Friday, November 7, 2025
Homeರಾಷ್ಟ್ರೀಯ | Nationalಹೈಡ್ರೋಜನ್ ಬಾಂಬ್ ಠುಸ್ ಪಟಾಕಿ : ರಾಜಕೀಯಕ್ಕೆ ಸೀಮಿತವಾದ ರಾಹುಲ್ ಗಾಂಧಿ ಆರೋಪ

ಹೈಡ್ರೋಜನ್ ಬಾಂಬ್ ಠುಸ್ ಪಟಾಕಿ : ರಾಜಕೀಯಕ್ಕೆ ಸೀಮಿತವಾದ ರಾಹುಲ್ ಗಾಂಧಿ ಆರೋಪ

ನವದೆಹಲಿ,ನ.7: ರಾಹುಲ್ ಗಾಂಧಿ ಮಾಡಿರುವ ಆರೋಪಗಳ ಕುರಿತಂತೆ ಮಾಧ್ಯಮಗಳು ತನಿಖೆಯನ್ನು ಆರಂಭಿಸಿದ್ದು, ಅದರಲ್ಲಿ ಕೆಲವು ರಾಜಕೀಯ ಪ್ರೇರಿತ ಎಂಬುದು ರುಜುವಾತುವಾಗುತ್ತಿದೆ. ಹರಿಯಾಣದ ಹಲವು ಭಾಗಗಳಲ್ಲಿ ರಾಹುಲ್ ಗಾಂಧಿಯವರು ನೀಡಿದ್ದ ದಾಖಲೆಗಳನ್ನು ಹಿಡಿದು ಆ ಸ್ಥಳಗಳಿಗೆ ಭೇಟಿ ನೀಡಿದಾಗ ಕೆಲವರನ್ನು ಟಾರ್ಗೆಟ್ ಮಾಡಿ, ಸುಳ್ಳು ಆರೋಪಗಳನ್ನು ಮಾಡಿರುವುದು ಗೊತ್ತಾಗಿದೆ.

