Monday, July 1, 2024
Homeರಾಷ್ಟ್ರೀಯ"ಸಂವಿಧಾನದ ಪ್ರತಿ ಹಿಡಿದು ಪ್ರಮಾಣ ವಚನ ಸ್ವೀಕರಿಸಿ ರಾಹುಲ್‌ ಹೊಸ ಸಂದೇಶ ನೀಡಿದ್ದಾರೆ"

“ಸಂವಿಧಾನದ ಪ್ರತಿ ಹಿಡಿದು ಪ್ರಮಾಣ ವಚನ ಸ್ವೀಕರಿಸಿ ರಾಹುಲ್‌ ಹೊಸ ಸಂದೇಶ ನೀಡಿದ್ದಾರೆ”

ಬೆಂಗಳೂರು, ಜೂ.28– ಜೈ ಭೀಮ್‌‍, ಜೈ ಸಂವಿಧಾನ ಈ ಎರಡು ಘೋಷಣೆಗಳು ದೇಶದಲ್ಲಿ ಹೊಸ ಕ್ರಾಂತಿ, ಹೊಸ ಹುರುಪನ್ನು ಮೂಡಿಸಿವೆ. ಸಂಸತ್ತಿನಲ್ಲಿ ಸಂವಿಧಾನದ ಪ್ರತಿ ಹಿಡಿದುಕೊಂಡು ಪ್ರಮಾಣ ವಚನ ಸ್ವೀಕರಿಸಿ ಹೊಸ ಸಂದೇಶವನ್ನು ರಾಹುಲ್‌ ಗಾಂಧಿಯವರು ದೇಶಕ್ಕೆ ನೀಡಿದ್ದಾರೆ ಎಂದು ಎಐಸಿಸಿ ಎಸ್ಸಿ ವಿಭಾಗದ ಅಧ್ಯಕ್ಷರಾದ ರಾಜೇಶ್‌ ಲಿಲೋಥಿಯ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಮತ್ತು ಅಂಬೇಡ್ಕರ್‌ ಅವರ ಹೆಸರು ಹೇಳಿದರೆ ಸಾಕು ಆರ್‌ಎಸ್ಎಸ್‌‍ ಭಯ ಪಡುತ್ತದೆ. 400 ಸ್ಥಾನಗಳು ಬಂದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಮನುಸತಿಯನ್ನು ಆಚರಣೆಗೆ ತರುತ್ತೇವೆ ಎಂದು ಘಂಟಾಘೋಷವಾಗಿ ಬಿಜೆಪಿಯವರು ಹೇಳುತ್ತಿದ್ದರು. ಆದರೆ ನಮ ದೇಶದ ಜನ ಬಿಜೆಪಿಯವರ ಕುತಂತ್ರಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಅವರಿಗೆ ಸಾಷ್ಟಾಂಗ ಧನ್ಯವಾದಗಳನ್ನು ತಿಳಿಸಬೇಕು ಎಂದರು.

ದಲಿತರ, ಆದಿವಾಸಿಗಳ, ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯಲು ನರೇಂದ್ರ ಮೋದಿ ಅವರು ಕತ್ತಿ ಹಿಡಿದು ನಿಂತಿದ್ದರು. ಈಗ ಕತ್ತಿ ಕೆಳಗೆ ಬಿದ್ದಿದೆ. ಈಗ ಅಲುಗಾಡುವ ಖುರ್ಚಿ ಮೇಲೆ ಕುಳಿತಿದ್ದಾರೆ. ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ.

ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ದಲಿತ, ಆದಿವಾಸಿ, ಅಲ್ಪಸಂಖ್ಯಾತರ ಸಂಘಟನೆ ಮಾಡಬೇಕಿದೆ ಹಾಗು ಸಂವಿಧಾನ ರಕ್ಷಕ ಕಾರ್ಯಕ್ರಮವನ್ನು ಕರ್ನಾಟಕದ 3 ಸಾವಿರ ಗ್ರಾಮಗಳಲ್ಲಿ ಅಭಿಯಾನ ನಡೆಸಲಾಗುವುದು. ಒಬ್ಬರು ಮಹಿಳೆ ಮತ್ತು ಒಬ್ಬ ಪುರುಷನನ್ನು ಸಂವಿಧಾನ ರಕ್ಷಕ್‌ ಎಂದು ಗುರುತಿಸಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಿಂದ ಲೀಡರ್ಶಿಪ್ ಡೆವಲಪ್ ಮೆಂಟ್ ಮಿಷನ್ ಕಾರ್ಯಕ್ರಮವನ್ನು ಎಸ್ಸಿ/ಎಸ್ಟಿ, ಅಲ್ಪಸಂಖ್ಯಾತ ಸಮುದಾಯಗಳಲ್ಲಿ ನಾಯಕತ್ವವನ್ನು ಬೆಳೆಸಲು ಕಾರ್ಯಕ್ರಮಗಳನ್ನು 8 ರಾಜ್ಯಗಳ 184 ಕ್ಷೇತ್ರಗಳಲ್ಲಿ ಮುಂದಿನ 20 ತಿಂಗಳಲ್ಲಿ ಆಯೋಜಿಸಲಾಗುತ್ತದೆ ಎಂದರು.

