Friday, October 18, 2024
Homeಕ್ರೀಡಾ ಸುದ್ದಿ | Sports2.5 ಕೋಟಿ ರೂ.ಬಹುಮಾನ ನಿರಾಕರಿಸಿದ ರಾಹುಲ್‌ ದ್ರಾವಿಡ್

2.5 ಕೋಟಿ ರೂ.ಬಹುಮಾನ ನಿರಾಕರಿಸಿದ ರಾಹುಲ್‌ ದ್ರಾವಿಡ್

ಬೆಂಗಳೂರು, ಜು. 10- ಭಾರತದ ಮಹಾಗೋಡೆ ರಾಹುಲ್‌ ದ್ರಾವಿಡ್‌ ಅರು ಮತ್ತೊಮೆ ಹೃದಯಸ್ಪರ್ಶಿ ಗುಣವನ್ನು ಮೆರೆದಿದ್ದಾರೆ. ವೆಸ್ಟ್‌ಇಂಡೀಸ್‌‍ನ ಬಾರ್ಬಡೋಸ್‌‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್‌ ಪಂದ್ಯದಲ್ಲಿ 7 ರನ್‌ಗಳ ಅಂತರದಿಂದ ಗೆಲುವು ಸಾಧಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಬೆನ್ನಲ್ಲೇ ಬಿಸಿಸಿಐ 125 ಕೋಟಿ ರೂ.ಗಳ ಬಹುಮಾನದ ಮೊತ್ತವನ್ನು ಘೋಷಿಸಿತ್ತು.

ಈ ಸಂದರ್ಭದಲ್ಲಿ 11 ವರ್ಷಗಳ ನಂತರ ಭಾರತ ತಂಡವು ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ಗೆ ಬಿಸಿಸಿಐ ಹೆಚ್ಚುವರಿಯಾಗಿ 2.5 ಕೋಟಿ ರೂ.ಗಳನ್ನು ಬಹುಮಾನದ ರೂಪದಲ್ಲಿ ನೀಡಲು ಮುಂದಾಗಿತ್ತು.

ಆದರೆ ಈ ಚಾಂಪಿಯನ್‌ ಪಟ್ಟ ಅಲಂಕರಿಸುವಲ್ಲಿ ನನ್ನೊಬ್ಬ ಶ್ರಮ ಮಾತ್ರವಿಲ್ಲ ಇಡೀ ಆಟಗಾರರ ಪರಿಶ್ರಮವೂ ಇದೆ ಎಂದು ಅರಿತ ರಾಹುಲ್‌ ದ್ರಾವಿಡ್‌, ಬಿಸಿಸಿಐಗೆ ಎಲ್ಲಾ ಆಟಗಾರರಿಗೂ ಸಮಾನ ಬಹುಮಾನ ಮೊತ್ತವನ್ನು ಘೋಷಿಸಬೇಕೆಂದು ಮನವಿ ಮಾಡಿದ್ದರು.

ರಾಹುಲ್‌ ದ್ರಾವಿಡ್‌ ಇಂತಹ ಹೃದಯಸ್ಪರ್ಶಿ ಭಾವನೆ ತೋರಿರುವುದು ಇದೇ ಮೊದಲಲ್ಲ. 2018 ರಲ್ಲಿ, ಭಾರತವು 19 ಪುರುಷರ ವಿಶ್ವಕಪ್‌ ಟ್ರೋಫಿಯನ್ನು ಗೆದ್ದ ನಂತರ, ಆಗಿನ ಕೋಚ್‌ ದ್ರಾವಿಡ್‌ಗೆ 50 ಲಕ್ಷ ರೂಪಾಯಿ ಬಹುಮಾನ, ಹಾಗೂ ತಂಡದ ಇತರ ಸದಸ್ಯರಿಗೆ ರೂ. 20 ಲಕ್ಷ ಮತ್ತು ಆಟಗಾರರಿಗೆ ರೂ. 30 ಲಕ್ಷ ಬಹುಮಾನವನ್ನು ಘೋಷಿಸಿತು.

ಬಹುಮಾನದ ಹಣವನ್ನು ಕೋಚಿಂಗ್‌ ಸಿಬ್ಬಂದಿಗೆ ಸಮನಾಗಿ ಹಂಚುವಂತೆ ದ್ರಾವಿಡ್‌ ಭಾರತೀಯ ಕ್ರಿಕೆಟ್‌ ಮಂಡಳಿಯನ್ನು ಕೇಳಿದ್ದರು ಮತ್ತು ಮಂಡಳಿಯು ಅವರ ಮನವಿಗೆ ಒಪ್ಪಿಗೆ ಸೂಚಿಸಿತು.

`ಭಾರತ ತಂಡದೊಂದಿಗಿನ ರಾಹುಲ್‌ ದ್ರಾವಿಡ್‌ ಅವರ ಸೇವಾವಧಿಯಲ್ಲಿ ಅವರ ಸೇವೆ ಮತ್ತು ಅವರ ಪ್ರಯತ್ನಕ್ಕಾಗಿ ಶ್ರೀ ರಾಹುಲ್‌ ದ್ರಾವಿಡ್‌ ಮತ್ತು ಅವರ ಬೆಂಬಲ ಸಿಬ್ಬಂದಿ ತಂಡಕ್ಕೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಅವರ ಗರಡಿಯಲ್ಲಿ ತಂಡವು ಎಲ್ಲಾ ಸ್ವರೂಪದ ಕ್ರಿಕೆಟ್‌ನಲ್ಲಿ ಯಶಸ್ಸಿನ ಘಟ್ಟ ತಲುಪಿದೆ.

ಅದೇ ರೀತಿ 2024ರ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಈ ಅಭೂತಪೂರ್ವ ಕ್ಷಣವು ಸಾಕಷ್ಟು ದಿನಗಳ ಕಾಲ ಅವಿಸರಣೀಯವಾಗಿ ಉಳಿಯುತ್ತದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ಶಾ ಕನ್ನಡಿಗ ರಾಹುಲ್‌ ದ್ರಾವಿಡ್‌ರನ್ನು ಶ್ಲಾಘಿಸಿದ್ದಾರೆ.

RELATED ARTICLES

Latest News