Sunday, August 31, 2025
Homeಜಿಲ್ಲಾ ಸುದ್ದಿಗಳು | District Newsರಾಯಚೂರು : ಗಣೇಶ ಮೆರವಣಿಗೆ ವೇಳೆ ವಿದ್ಯುತ್‌ ಸ್ಪರ್ಶಿಸಿ ಯುವಕ ಸಾವು

ರಾಯಚೂರು : ಗಣೇಶ ಮೆರವಣಿಗೆ ವೇಳೆ ವಿದ್ಯುತ್‌ ಸ್ಪರ್ಶಿಸಿ ಯುವಕ ಸಾವು

Raichur: Youth dies after getting electrocuted during Ganesh procession

ರಾಯಚೂರು, ಆ.31- ಗಣೇಶಮೂರ್ತಿ ಮೆರವಣಿಗೆ ವೇಳೆ ವಿದ್ಯುತ್‌ ತಂತಿ ತಾಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಗುಟ್ಟುಬಿಚ್ಚಾಲಿಯಲ್ಲಿ ನಡೆದಿದೆ.ನರಸಿಂಹ (22) ಮೃತ ದುರ್ದೈವಿ.

ಬೊಲೆರೋ ವಾಹನದಲ್ಲಿ ಗಣೇಶಮೂರ್ತಿಯನ್ನಿರಿಸಿ ವಿಸರ್ಜನೆಗಾಗಿ ಹನುಮಾಪುರ ಬಳಿಯ ರಾಜೊಳ್ಳಿಬಂಡಾದಲ್ಲಿ ತೆರಳುವಾಗ ರಸ್ತೆ ಮಧ್ಯೆ ಹಾದು ಹೋಗಿದ್ದ ವಿದ್ಯುತ್‌ ತಂತಿ ನರಸಿಂಹನಿಗೆ ತಾಗಿದೆ.

ವಿದ್ಯುತ್‌ ಸ್ಪರ್ಶಿಸುತ್ತಿದ್ದಂತೆ ನರಸಿಂಹನ ಪಕ್ಕದಲ್ಲಿದ್ದ ಕೆಲವರು ವಾಹನದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಆದರೆ, ನರಸಿಂಹ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯರಗೇರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News