ಸಂವಿಧಾನವನ್ನು ಅಳವಡಿಸಿಕೊಂಡು ಇದೇ 26 ನವೆಂಬರ್‌ ತಿಂಗಳಲ್ಲಿ 75 ವರ್ಷಗಳು ಆಗುತ್ತಿದ್ದು. 100 ದಿನಗಳ ಕ್ಯಾಂಪೇನ್‌ ಮಾಡಲು ಆಲೋಚಿಸಲಾಗಿದೆ. ಇಡೀ ದೇಶದಾದ್ಯಂತ ಈ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಹಾಗೂ ಪ್ರತಿ ಗ್ರಾಮದಲ್ಲಿ ಇಬ್ಬರು ಸಂವಿಧಾನ ರಕ್ಷಕರನ್ನು ಗುರುತಿಸಲಾಗುತ್ತದೆ ಹಾಗೂ ಗ್ರಾಮ ಸಭೆಯನ್ನು ಏರ್ಪಡಿಸಿ ಸಂವಿಧಾನದ ಪೀಠಿಕೆಯನ್ನು ಓದಲಾಗುತ್ತದೆ. ಇಷ್ಟು ಕಾರ್ಯಕ್ರಮಗಳನ್ನು ಸಂವಿಧಾನದ ರಕ್ಷಣೆಗಾಗಿ, ಅದರ ಮಹತ್ವವನ್ನು ತಿಳಿಸಲು ಪಣ ತೊಟ್ಟಿದ್ದೇವೆ ಎಂದು ತಿಳಿಸಿದರು.

18 ನೇ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್‌ ಗಾಂಧಿ ಅವರು ಸಂವಿಧಾನದ ಸುತ್ತ ಚುನಾವಣೆಯ ವಿಷಯ ಚರ್ಚೆಯಾಗುವಂತೆ ಮಾಡಿದರು ಹಾಗೂ ಸಂವಿಧಾನ ರಕ್ಷಣೆಗಾಗಿ ಹೋರಾಟ ಮಾಡಿದರು. ಚುನಾವಣೆಯನ್ನು ಎದುರಿಸಿದರಲ್ಲದೆ, ವ್ಯಾಖ್ಯಾನ ಸಿದ್ದಪಡಿಸಿ ಅದರಲ್ಲಿ ಯಶಸ್ವಿಯಾದರು. ರಾಹುಲ್‌ ಗಾಂಧಿ ಅವರು ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದು ತಮ ಪ್ರತಿ ಚುನಾವಣಾ ಭಾಷಣವನ್ನು ಮಾಡುತ್ತಾ ಇದ್ದಿದ್ದು ದೇಶದ ಜನರಲ್ಲಿ ಹೊಸ ಹುರುಪನ್ನು ಮೂಡಿಸಿದೆ ಎಂದರು.

ಎಸ್‌‍ಸಿ/ಎಸ್‌‍ಟಿ, ಅಲ್ಪಸಂಖ್ಯಾತ ನಾಯಕರು ಹಾಗೂ ಪಕ್ಷದ ಘಟಕಗಳು ಈ ವಿಷಯವನ್ನು ಜೀವಂತವಾಗಿ ಇಟ್ಟುಕೊಳ್ಳಬೇಕು. ನರೇಟಿವ್‌ಗಳನ್ನು ಕಟ್ಟಬೇಕು. ಏಕೆಂದರೆ ಬಿಜೆಪಿಯನ್ನು ನಂಬಲು ಸಾಧ್ಯವಿಲ್ಲ. ಅಲ್ಲದೇ ಕಾಂಗ್ರೆಸ್‌‍ ಪಕ್ಷದಿಂದ ಈ ಬಾರಿ ಆಯ್ಕೆಯಾಗಿರುವ 99 ಸಂಸದರಲ್ಲಿ 37 ಮಂದಿ ಎಸ್‌‍ಸಿ/ಎಸ್‌‍ಟಿ ಸಮುದಾಯಗಳಿಗೆ ಸೇರಿದವರು. 32 ಮೀಸಲು ಕ್ಷೇತ್ರಗಳಿಂದ 7 ಸ್ಥಾನಗಳು ಸಾಮಾನ್ಯ ಕ್ಷೇತ್ರಗಳಿಂದ ಜಯ ಗಳಿಸಿದ್ದಾರೆ ಎಂದು ಹೇಳಿದರು.

ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾದಾಗ ಸಂಸತ್‌ ಭವನದ ಮೆಟ್ಟಿಲಿಗೆ ನಮಸ್ಕರಿಸಿ ಒಳಹೋದರು. ಆದರೆ 10 ವರ್ಷಗಳಲ್ಲಿ ಇಡೀ ಸಂಸತ್‌ ವ್ಯವಸ್ಥೆಯನ್ನು ಬುಡಮೇಲು ಮಾಡಿದರು. ಪ್ರಜಾಪ್ರಭುತ್ವದ ವಿನಾಶಕ್ಕೆ ಅಡಿಪಾಯ ಹಾಕಲು ಹೊರಟರು. ಈಗ ಸಂವಿಧಾನಕ್ಕೆ ನಮಸ್ಕರಿಸಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಸಂವಿಧಾನ ರಕ್ಷಣೆಗೆ ಪ್ರಬಲವಾದ ಸಂಘಟನೆಯನ್ನು ರೂಪಿಸಲು ಯೋಚಿಸಲಾಗಿದೆ ಎಂದು ತಿಳಿಸಿದರು.

RELATED ARTICLES

Latest News