Friday, September 20, 2024
Homeರಾಜ್ಯಇನ್ನು ಮೇಲೆ ಲಿಫ್ಟಿಕ್ ಹಾಕುವವರಿಗೆ ಟಿಕೆಟ್ ಕೊಡುವುದಿಲ್ಲ

ಇನ್ನು ಮೇಲೆ ಲಿಫ್ಟಿಕ್ ಹಾಕುವವರಿಗೆ ಟಿಕೆಟ್ ಕೊಡುವುದಿಲ್ಲ

ಬೆಂಗಳೂರು,ಆ.20- ನಾವು ಜನಪರ ವಾಗಿದ್ದೇವೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಬಿಜೆಪಿ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಪ್ರಧಾನಿ ರಾಜೀವ್ ಗಾಂ„ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಇಬ್ಬರು ನಾಯಕರ ಕೊಡುಗೆಗಳನ್ನು ಸ್ಮರಿಸಿದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಬಡವರ ವಿರೋಸಿದ್ದರಾಮಯ್ಯಯಾಗಿವೆ. ನಾವು ಸಮಾನತೆ ತರುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜೀವ್‍ಗಾಂಸಿದ್ದರಾಮಯ್ಯ ಪ್ರಧಾನಿಯಾಗಿದ್ದಾಗ ದೇಶದ ಭವಿಷ್ಯ ರೂಪಿಸುವ ಯುವಕ-ಯುವತಿಯರಿಗೆ ಹಕ್ಕು ನೀಡಿದರು. ಸಾಮಾಜಿಕ ನ್ಯಾಯದ ಪರವಾಗಿದ್ದು ಎಲ್ಲರಿಗೂ ಸಮಾನ ಅವಕಾಶ ದೊರಕಿಸಬೇಕು ಎಂಬುದು ಅವರ ಆಶಯವಾಗಿತ್ತು. ಯಾವುದೇ ಜಾತಿ, ಧರ್ಮ, ಪ್ರಾದೇಶಿಕತೆ ತಾರತಮ್ಯವಿಲ್ಲದೆ ಎಲ್ಲರೂ ಭಾರತೀಯರು ಎಂಬ ಒಗ್ಗಟ್ಟಿನ ಅಗತ್ಯವಿದೆ ಎಂಬುದು ರಾಜೀವ್‍ಗಾಂಸಿದ್ದರಾಮಯ್ಯ ಅವರ ಕನಸು. ಮಹಿಳೆಯರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದು, ಜೊತೆಗೆ ಸಂವಿಧಾನ ತಿದ್ದುಪಡಿ ತರುವ ಮೂಲಕ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ನೀಡಿದರು ಎಂದು ಹೇಳಿದರು.

ಬಡವರು, ದಲಿತರು ಹಾಗೂ ಅಲ್ಪಸಂಖ್ಯಾತರ ಪರವಾಗಿ ಬಿಜೆಪಿಯವರು ಈ ವರ್ಗಗಳ ವಿರುದ್ಧವಾಗಿದ್ದು, ಶೋಷಿತರು, ಅವಕಾಶವಂಚಿತರು ಯಥಾಸ್ಥಿತಿಯಲ್ಲಿ ಉಳಿಯಬೇಕು ಎಂಬ ಧೋರಣೆ ಹೊಂದಿದ್ದಾರೆ. ಬಾಯಿ ಮಾತಿಗೆ ಬಿಜೆಪಿಯವರು ಅವಕಾಶ ವಂಚಿತರ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಕ್ರಿಯೆಯಲ್ಲಿ ಅವಕಾಶ ವಂಚಿತರ ಪರವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.
ದೇಶದಲ್ಲಿ ಇಂದು ಸಂಪರ್ಕ ಕ್ರಾಂತಿಯಾಗುತ್ತಿದೆ. ಅದಕ್ಕೆ ರಾಜೀವ್ ಗಾಂಸಿದ್ದರಾಮಯ್ಯಯವರು ಕಾರಣ. ಯುವಶಕ್ತಿಯ ಮೇಲೆ ಅವರಿಗೆ ಅಪಾರವಾದ ನಂಬಿಕೆಯಿತ್ತು ಎಂದರು.

ರಾಜೀವ್‍ಗಾಂಸಿದ್ದರಾಮಯ್ಯ ಐದು ವರ್ಷ ಮಾತ್ರ ಪ್ರಧಾನಿಯಾಗಿದ್ದರು. ಮತ್ತಷ್ಟು ದಿನ ಅವರು ಜೀವಂತವಾಗಿದ್ದು, ಅಸಿದ್ದರಾಮಯ್ಯಕಾರದಲ್ಲಿ ಮುಂದುವರೆದಿದ್ದರೆ ಮಹತ್ವದ ಬದಲಾವಣೆಗಳಾಗುತ್ತಿದ್ದವು. ಬಹಳ ಚಿಕ್ಕ ವಯಸ್ಸಿನಲ್ಲೇ ಅವರನ್ನು ಹತ್ಯೆ ಮಾಡಲಾಯಿತು ಎಂದು ವಿಷಾದಿಸಿದರು.

