Friday, November 22, 2024
Homeರಾಷ್ಟ್ರೀಯ | Nationalರಾಹುಲ್‍ಗಾಂಧಿ ದೇವಸ್ಥಾನ ಭೇಟಿಗೆ ಅವಕಾಶ ನಿರಾಕರಣೆ

ರಾಹುಲ್‍ಗಾಂಧಿ ದೇವಸ್ಥಾನ ಭೇಟಿಗೆ ಅವಕಾಶ ನಿರಾಕರಣೆ

ನಾಗಾವ್, ಜ 22 (ಪಿಟಿಐ) ಅಸ್ಸಾಂನ ಹೈಬೋರಗಾಂವ್‍ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಇಲ್ಲಿಗೆ ಸಮೀಪದ ಬೋರ್ಡುವದಲ್ಲಿರುವ ಶ್ರೀ ಶಂಕರ ದೇವ್ ಸತ್ರ ದೇವಸ್ಥಾನಕ್ಕೆ ಭೇಟಿ ನೀಡಲು ಅಧಿಕಾರಿಗಳು ಅನುಮತಿ ನೀಡದ ನಂತರ ಹೈ ಡ್ರಾಮಾ ನಡೆಯಿತು.

ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಸೋಮವಾರ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಪ್ರಾರಂಭಿಸುವ ಮೊದಲು ಸ್ಥಳೀಯ ದೇವರಿಗೆ ಪೂಜೆ ಸಲ್ಲಿಸಲು ನಿರ್ಧರಿಸಲಾಗಿತ್ತು ಆದರೆ, ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರನ್ನು ಹೈಬೋರಗಾಂವ್‍ನಲ್ಲಿ ನಿಲ್ಲಿಸಲಾಯಿತು ಮತ್ತು ಮುಂದೆ ಹೋಗಲು ಬಿಡಲಿಲ್ಲ. ನಂತರ ದೇವಸ್ಥಾನಕ್ಕೆ ಭೇಟಿ ನೀಡಲು ಗಾಂಗೆ ಅನುಮತಿ ನಿರಾಕರಿಸಿದ್ದನ್ನು ವಿರೋಧಿಸಿ ಮಹಿಳಾ ಕಾಂಗ್ರೆಸ್ ಮುಖಂಡರು ಧರಣಿ ಕುಳಿತರು. ಧರಣಿಯಲ್ಲಿ ಕಾಂಗ್ರೆಸ್‍ನ ಮಾಜಿ ಮುಖ್ಯಸ್ಥರೂ ಪಾಲ್ಗೊಂಡಿದ್ದರು.

ಮಧ್ಯಾಹ್ನ 3 ಗಂಟೆಗೆ ಮಾತ್ರ ದೇವಾಲಯಕ್ಕೆ ಭೇಟಿ ನೀಡಲು ಗಾಂಗೆ ಅನುಮತಿ ನೀಡಲಾಗುವುದು ಎಂದು ಅಕಾರಿಗಳು ತಿಳಿಸಿದ್ದಾರೆ.ದೇಗುಲಕ್ಕೆ ಭೇಟಿ ನೀಡದಂತೆ ತಮ್ಮನ್ನು ಏಕೆ ತಡೆದಿದ್ದಾರೆ ಎಂದು ಗಾಂಧಿ ಪೊಲೀಸರನ್ನು ಪ್ರಶ್ನಿಸಿದರು.

