Sunday, September 8, 2024
Homeಅಂತಾರಾಷ್ಟ್ರೀಯ | Internationalಭಾರತದ ಅಭಿವೃದ್ಧಿಗೆ ಮೋದಿ ಮುನ್ನುಡಿ ಬರೆದಿದ್ದಾರೆ : ಮಲ್ಹೋತ್ರಾ

ಭಾರತದ ಅಭಿವೃದ್ಧಿಗೆ ಮೋದಿ ಮುನ್ನುಡಿ ಬರೆದಿದ್ದಾರೆ : ಮಲ್ಹೋತ್ರಾ

ವಾಷಿಂಗ್ಟನ್‌, ಮೇ 30 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 10 ವರ್ಷಗಳ ಆಡಳಿತದಲ್ಲಿ ಅಭಿವದ್ಧಿಯತ್ತ ಗಮನ ಹರಿಸಿದ್ದಾರೆ ಎಂದು ಭಾರತೀಯ ಮೂಲದ ಪ್ರಭಾವಿ ಅಮೆರಿಕನ್‌ ಲೇಖಕರೊಬ್ಬರು ಹೇಳಿದ್ದಾರೆ.

ಭಾರತ ತನ್ನ ಎಲ್ಲಾ ಸವಾಲುಗಳನ್ನು ಎದುರಿಸಲು ಮೋದಿ ಸರಕಾರವೇ ಕಾರಣ. ಜನರು ಹೇಳಿಕೊಳ್ಳುವ, ವಾದಿಸುವ ಮತ್ತು ಟೀಕಿಸುವ ಎಲ್ಲಾ ವಿಷಯಗಳ ಹೊರತಾಗಿಯೂ, ಅವರು ಅಭಿವದ್ಧಿಯನ್ನು ತಲುಪಿಸಿದ್ದಾರೆ ಎಂಬುದು ವಾಸ್ತವ. ಇನ್ನೂ ಹೆಚ್ಚಿನ ಅಭಿವದ್ಧಿಯ ಅಗತ್ಯವಿದೆ ಅದನ್ನು ಅವರು ಸಾಧಿಸುತ್ತಾರೆ ಎಂದು ಪ್ರಿನ್ಸ್ ಟನ್‌ ಮೂಲದ ಭಾರತೀಯ-ಅಮೆರಿಕನ್‌ ಲೇಖಕ ರಾಜೀವ್‌ ಮಲ್ಹೋತ್ರಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮಲ್ಹೋತ್ರಾ ಅವರು ಕಳೆದ ಕೆಲವು ದಶಕಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಮಾಜದ ಪಾಶ್ಚಿಮಾತ್ಯ ಶೈಕ್ಷಣಿಕ ಅಧ್ಯಯನಕ್ಕೆ ವಿರುದ್ಧವಾಗಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.ಇತ್ತಿಚೆಗೆಸ್ನೇಕ್‌ ಇನ್‌ ದ ಗಂಗಾ; ಬ್ರೇಕಿಂಗ್‌ ಇಂಡಿಯಾ 2.0 ಎಂಬ ಕೃತಿ ರಚಿಸಿರುವ ಮಲೋತ್ರಾ ಅವರು, ಭಾರತೀಯ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಮೋದಿ ಮೂರನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬರುತ್ತಿರುವಂತೆ ತೋರುತ್ತಿದೆ ಎಂದು ಹೇಳಿದರು.

ತಮ ಎರಡು ಅವಧಿಗಳಲ್ಲಿ ಮೋದಿ ಸರ್ಕಾರವು ಸಮಾಜದ ಎಲ್ಲಾ ವರ್ಗಗಳಿಗೆ ಅನುಕೂಲವಾಗುವ ಅಭಿವದ್ಧಿಯನ್ನು ಕೈಗೊಂಡಿದೆ ಎಂದು ಹೇಳಿದರು. ಬಡವರಿಂದ ಹಿಡಿದು ಅಲ್ಪಸಂಖ್ಯಾತರವರೆಗೂ ಸಮಾಜದ ಪ್ರತಿಯೊಂದು ವಿಭಾಗವು ಪ್ರಯೋಜನ ಪಡೆದಿದೆ ಎಂದು ನೀವು ಅಂಕಿಅಂಶಗಳನ್ನು ನೋಡಬಹುದು ಎಂದಿದ್ದಾರೆ.

ಈಗ ಅವರು ರಸ್ತೆಗಳು, ಶುದ್ಧ ನೀರು, ಉತ್ತಮ ಆರೋಗ್ಯ ಸೌಲಭ್ಯಗಳು, ಆಹಾರ ಮತ್ತು ಶಿಕ್ಷಣವನ್ನು ಹೊಂದಿದ್ದಾರೆ ಎಂದು ನೀವು ಸಂಖ್ಯಾತಕವಾಗಿ ತೋರಿಸಿದಾಗ. ಆದ್ದರಿಂದ ಹಿಂದಿನ ಸರ್ಕಾರ ಬಡತನದ ವಿರುದ್ಧ ಹೋರಾಡುವ ಎಲ್ಲಾ ಘೋಷಣೆಗಳನ್ನು ಮಾಡುತ್ತಿದ್ದರೆ ಈ ಸರ್ಕಾರವು ಈಡೇರಿಸಿದೆ ಎಂದು ಜನರು ಹೇಳಬೇಕು ಎಂದರು.

ಅಂತಿಮವಾಗಿ, ಬಡ ಜನರಿಗೆ ಆರ್ಥಿಕ ಅಭಿವದ್ಧಿಯ ಅಗತ್ಯವಿದೆ ಮತ್ತು ಅದು ಈ ಸರ್ಕಾರದ ಯಶಸ್ವಿ ಕೇಂದ್ರ ಕಾರ್ಯಸೂಚಿಯಾಗಿದೆ ಎಂದು ಮಲ್ಹೋತ್ರಾ ಹೇಳಿದರು, ಮೋದಿ ತಮ ಮೂರನೇ ಅವಧಿಯಲ್ಲಿ ಭಾರತದ ಆಂತರಿಕ ವ್ಯವಹಾರಗಳಲ್ಲಿ ಹೊರಗಿನ ಶಕ್ತಿಗಳ ಹಸ್ತಕ್ಷೇಪ ಸೇರಿದಂತೆ ಹಲವಾರು ಪ್ರಮುಖ ಸವಾಲುಗಳ ಮೇಲೆ ಕೇಂದ್ರೀಕರಿಸಬೇಕು ಎಂದು ಸಲಹೆ ನೀಡಿದರು.

RELATED ARTICLES

Latest News