ದೇವರಾಜ ಅರಸು ಅವರನ್ನು ಸಾಮಾಜಿಕ ನ್ಯಾಯದ ಅ„ಕಾರ ಎಂದು ಕರೆಯಲಾಗುತ್ತದೆ. ಅವರು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟರು. ಸಮಾಜದ ಕಟ್ಟಕಡೆಯ ವರ್ಗಗಳಿಗೆ ಶಿಕ್ಷಣದ ಹಕ್ಕು ನೀಡಿದರು. ಅಶಕ್ತ ಸಮುದಾಯಗಳಿಗೆ ವಿಧಾನಸಭೆ ಚುನಾವಣೆಯಲ್ಲಿ ನಿಲ್ಲಲು ಅವಕಾಶ ಮಾಡಿಕೊಟ್ಟರು. ದೇವರಾಜ ಅರಸು ಪಕ್ಷದ ಅಧ್ಯಕ್ಷರಾಗಿದ್ದಾಗ ಜಾ-Àರ್‍ಶರೀ-ï ಅವರಿಗೆ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದರು. ಆಗ ಕಾಂಗ್ರೆಸ್ ನಾಯಕಿ ನಾಗರತ್ನಮ್ಮ ಅವರು ಜಟಕಾ ಓಡಿಸುವವರಿಗೆ ಟಿಕೆಟ್ ಕೊಟ್ಟಿದ್ದೀರ ಎಂದು ಅರಸು ಅವರನ್ನು ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ದೇವರಾಜ ಅರಸು, ಇನ್ನು ಮೇಲೆ ಲಿಫ್ಟಿಕ್ ಹಾಕುವವರಿಗೆ ಟಿಕೆಟ್ ಕೊಡುವುದಿಲ್ಲ, ಜಟಕಾ ಓಡಿಸುವವರಿಗೆ, ಕ್ಷೌರ ಮಾಡುವವರಿಗೆ ಅವಕಾಶ ಕೊಡುತ್ತೇವೆ ಎಂದು ಹೇಳಿದ್ದು ವರದಿಯಾಗಿತ್ತು ಎಂದರು.

ಅರಸು ಕಾಲದಲ್ಲಿ ಉಳುವವನೇ ಭೂಮಿ ಒಡೆಯ, ಮಲ ಹೊರುವ ಪದ್ಧತಿ ನಿಷೇಧ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದರು ಎಂದು ಹೇಳಿದರು. ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಈ ಹಿಂದೆ ಬಿಜೆಪಿಗರು 2-ಜಿ ಹಗರಣವನ್ನು ಭಾರಿ ದೊಡ್ಡದಾಗಿ ಬಿಂಬಿಸಿ ಅಪಪ್ರಚಾರ ಮಾಡಿದರು. ಈಗ 5-ಜಿ ಹರಾಜಿನಲ್ಲಿ ನಿಗದಿತ ಆದಾಯ ಬಂದಿಲ್ಲ. 60 ಸಾವಿರ ಕೋಟಿ ರೂ. ಕಿಕ್‍ಬ್ಯಾಕ್ ಹೋಗಿದೆ. ಇದರ ಬಗ್ಗೆ ಏಕೆ ತನಿಖೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಮಾಜಿ ಸಚಿವೆ ಮೋಟಮ್ಮ, ಬಿಜೆಪಿಯವರು ತಾನು ಕಳ್ಳ, ಪರರನ್ನು ನಂಬ ಎಂಬಂತೆ ವರ್ತಿಸುತ್ತಿದ್ದಾರೆ. ಅವರ ಕಾಲಾವಧಿಯಲ್ಲಿ ಸಾಕಷ್ಟು ಹಗರಣಗಳು ನಡೆದಿದ್ದವು. ಅದನ್ನು ಮುಚ್ಚಿಕೊಳ್ಳಲು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ವಿಧಾನಪರಿಷತ್‍ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮ್ಮದ್, ರಾಜೀವ್‍ಗಾಂಧಿಯವರಂತೆ ರಾಹುಲ್‍ಗಾಂಧಿ ಕೂಡ ಕಾರ್ಯಕರ್ತರ ಹಿತಚಿಂತನೆ ಮಾಡುತ್ತಾರೆ. ಮುಂದೊಂದು ದಿನ ಈ ದೇಶಕ್ಕೆ ರಾಹುಲ್‍ಗಾಂಧಿ ಪ್ರಧಾನಿಯಾಗಿಯೇ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಚಿವರಾದ ಈಶ್ವರ್‍ಖಂಡ್ರೆ, ಕೆ.ಜೆ.ಜಾರ್ಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News