ಜೈಲಿಗೆ ವಾಪಸ್ಸಾದ ಬಿಲ್ಕಿಸ್ ಬಾನೋ ಪ್ರಕರಣದ ಆರೋಪಿಗಳು

ಯಾರು ದೇವಸ್ಥಾನಕ್ಕೆ ಯಾವಾಗ ಭೇಟಿ ನೀಡಬೇಕು ಎಂಬುದನ್ನು ಪ್ರಧಾನಿ ಮೋದಿಯವರು ಈಗ ನಿರ್ಧರಿಸುತ್ತಾರೆ ಎಂದು ಗಾಂ ಆರೋಪಿಸಿದ್ದಾರೆ. ನಾವು ಯಾವುದೇ ಸಮಸ್ಯೆಗಳನ್ನು ಸೃಷ್ಟಿಸಲು ಬಯಸುವುದಿಲ್ಲ, ಕೇವಲ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದು ಗಾಂಧಿ ಪೊಲೀಸ್ ಅಧಿಕಾರಿಗಳಿಗೆ ಹೇಳಿದರು.

ಆದರೆ, ದೇವಸ್ಥಾನದ ಸುತ್ತ ಬಿಗಿ ಭದ್ರತೆ, ಭಾರೀ ಪೊಲೀಸ್ ಪಡೆ ನಿಯೋಜನೆ ಮತ್ತು ರಸ್ತೆ ತಡೆ ಜಾರಿಯಲ್ಲಿತ್ತು. ದೇವಸ್ಥಾನದ ಸ್ಥಳದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಹೈಬೋರಗಾಂವ್‍ನ ಆಚೆಗೆ ಸ್ಥಳೀಯ ಸಂಸದ ಮತ್ತು ಶಾಸಕರನ್ನು ಹೊರತುಪಡಿಸಿ ಯಾವುದೇ ಕಾಂಗ್ರೆಸ್ ನಾಯಕರಿಗೆ ಪ್ರಯಾಣಿಸಲು ಅವಕಾಶವಿರಲಿಲ್ಲ. ಮಾಧ್ಯಮ ತಂಡಕ್ಕೂ ಹೈಬೋರಗಾಂವ್‍ನಿಂದ ಆಚೆಗೆ ಪ್ರಯಾಣಿಸಲು ಬಿಡಲಿಲ್ಲ.

ಪ್ರಧಾನಿ ಮತ್ತು ಅಸ್ಸಾಂ ಮುಖ್ಯಮಂತ್ರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಸೇವಾದಳದ ಮುಖ್ಯಸ್ಥ ಲಾಲ್ಜಿ ದೇಸಾಯಿ ಹೇಳಿದ್ದಾರೆ. ಇದು ಘೋರವಾಗಿದೆ. ದೇಶದಲ್ಲಿ ಯಾರು ಯಾವ ಸಮಯದಲ್ಲಿ ಪ್ರಾರ್ಥನೆ ಮಾಡಬೇಕೆಂದು ಪ್ರಧಾನಿ ನಿರ್ಧರಿಸುವುದು ದುರದೃಷ್ಟಕರ ಎಂದು ಅವರು ಹೇಳಿದರು.

ಪ್ರಧಾನಿ ಅವರು ಪೂಜೆ ಮಾಡುವವರೆಗೆ (ಅಯೋಧ್ಯೆಯಲ್ಲಿ), ಯಾರಿಗೂ ಎಲ್ಲಿಯೂ ಪ್ರಾರ್ಥನೆ ಮಾಡಲು ಅವಕಾಶವಿಲ್ಲ ಎಂದು ದೇಸಾಯಿ ಪ್ರತಿಪಾದಿಸಿದರು.ಇಲ್ಲಿ ಯಾವುದೇ ಲೋಕತಂತ್ರ (ಪ್ರಜಾಪ್ರಭುತ್ವ) ಇಲ್ಲ ಮತ್ತು ಜನರು ದೇವಾಲಯಗಳಲ್ಲಿ ಯಾವಾಗ ಪ್ರಾರ್ಥನೆ ಸಲ್ಲಿಸುತ್ತಾರೆ ಎಂಬುದನ್ನು ಸರ್ಕಾರ ನಿರ್ಧರಿಸುತ್ತದೆ ಎಂದು ಅವರು ಹೇಳಿದರು.

RELATED ARTICLES

Latest News