ಬೆಂಗಳೂರು, ಮೇ 19– ನಗರದಲ್ಲಿ ಮಳೆ ಅನಾಹುತಕ್ಕೆ ಮತ್ತೊಂದು ಅಮಾಯಕ ಜೀವ ಬಲಿಯಾಗಿದೆ. ಮಳೆ ಅನಾಹುತದಲ್ಲಿ ಜೀವ ಕಳೆದುಕೊಂಡ ಮಹಿಳೆಯನ್ನು ಲ್ಯಾಪ್ ಸ್ಟೋನ್ ಸಂಸ್ಥೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುವ ಶಶಿಕಲಾ (38) ಎಂದು ಗುರುತಿಸಲಾಗಿದೆ.
ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಸಂದ್ರದಲ್ಲಿರುವ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ನಿನ್ನೆ ರಾತ್ರಿಯಿಡಿ ಸುರಿದ ಮಳೆಯಿಂದಾಗಿ ತೇವವಾಗಿದ್ದ ಕಂಪೌಂಡ್ ಏಕಾಏಕಿ ಕುಸಿದುಬಿತ್ತು.
ಈ ಸಂದರ್ಭದಲ್ಲಿ ಶಶಿಕಲಾ ಅವರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡರು ತಕ್ಷಣ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳ ಹಾಗೂ ಮಹದೇವಪುರ ಪೊಲೀಸರು ಅವಶೇಷಗಳಡಿ ಸಿಲುಕಿಕೊಂಡಿದ್ದ ಆಕೆಯನ್ನು ಹೊರತೆಗೆದರಾದರೂ ಅವರು ಆಗಾಗಲೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
- ವೈಜಿ ಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರ ಸಾವು
- 2 ವರ್ಷ ಪೂರೈಸಿದ ಸಂಭ್ರಮದಲ್ಲಿ ಗ್ಯಾರಂಟಿ ಸರ್ಕಾರ, ಪ್ರತಿಪಕ್ಷ ಸಾಧಿಸಿದ್ದೇನು..?
- ಮಳೆ ಅನಾಹುತ ಪ್ರದೇಶಗಳಿಗೆ ಸಿಬ್ಬಂದಿ ದೌಡು
- ಸರ್ಕಾರದ ಸಾಧನೆಗೆ ಹಗರಣಗಳ ವೇದನೆ
- ಮಳೆ ನೀರಿಗೆ ಮುಳುಗಿದ ಬ್ರಾಂಡ್ ಬೆಂಗಳೂರು, ಡಿಸಿಎಂ ಡಿಕೆಶಿಯವರು ಏನಂದ್ರು..?