ಕೋಟಾ,ಅ.31- ರಾಜಸ್ತಾನ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವ್ಯಕ್ತಿಯೊಬ್ಬರನ್ನು ವಂಚನೆ ಆರೋಪದ ಮೇಲೆ ಬಂಧಿಸಲಾಗಿದೆ. ಚಿನ್ನಾಭರಣ ವ್ಯಾಪಾರಿ ಮತ್ತು ಪನ್ವಾರ್ ನಿವಾಸಿ ದೀಪೇಶ್ ಸೋನಿ (32) ರಾಜಸ್ಥಾನದ ಜಲಾವರ್‍ನ ಖಾನ್‍ಪುರ ವಿಧಾನಸಭಾ ಕ್ಷೇತ್ರದಿಂದ ಸ್ರ್ಪಧಿಸಲು ಎಎಪಿ ಟಿಕೆಟ್ ಪಡೆದಿದ್ದಾರೆ.
ಪನ್ವಾರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ದಿನೇಶ್ ಶರ್ಮಾ ಮಾತನಾಡಿ, ಸೋನಿ ಆಗಾಗ್ಗೆ ಹೈದರಾಬಾದ್‍ಗೆ ವ್ಯಾಪಾರ ಪ್ರವಾಸಗಳಿಗೆ ಭೇಟಿ ನೀಡುತ್ತಿದ್ದರು ಮತ್ತು ಅ.26 ರಂದು ಹೈದರಾಬಾದ್‍ಗೆ ತೆರಳಿದ ಅವರ ಮೊಬೈಲ್ ಸ್ತಬ್ಧಗೊಂಡಿದೆ ಎಂದು ಅವರ ತಂದೆ ದೂರು ದಾಖಲಿಸಿದ್ದರು ಎಂದು ತಿಳಿಸಿದ್ದಾರೆ.
ಸೋನಿ ಅವರ ಮೊಬೈಲ್ ಫೋನ್ ಸ್ಥಳವನ್ನು ಪತ್ತೆಹಚ್ಚುವ ಮೂಲಕ, ರಾಜಸ್ಥಾನ ಪೊಲೀಸ್ ತಂಡವು ಬಸೆರಾಬಾದ್ ತಲುಪಿದಾಗ ಅವರನ್ನು ಸ್ಥಳೀಯ ಪೊಲೀಸರು ಬಂಧಿಸಿರುವುದು ತಿಳಿದುಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸದೃಢ ಭಾರತ ನಿರ್ಮಾಣದಲ್ಲಿ ಇಂದಿರಾಗಾಂಧಿ ಪಾತ್ರ ಸ್ಮರಣಿಯ : ಖರ್ಗೆ
ಸ್ಥಳೀಯ ವ್ಯಾಪಾರಿಯೊಬ್ಬರಿಗೆ ವಂಚನೆ ಮಾಡಿದ್ದಕ್ಕಾಗಿ ಸೋನಿ ವಿರುದ್ಧ ದೂರು ದಾಖಲಾಗಿದ್ದು, ಹೈದರಾಬಾದ್‍ನ ಬಸರಾಬಾದ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ) ಮತ್ತು 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಆತನ ವಿರುದ್ಧ ಇನ್ನೂ ಎರಡು ವಂಚನೆ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಒಂದು ಕಳೆದ ವಾರ ಮತ್ತು ಇನ್ನೊಂದು ಸೆಪ್ಟೆಂಬರ್ 15 ರಂದು ದಾಖಲಾಗಿದೆಯಂತೆ.
ಕಳೆದ ವಾರ ಪಕ್ಷ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೋನಿ ಅವರನ್ನು ಖಾನ್‍ಪುರದಿಂದ ಎಎಪಿ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು.200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.