ನವದೆಹಲಿ, ಫೆ.21– ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ತಮ್ಮ ಜೀವನಚರಿತ್ರೆ ಚಲನಚಿತ್ರವಾಗುತ್ತಿದೆ. ಬಾಲಿವುಡ್ ನಟ ರಾಜ್ ಕುಮಾರ್ ರಾವ್ ಅವರು ಈ ಚಿತ್ರದಲ್ಲಿ ಸೌರವ್ ಗಂಗೂಲಿಯಾಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಗಂಗೂಲಿ, ನಾನು ಕೇಳಿದ ಪ್ರಕಾರ, ರಾಜ್ ಕುಮಾರ್ ರಾವ್ ನನ್ನ ಪಾತ್ರ ಮಾಡುತ್ತಿದ್ದಅರೆ. ಆದರೆ ದಿನಾಂಕಗಳ ಸಮಸ್ಯೆಗಳಿವೆ ಆದ್ದರಿಂದ ಚಲನ ಚಿತ್ರ ತೆರೆಗೆ ಬರಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದಿದ್ದಾರೆ.
ಭಾರತದ ಪರ 113 ಟೆಸ್ಟ್ ಮತ್ತು 311 ಏಕದಿನ ಪಂದ್ಯಗಳನ್ನು ಆಡಿರುವ ಎಡಗೈ ಬ್ಯಾಟ್ಸಮನ್ ಗಂಗೂಳಿ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಎಲ್ಲಾ ಸ್ವರೂಪಗಳಲ್ಲಿ 18,575 ರನ್ ಗಳಿಸಿದ್ದಾರೆ.
ಕೋಲ್ಕತಾದ ರಾಜಕುಮಾರ ನಂತರ ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳದ (ಸಿಎಬಿ) ಅಧ್ಯಕ್ಷರಾಗಿದ್ದರು ಮತ್ತು ನಂತರ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ನೇಮಕಗೊಂಡರು. 2003ರ ವಿಶ್ವಕಪ್ ಹಾಗೂ 21 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದರು. ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್. ಅವರೊಂದಿಗೆ ಬಿಸಿಸಿಐನ ತಾಂತ್ರಿಕ ಸಮಿತಿಯಲ್ಲಿಯೂ ಸೇವೆ ಸಲ್ಲಿಸಿದ್ದರು ಮತ್ತು ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾಗಿದ್ದರು.