Saturday, April 19, 2025
Homeಜಿಲ್ಲಾ ಸುದ್ದಿಗಳು | District Newsರಾಯಚೂರು / Raichurರಾಯಚೂರು : ತಡೆಗೋಡೆಗೆ ಬೊಲೆರೋ ಡಿಕ್ಕಿ ಹೊಡೆದು ಕುರಿ ಖರೀದಿಗೆ ಹೋಗುತ್ತಿದ್ದ ನಾಲ್ವರ ಸಾವು

ರಾಯಚೂರು : ತಡೆಗೋಡೆಗೆ ಬೊಲೆರೋ ಡಿಕ್ಕಿ ಹೊಡೆದು ಕುರಿ ಖರೀದಿಗೆ ಹೋಗುತ್ತಿದ್ದ ನಾಲ್ವರ ಸಾವು

Raichur: Four people die after Bolero crashes into barrier

ರಾಯಚೂರು, ಏ.18- ಕುರಿಗಳ ಖರೀದಿಗೆ ಹೋಗುತ್ತಿದ್ದ ಬೊಲೆರೋ ವಾಹನ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಗಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗಿನ ಜಾವ ನಡೆದಿದೆ. ಮೃತರನ್ನು ತೆಲಂಗಾಣದ ಹಿಂದೂಪುರ ನಿವಾಸಿಗಳಾದ ನಾಗರಾಜ್, ಸೋಮ, ನಾಗಭೂಷಣ ಮತ್ತು ಮುರಳಿ ಎಂದು ಗುರುತಿಸಲಾಗಿದೆ.

ಕುರಿಗಳನ್ನು ಖರೀದಿಸುವ ಸಲುವಾಗಿ ಹಿಂದೂಪುರದಿಂದ ಶಹಾಪುರ ಸಂತೆಗೆ ನಾಲ್ವರು ಬೊಲೆರೋ ಪಿಕಪ್ ವಾಹನದಲ್ಲಿ ಹೋಗುತ್ತಿದ್ದರು. ಈ ವಾಹನ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ ಬಳಿ ಇಂದು ಬೆಳಗಿನ ಜಾವ 2ಗಂಟೆ
ಸುಮಾರಿನಲ್ಲಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.

ಸುದ್ದಿ ತಿಳಿದು ಗಟ್ಟೂರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ, ನಾಲ್ವರ ಮೃತದೇಹಗಳನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಿ, ಮೃತರ ಕುಟುಂಬಸ್ಥರಿಗೆ ವಿಷಯ ತಿಳಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News