ರಾಹುಲ್ ಗಾಂಧಿಯವರು ಪತ್ರಿಕಾಗೋಷ್ಠಿ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಹೈಡ್ರೋಜನ್ ಬಾಂಬ್ ಲೋಡ್ ಆಗುತ್ತಿದೆಯೆಂದು ಟ್ರೋಲ್ ಮಾಡಲಾಗಿತ್ತು. ಆದರೆ ಇದು ಠುಸ್ ಪಟಾಕಿಯೆಂದು ಅಲ್ಲಿನ ಜನರು ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ವರ್ಷ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದ್ದರಿಂದ ಹತಾಷೆಯಲ್ಲಿ ಈ ರೀತಿಯ ಸುಳ್ಳುಗಳನ್ನು ಹೇಳುತ್ತಿದ್ದಾರೆಂದು ಅಲ್ಲಿನ ಕೆಲ ಗ್ರಾಮಸ್ಥರು ಟೀಕಿಸಿದ್ದಾರೆ.
ರಾಹುಲ್ ಅವರ ಆರೋಪಗಳನ್ನು ಬ್ರೆಜಿಲ್ನ ರೂಪದರ್ಶಿ ರಾಜಕೀಯ ನಾಟಕ ಎಂದು ಟೀಕಿಸಿದ ಬೆನ್ನಲ್ಲೇ ಕೆಲ ಮಾಧ್ಯಮಗಳು ನಡೆಸಿದ ತನಿಖೆಯಲ್ಲಿ ಅದು ಸತ್ಯ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಹರಿಯಾಣದ ಪಲ್ವಾಲ್ ಹೊಡಾಲ್ ಮತ್ತು ಸೋನೆಪತ್ ಜಿಲ್ಲೆಗಳಲ್ಲಿ ನಡೆಸಿದ ಸರ್ವೆಯಲ್ಲಿ ವರದಿಗಾರರು ಕೆಲವರನ್ನು ಸಂದರ್ಶಿಸಿದ್ದಾಗ, ಕೆಲ ಮಹಿಳೆಯರು ನಾವು ಅಧಿಕೃತ ಗುರುತಿನ ಚೀಟಿ ಹೊಂದಿದ್ದೇವೆ ಎಂದಿದ್ದಾರೆ. ಇನ್ನು ಒಂದೇ ಕಡೆ 22 ಭಾರಿ ಓಟು ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಸಮಜಾಯಿಸಿ ನೀಡಿರುವ ಬಿಜೆಪಿ ಜಿಲ್ಲಾ ಪರಿಷತ್ ಉಪಾಧ್ಯಕ್ಷ ಉಮೇಶ್ ಗುಧ್ರಾನ, ನಮದ್ದು ಅವಿಭಕ್ತ ಕುಟುಂಬ 66 ಮಂದಿ ಒಂದೇ ಮನೆಯಲ್ಲಿದ್ದಾರೆ. ಇದಲ್ಲದೆ ಇದೇ ಗ್ರಾಮದಲ್ಲಿ ಕಳೆದ 150 ವರ್ಷಗಳಿಂದ ನಾಲ್ಕು ತಲೆಮಾರಿನಿಂದ 100 ಕ್ಕೂ ಹೆಚ್ಚು ಮಂದಿ ಒಂದೇ ಮನೆಯಲ್ಲಿ ವಾಸಿಸುತ್ತಿರುವುದು ಹೇಳಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರುಗಳು ಒಂದೇ ತರ ಇರುವುದರಿಂದ ಅನುಮಾನದಿಂದ ಆರೋಪಗಳನ್ನು ಮಾಡಲಾಗಿದೆ. ವಿಶೇಷವೆಂದರೆ 150 ಮನೆಯಲ್ಲೇ ಇಷ್ಟೊಂದು ಮತದಾರರು ಇದ್ದಾರೆಂದು ಖಾತ್ರಿಯಾಗಿದೆ.
ಇನ್ನೂ ಮನೆ ಸಂ. 265 ರಲ್ಲೂ ಇದೇ ರೀತಿಯಲ್ಲಿ ರಾಮು ಸೌರ್ಹಿತ್ ಹೊಂದಿದ್ದ 30 ಎಕರೆ ಜಮೀನಿನಲ್ಲಿ ಈಗ ಅವರ ಕುಟುಂಬಸದಸ್ಯರು ವಾಸವಾಗಿದ್ದು, ಅಲ್ಲಿ 500ಕ್ಕೂ ಹೆಚ್ಚು ಜನರಿದ್ದಾರೆ ಮತ್ತು ಒಂದೇ ವಿಳಾಸವಿದೆ. ರಾಹುಲ್ಗಾಂಧಿಯವರ ದಿಕ್ಕು ತಪ್ಪಿಸಲಾಗಿದೆಯೆಂದು ಸ್ಥಳೀಯರು ವ್ಯಂಗ್ಯವಾಡಿದ್ದಾರೆ. ಇದಲ್ಲದೇ ಕೆಲವು ಮಹಿಳೆಯರ ಗುರುತಿನ ಚೀಟಿ ಸರಿಯಾಗಿದೆ ಆದರೆ, ಪತ್ರಿಕಾಗೋಷ್ಠಿಯಲ್ಲಿ ತೋರಿಸಿದ ವಿಳಾಸ, ಹೆಸರು ಒಂದೇ ಆಗಿದ್ದರೂ ಪೋಟೋ ಮಾತ್ರ ಬೇರೆಯವರದ್ದು ತೋರಿಸಲಾಗಿದೆಯೆಂದು ಹೇಳಲಾಗಿದೆ.

ಬಿಹಾರ ಚುನಾವಣೆ ಸಂದರ್ಭದಲ್ಲಿ ಈ ರೀತಿ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಕಳೆದ ಹಲವು ಚುನಾವಣೆಗಳಲ್ಲಿ ಸುಳ್ಳುಗಳನ್ನು ಅಪ ಪ್ರಚಾರ ಮಾಡಿ ಸೋತ ನಂತರವೂ ಈಗ ಹೊಸದಾಗಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆಂದು ಹರಿಯಾಣ ಬಿಜೆಪಿ ಮಾದ್ಯಮಗಳ ತನಿಖಾ ವರದಿಯನ್ನು ನೋಡಿ ಟೀಕಿಸಿದ್ದಾರೆ.

RELATED ARTICLES

Latest News