Friday, November 22, 2024
Homeರಾಷ್ಟ್ರೀಯ | National"ಬಡತನ ಏಕೈಕ ಜಾತಿ ಎನ್ನುವ ಮೋದಿ ಒಬಿಸಿ ಎಂದು ಗುರುತಿಕೊಳ್ಳುವುದೇಕೆ..?"

“ಬಡತನ ಏಕೈಕ ಜಾತಿ ಎನ್ನುವ ಮೋದಿ ಒಬಿಸಿ ಎಂದು ಗುರುತಿಕೊಳ್ಳುವುದೇಕೆ..?”

ಅಂಬಿಕಾಪುರ,ನ.9- ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಏಕೈಕ ಜಾತಿ ಎಂದರೆ ಅದು ಬಡತನ ಎಂದಿದ್ದಾರೆ ಹಾಗಾದರೆ ಅವರು ತಮ್ಮನ್ನು ಇತರ ಹಿಂದುಳಿದ ವರ್ಗ (ಒಬಿಸಿ) ಎಂದು ಏಕೆ ಗುರುತಿಸಿಕೊಳ್ಳುತ್ತಾರೆ ಎಂದು ರಾಹುಲ್‍ಗಾಂಧಿ ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿಯವರು ಪ್ರತಿ ಭಾಷಣದಲ್ಲಿ ನಾನು ಒಬಿಸಿ ಎಂದು ಹೇಳುತ್ತಾರೆ. ಆದರೆ ನಾನು ಜಾತಿ ಜನಗಣತಿಯ ಬಗ್ಗೆ ಮಾತನಾಡುವಾಗ ಅವರು ಭಾರತದಲ್ಲಿ ಜಾತಿ ಇಲ್ಲ ಎಂದು ಹೇಳುತ್ತಾರೆ. ಭಾರತದಲ್ಲಿ ಒಂದೇ ಜಾತಿ ಇದೆ ಅದು ಗರೀಬ್ಎನ್ನುತ್ತಾರೆ ಅವರು ಹಾಗಾದರೆ ಮೋದಿ ಜಿ, ಬಡವರಾಗಿದ್ದರೆ ದೇಶದಲ್ಲಿ ಒಂದೇ ಜಾತಿ ಇದ್ದರೆ ನಿಮ್ಮನ್ನು ಏಕೆ ಒಬಿಸಿ ಎಂದು ಕರೆಯುತ್ತೀರಿ? ಎಂದು ಛತ್ತೀಸ್‍ಗಢದ ಅಂಬಿಕಾಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪ್ರಶ್ನಿಸಿದ್ದಾರೆ.

ಕಪ್ಪುಹಣ, ನೋಟು ಅಮಾನ್ಯೀಕರಣ ಅಥವಾ ಹಿಂದೆ ಹಿಂಪಡೆದಿರುವ ಕೃಷಿ ಕಾನೂನುಗಳ ಬಗ್ಗೆ ಪ್ರಧಾನಿ ಮೋದಿಯವರು ನೀಡಿದ ಎಲ್ಲಾ ಭರವಸೆಗಳು ಸುಳ್ಳು ಅಥವಾ ಜನರಿಗೆ ತಲುಪಿಸಲಾಗಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಬಿಬಿಎಂಪಿಯಲ್ಲಿ 10 ಸಾವಿರ ಕೋಟಿ ರೂ. ಅವ್ಯವಹಾರ: ಪ್ರಧಾನಿಗೆ ದೂರು ಸಲ್ಲಿಕೆ

ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಬಂದು 15 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದರು. ನೀವು ಅದನ್ನು ಸ್ವೀಕರಿಸಿದ್ದೀರಾ? ನೋಟು ಅಮಾನ್ಯೀಕರಣದಿಂದ ಕಪ್ಪುಹಣ ನಿರ್ಮೂಲನೆ ಮಾಡುವುದಾಗಿ ಹೇಳಿದ್ದಾರಾ? ಹೀಗಾಯಿತೇ? ಫಾರ್ಮ್ ಬಿಲ್‍ನಿಂದ ರೈತರಿಗೆ ಲಾಭವಾಗಲಿದೆ ಎಂದು ಹೇಳಿದರು. ರೈತರೇ ಮಸೂದೆಯನ್ನು ತಿರಸ್ಕರಿಸಿದರು. ನಿಮಗೆ ತಿಳಿದಿದೆ. ಯಾರು ಸತ್ಯವನ್ನು ಮಾತನಾಡುತ್ತಾರೆ ಮತ್ತು ಯಾರು ಸುಳ್ಳು ಹೇಳುತ್ತಾರೆ, ಎಂದು ಅವರು ಹೇಳಿದರು.

ಹಿಂದಿನ ಚುನಾವಣೆಯ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಸೇರಿದಂತೆ ಛತ್ತೀಸ್‍ಗಢದ ಜನತೆಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಡೇರಿಸಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಕಳೆದ ಚುನಾವಣೆಯಲ್ಲಿ ಕೃಷಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದೆ, ಬರೆದುಕೊಡಿ, ಈ ಬಾರಿ ಮನ್ನಾ ಮಾಡುತ್ತೇನೆ ಎಂದಿದ್ದೆವು, ಕಳೆದ ಬಾರಿ ಬಿಜಿಲಿ ಬಿಲ್ ಅರ್ಧದಷ್ಟು ಎಂದು ಹೇಳಿದ್ದಾವು. 200 ಯೂನಿಟ್‍ಗಳವರೆಗೆ ಮನ್ನಾ ಮಾಡಲಾಗುವುದು.

ಇದರರ್ಥ ಛತ್ತೀಸ್‍ಗಢದ 40 ಲಕ್ಷ ಕುಟುಂಬಗಳು ವಿದ್ಯುತ್‍ಗೆ ಒಂದು ಪೈಸೆಯನ್ನೂ ಪಾವತಿಸುವುದಿಲ್ಲ. ಕೆಜಿಯಿಂದ ಪಿಜಿ–ಇದು ಕೆಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣವನ್ನು ನೀಡುವ ಭಾರತದ ಮೊದಲ ರಾಜ್ಯವಾಗಿದೆ ಅವರು ಹೇಳಿದರು.ಛತ್ತೀಸ್‍ಗಢ ವಿಧಾನಸಭಾ ಚುನಾವಣೆಯ ಮೊದಲ ಹಂತದ 20 ಸ್ಥಾನಗಳಿಗೆ ಮಂಗಳವಾರ ಮತದಾನ ನಡೆದಿದೆ.

RELATED ARTICLES

Latest News