್ದಾರೆ.
ಬೇನಾಮಿ ಪತ್ರದ ಮೂಲಕ ಹೈಕಮಾಂಡ್‌ಗೆ ದೂರು ಕೊಡಿಸಿ ಇಡೀ ನಾಟಕದ ಟೈಟಲ್, ಕಥೆ, ಚಿತ್ರಕಥೆಯನ್ನೇ ಬದಲಿಸಿರುವ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದೊಳಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ಕುರ್ಚಿ ಕಾಳಗ ಹೇಗಿರಲಿದೆ ಎನ್ನುವ ಕುರಿತು ಹೊಸ ಟ್ರೇಲರ್ ಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.