ಬೆಂಗಳೂರು, ಏ.3-ನಗರದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಬೆಂಗಳೂರಿನ ನಾನಾ ಭಾಗಗಳಲ್ಲಿ ಮಳೆ ಆಗಿದ್ದು,ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಜನರಿಗೆ ತಂಪು ನೀಡಿದೆ. ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ವಾಯುಭಾರ ಕುಸಿತಗೊಂಡು ಮಳೆ ಸುರಿದಿದೆ. ಇನ್ನೂ ಎರಡು ಮೂರು ದಿನಗಳ ಕಾಲ ಮಳೆ ಬೀಳುವ ಸಾಧ್ಯತೆಯಿದೆ.
ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆ ಯಶವಂತಪುರ, ಜಯನಗರ, ಕೆ.ಆರ್‌ಪುರಂ ಸೇರಿದಂತೆ ಹಲವಾರು ಕಡೆ ಸುಮಾರು ಅರ್ಧಗಂಟೆ ಕಾಲ ರಸ್ತೆಯಲ್ಲಿ ನೀರು ನಿಂತು ಪ್ರಯಾಣಿಕ ಸಾಗಿದ ಘಟನೆ ನಡೆದಿದೆ.
ರಾಜ್ಯದ ನಾನಾ ಭಾಗಗಳಲ್ಲೂ ಮಳೆಯಾಗಿದ್ದು, ಭೂಮಿ ತಂಪಾಗಿದೆ.ರಾಜಧಾನಿಯಲ್ಲಿ ಬೆಳಿಗ್ಗೆ ವರುಣನ ಆಗಮನ ಜನರಿಗೆ ಖುಷಿ ನೀಡಿದೆ. ಕೆಲವವರು ಮಳೆಯಲ್ಲೇ ನೆನೆದು ಸಂಚರಿಸುತ್ತಿದ್ದದು ಕಂಡುಬಂದಿತು. ಒಟ್ಟಾರೆ ಗರಿಷ್ಠ 32 ಡಿಗ್ರಿ ತಾಪಮಾನ ತಲುಪಿದ್ದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರುವುದರಿಂದ ತಾಪಮಾನ ಕುಸಿದಿದ್ದು, ತಂಪಾದ ವಾತಾವರಣ ತಂದಿದೆ.