Home ಇದೀಗ ಬಂದ ಸುದ್ದಿ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗುತ್ತಿರುವುದು ದೊಡ್ಡ ಸಾಧನೆ: ರಜನೀಕಾಂತ್

ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗುತ್ತಿರುವುದು ದೊಡ್ಡ ಸಾಧನೆ: ರಜನೀಕಾಂತ್

0
ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗುತ್ತಿರುವುದು ದೊಡ್ಡ ಸಾಧನೆ: ರಜನೀಕಾಂತ್

ಚೆನ್ನೈ,ಜೂ.9- ಇತ್ತೀಚಿನ ಲೋಕಸಭಾ ಚುನಾವಣೆ ಫಲಿತಾಂಶ ಆರೋಗ್ಯ ಪ್ರಜಾಪ್ರಭುತ್ವದ ಚಿನ್ಹೆ ಎಂದು ಸೂಪರ್ ಸ್ಟಾರ್ ರಜನೀಕಾಂತ್ ವ್ಯಾಖ್ಯಾನಿಸಿದ್ದು, ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ.

ದೆಹಲಿಗೆ ತೆರಳುವ ಮುನ್ನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜವಹರಲಾಲ್ ನೆಹರೂ ಅವರ ಬಳಿಕ ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸುತ್ತಿರುವುದು ದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು.

ದೇಶದ ಜನ ಪ್ರಬಲವಾದ ಪ್ರತಿಪಕ್ಷದ ಅಗತ್ಯವಿದೆ ಎಂದು ಕೂಡ ಮತಗಳ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ ಎಂದರು. ಮುಂದಿನ 5 ವರ್ಷಗಳ ಅವ„ಯನ್ನು ಮೋದಿ ನೇತೃತ್ವ ಎನ್‍ಡಿಎ ಸರ್ಕಾರ ಪೂರ್ಣಗೊಳಿಸುವ ಭವಿಷ್ಯದ ಬಗ್ಗೆ ಪ್ರಶ್ನೆ ಎದುರಾದಾಗ ಸರ್ಕಾರ ಉತ್ತಮವಾಗಿರಬೇಕು ಎಂಬುದೇ ಜನರ ನಿರೀಕ್ಷೆಯಾಗಿದೆ ಎಂದು ಹೇಳಿದರು.