ಬೆಂಗಳೂರು, ಡಿ.24- ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ನೀಡಿದ್ದ ಹೇಳಿಕೆ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಪ್ರಸಾದ್ ಹೇಳಿಕೆ ಕಾಂಗ್ರೆಸ್‍ನ ಮನಸ್ಥಿತಿ ಯನ್ನು ಎತ್ತಿ ತೋರಿಸುತ್ತದೆ. ಕಾಂಗ್ರೆಸ್ ಪಕ್ಷದ ಮೊದಲ ಅಧ್ಯಕ್ಷರೇ ಬ್ರಿಟಿಷರು. ಬ್ರಿಟಿಷರ ಕೈ ಕೆಳಗಡೆ ಕೆಲಸ ಮಾಡಿದ ಪಕ್ಷ ನಿಮ್ಮದು. ಎ .ಓ.ಹ್ಯೂಮ್ ಕಾಂಗ್ರೆಸ್ ಸಂಸ್ಥಾಪಕ. ಹಾಗಾದರೆ ನಿಮ್ಮ ಅಧ್ಯಕ್ಷರ ಬೂಟನ್ನು ನೆಕ್ಕುತ್ತಿದ್ರಾ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯಲ್ಲಿ ಯಾರು ಬ್ರಿಟಿಷರು ಅಧ್ಯಕ್ಷರಾಗಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಅಶೋಕ್ ತಿರುಗೇಟು ನೀಡಿದ್ದಾರೆ. ಹಿಂದೂ-ಮುಸ್ಲಿಂ ನಡುವೆ ಒಡಕು ಮೂಡಿಸುವುದನ್ನು ಬಿಟ್ಟು ಬರ ಪೀಡಿತ ಪ್ರದೇಶಗಳ ಕಡೆ ಗಮನ ಹರಿಸಿ. ಶಾಲೆಗಳಲ್ಲಿ ಶೌಚಾಲಯ ತೊಳೆಯಲು ನೌಕರರನ್ನು ನೇಮಿಸುವುದಾಗಿ ಹೇಳಿದ್ದರು. ಅವರಿಗೆ ನಾಚಿಕೆ ಆಗಬೇಕು. ಕಡಿಮೆ ಹಣ ಕೊಟ್ಟಿದ್ದಕ್ಕೆ ಮಕ್ಕಳ ಕೈಯಲ್ಲಿ ತೊಳೆಸುತ್ತಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯ ಮರೆಮಾಚಲು ಹಿಂದೂ, ಮುಸ್ಲಿಂ ಹೇಳಿಕೆ ನೀಡಿದ್ದಾರೆ. ಹಿಂದೆ ವೀರಶೈವ-ಲಿಂಗಾಯತ ವಿಭಜಿಸಿದರು. ಈಗ ಹಿಂದೂ-ಮುಸ್ಲಿಂ ನಡುವೆ ತಂದಿಡೋ ಕೆಲಸ ಮಾಡ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ಸಮೀಕ್ಷೆಯ ಮಾಹಿತಿ ತೋರಿಸುತ್ತಿದೆ. ಎಲ್ಲಾ ಸರ್ವೇಯಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ವ್ಯಕ್ತವಾಗಿದೆ. ಐದು ರಾಜ್ಯಗಳ ಚುನಾವಣೆ ಪೈಕಿ, ಮೂರರಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಸೆಮಿಫೈಲ್‍ನಲ್ಲಿ ಸೋತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೇಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಆಗಲಿ ಎಂದು ಅವರ ಮಿತ್ರಪಕ್ಷಗಳ ನಾಯಕರು ಹೇಳಿದ್ದಾರೆ. ಇದು ಅವರಿಗೆ ನೋವು ತಂದಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಪದಾಧಿಕಾರಿಗಳ ಪಟ್ಟಿಗೆ ಯತ್ನಾಳ್ ವ್ಯಂಗ್ಯ
ಬಿಜೆಪಿ ರಾಜ್ಯ ಪದಾಧಿಕಾರಿಗಳ ನೇಮಕ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಪಕ್ಷದ ಸಿಪಾಯಿ. ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ. ಹೈಕಮಾಂಡ್ ಸಮಯ ಕೊಟ್ಟಾಗ ಭೇಟಿ ಕೊಡುತ್ತೇನೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೋರಾಟ ಮಾಡೋದೇ ನಮ್ಮ ಗುರಿ. ಅದನ್ನೇ ಹೈಕಮಾಂಡ್ ಬಳಿ ಚರ್ಚೆ ಮಾಡುತ್ತೇನೆ. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರ ಗೆಲ್ಲುವುದೇ ನಮ ್ಮಗುರಿ. ಅದರ ಬಗ್ಗೆ ನಾವು ನಿರ್ಧಾರ ಮಾಡ್ತಿದ್ದೇವೆ. ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬ ಚರ್ಚೆ ಹೈಕಮಾಂಡ್ ಹಂತದಲ್ಲಿ ನಡೆಯುತ್ತಿದೆ.
ಯಾರನ್ನು ಅಭ್ಯರ್ಥಿ ಮಾಡಿದರೆ ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.
ಇತಿಹಾಸದ ಪುಟಗಳಲ್ಲಿ ಕೊಡಗು, ಮಂಗಳೂರಲ್ಲಿ ಮತಾಂತರ ಮಾಡಿದ ಇತಿಹಾಸವಿದೆ. ಮೈಯಲ್ಲಿ ರಕ್ತ ಇರುವವರೆಗೂ ಹೋರಾಟ ಮಾಡಿದವರು ನಮ್ಮ ರಾಜರು. ಯುದ್ಧಮಾಡದೆ ಓಡಿದ್ದು ಟಿಪ್ಪು. ಪರ್ಷಿಯನ್ ಭಾಷೆಯನ್ನು ಆರಾಸಿ, ಖಡ್ಗದ ಮೇಲೂ ಬರೆಸಿಕೊಂಡಿರಲಿಲ್ಲವೆ? ನಮ್ಮ ಮೈಸೂರು ಮಹಾರಾಜರು ಮಾಡಿರುವ ಅನೇಕ ಕೆಲಸಗಳಿವೆ.ಅಂಥವರನ್ನು ಜೈಲಲ್ಲಿಟ್ಟವರು ನೀವು ಎಂದು ಆರೋಪಿಸಿದ್ದಾರೆ.
ಗುಂಡು ಹಾರಿಸಿ ಎಐಎಂಐಎಂ ನಾಯಕನ ಹತ್ಯೆ
ನಾನು ಮೊದಲ ಬಾರಿಗೆ ದತ್ತಮಾಲೆ ಅಭಿಯಾನಕ್ಕೆ ಹೋಗುತ್ತಿದ್ದೇನೆ. ದತ್ತ ಮಾಲೆ ಹಾಕೋ ಬಗ್ಗೆ ಚರ್ಚೆ ಮಾಡುತ್ತೇನೆ. ಶೋಭಾಯಾತ್ರೆಯಲ್ಲಿ ಭಾಗಿಯಾಗುವೆ ಎಂದು ಅವರು ತಿಳಿಸಿದ್ಧಾರೆ.