Wednesday, July 23, 2025
Homeರಾಜ್ಯರಾಯಚೂರು : ಊಟದ ನಂತರ ಹೊಟ್ಟೆ ನೋವು ಕಾಣಿಸಿಕೊಂಡು ಒಂದೇ ಕುಟುಂಬದ ಮೂವರ ಸಾವು

ರಾಯಚೂರು : ಊಟದ ನಂತರ ಹೊಟ್ಟೆ ನೋವು ಕಾಣಿಸಿಕೊಂಡು ಒಂದೇ ಕುಟುಂಬದ ಮೂವರ ಸಾವು

Raichur: Three members of a family die after experiencing stomach pain after eating

ರಾಯಚೂರು,ಜು.22- ಕಳೆದ ರಾತ್ರಿ ಊಟ ಸೇವಿಸಿದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡು ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ರಾಯ ಚೂರು ಜಿಲ್ಲೆ ಸಿರವಾರ ತಾಲೂಕಿನ ಕೆ.ತಿಮಾಪುರ ಗ್ರಾಮದಲ್ಲಿ ನಡೆದಿದೆ.

ಕಳೆದ ರಾತ್ರಿ ಅವಿಭಕ್ತ ಕುಟುಂಬ ಸದಸ್ಯರು ಊಟ ಮಾಡಿ ಮಲಗಿದ್ದಾರೆ. ಮುಂಜಾನೆ 2 ಗಂಟೆ ಸಂದರ್ಭದಲ್ಲಿ ಒಬ್ಬರ ನಂತರ ಒಬ್ಬರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ.ನಂತರ ಎಲ್ಲರು ಸ್ಥಳೀಯ ಆಸ್ಪತ್ರೆಗೆ ತೆರಳಿದಾಗ ಚಿಕಿತ್ಸೆ ವೇಳೆ ಮನೆ ಮುಂಜಾನೆ 5ರ ವೇಳೆಗೆ ಮನೆಯ ಯಜಮಾನ ರಮೇಶ್‌ (35) ಮತ್ತು ಅವರ ಪುತ್ರಿ ನಾಗಮ(8) ಮೃತಪಟ್ಟಿದ್ದಾರೆ.

ತೀವ್ರ ಅಸ್ವಸ್ಥಗೊಂಡಿದ್ದ ಮತ್ತೊಬ್ಬಳು ಪುತ್ರಿ ದೀಪಾ(6) ಎಂಬ ಬಾಲಕಿಯನ್ನು ರಿಮ್ಸೌ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ ಸದ್ಯ ರಮೇಶ್‌ ಅವರ ಪತ್ನಿ ಪದಾ ಅವರನ್ನು ರಿಮ್ಸೌಗೆ ಮತ್ತಿಬ್ಬರು ಮಕ್ಕಳಾದ ಕೃಷ್ಣ, ಚೈತ್ರಾಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಕುಟುಂಬದವರೆಲ್ಲ ರಾತ್ರಿ ಚವಳಿಕಾಯಿ ಪಲ್ಯ, ರೊಟ್ಟಿ, ಅನ್ನ, ಸಾಂಬಾರ್‌ ಸೇವನೆ ಮಾಡಿದ್ದರು. ಊಟ ಮಾಡಿ ಮಲಗಿದ್ದ 6 ಜನರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಈ ಘಟನೆ ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದೆ. ಕವಿತಾಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಆರೋಗ್ಯ ಇಲಾಖೆ ಸಿಬ್ಬಂದಿ ಕೂಡ ಆಗಮಿಸಿ ಆಹಾರದ ಸ್ಯಂಪಲ್‌ ಪಡೆದು ಪ್ರಯೋಗಾಲಕ್ಕೆ ಕಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಯುತ್ತಿದ್ದು ,ರಮೇಶ್‌ ಅವರು ತಮ ಪತ್ನಿ ಪದಾ ಹಾಗು ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳ ಜೊತೆ ವಾಸವಾಗಿದ್ದರು.

RELATED ARTICLES

Latest News